ವೈಷ್ಣವಿ ದೇವಿ ಅವತಾರವೆತ್ತಿದ ಶುಭಾ ಪೂಂಜಾ

By Pavithra

Recommended Video

ಹೊಸ ಅವತಾರದಲ್ಲಿ ಪ್ರತ್ಯಕ್ಷವಾದ ಶುಭಾ ಪೂಂಜಾ ಹಾಗು ಪೂಜಾ ಗಾಂಧಿ | Filmibeat Kannada

ನಟಿ ಶುಭಾ ಪೂಂಜಾ ಇತ್ತೀಚಿಗೆ ಸ್ವಲ್ಪ ತೆಳ್ಳಗಾಗಿದ್ದಾರೆ. ಈ ಹಿಂದಿಗಿಂತಲೂ ಶುಭಾ ಸಪೂರ ಸುಂದರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ 'ಕೆಲವು ದಿನಗಳ ನಂತರ' ಎನ್ನುವ ಸಿನಿಮಾ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ ಶುಭಾ ಈಗ ದೇವಿಯ ಅವತಾರವೆತ್ತಿದ್ದಾರೆ.

ಹೌದು ಶುಭಾ ಪೂಂಜಾ, ವೈಷ್ಣವಿ ದೇವಿ ವೇಷದಲ್ಲಿ ಅಭಿಮಾನಿಗಳ ಮುಂದೆ ಸಜ್ಜಾಗಿದ್ದಾರೆ. 'ಹಾಸನಾಂಭ' ಸಿನಿಮಾದಲ್ಲಿ ಶುಭಾ ಪೂಂಜಾ ವೈಷ್ಣವಿ ದೇವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸದ್ಯ ಸಿನಿಮಾದ ಫೋಟೋಗಳು ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

ಶುಭಾ ಪೂಂಜಾ ಜೊತೆಯಲ್ಲಿ ನಟಿ ಪೂಜಾ ಗಾಂಧಿ ಕೂಡ ದೇವಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಷ್ಟು ದಿನಗಳ ಕಾಲ ಗ್ಲಾಮರ್ ಬೊಂಬೆಗಳಾಗಿದ್ದ ಇವರುಗಳು ಏಕಾಏಕಿ ಅಭಿಮಾನಿಗಳ ಮುಂದೆ ದೇವಿಯ ವೇಷದಲ್ಲಿ ಎಂಟ್ರಿ ಕೊಡುತ್ತಿದ್ದಾರೆ.

Shubha Pooja and Pooja Gandhi are acting in Hassanamba movie

'ಹಾಸನಾಂಬ' ಕುರಿತ ಕಥೆ ಇದಾಗಿದ್ದು ಚಿತ್ರವನ್ನು ಪುರುಷೋತ್ತಂ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಹಾಸನ ಮೂಲಕ ಪ್ರಕಾಶ್ ಅವರೇ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Shubha Pooja and Pooja Gandhi are acting in Hassanamba movie

ಸಿನಿಮಾದಲ್ಲಿ ಶುಭಾ ಜೊತೆಯಲ್ಲಿ ಪೂಜಾ ಗಾಂಧಿ ಹಾಗೂ ನವೀನ್ ಕೃಷ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಕನ್ನಡ ಕಲಾವಿದರ ದಂಡೇ ಇದ್ಯಂತೆ. ಸದ್ಯ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಲಾವಿದರು ತಮ್ಮ ಪಾತ್ರದ ಫಸ್ಟ್ ಲುಕ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Kannada actresses Shubha Pooja and Pooja Gandhi are acting in Hassanamba movie. In the film two will be seen as Devi role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X