For Quick Alerts
  ALLOW NOTIFICATIONS  
  For Daily Alerts

  ಬಡವರಿಗೆ ಆಹಾರ ಕಿಟ್ ವಿತರಿಸಿದ ನಟಿ ಶುಭಾ ಪೂಂಜಾ

  |

  ನಟಿ ಶುಭ ಪೂಂಜಾ ರಿಯಾಲಿಟಿ ಶೋ ಮುಗಿಸಿ ವಾಪಸ್ ಬರುತ್ತಿದ್ದಂತೆ ಸಾಮಾಜಿಕ ಕೆಲಸ ಶುರು ಮಾಡಿಕೊಂಡಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ರಿಯಾಲಿಟಿ ಶೋ ಅರ್ಧಕ್ಕೆ ನಿಲ್ಲಿಸಲಾಗಿಸಿದ್ದು, ಸ್ಪರ್ಧಿಗಳು ಈ ಸಂಕಷ್ಟದ ಸಮಯದಲ್ಲಿ ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುವುದಾಗಿ ಹೇಳಿದ್ದರು.

  Bigg Boss ಮನೆಯಿಂದ ಬಂದ ತಕ್ಷಣ Shubha Poonja ಮಾಡ್ತಿರೋ ಕೆಲಸ ನೋಡಿ | Filmibeat Kannada

  ನುಡಿದ ಮಾತಿನಂತೆ ಶುಭ ಪೂಂಜಾ ಈಗ ತನ್ನ ಕೆಲಸ ಶುರುಮಾಡಿಕೊಂಡಿದ್ದಾರೆ. ಲಾಕ್ ಡೌನ್ ನಿಂದ ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕಷ್ಟದಲ್ಲಿರೋರ ಸಹಾಯಕ್ಕೆ ನಟಿ ಶುಭಾ ಪೂಂಜಾ ನಿಂತಿದ್ದಾರೆ. ತನ್ನ ಹಳ್ಳಿಯ ಬಡವರಿಗೆ ಶುಭಾ ಫುಟ್ ಕಿಟ್ ಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅನೇಕರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ.

  ಅಸಭ್ಯವಾಗಿ ಮಾತನಾಡಿದ ವ್ಯಕ್ತಿಗೆ ಬುದ್ಧಿ ಹೇಳಿದ ಶುಭಾ ಪೂಂಜಾ!ಅಸಭ್ಯವಾಗಿ ಮಾತನಾಡಿದ ವ್ಯಕ್ತಿಗೆ ಬುದ್ಧಿ ಹೇಳಿದ ಶುಭಾ ಪೂಂಜಾ!

  ತನ್ನ ಸಾಮಾಜಿಕ ಕೆಲಸದ ಫೋಟೋಗಳನ್ನು ಶುಭಾ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಟೋ ಜೊತೆಗೆ ಶುಭಾ 'ಬಹಳ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿದೆ. ನನ್ನ ಮನೆಯ ಸಮೀಪದವರಿಗೆ ಆಹಾರ ಕಿಟ್ ವಿತರಿಸಿದ್ದೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ತಲುಪಿಸುವ ಪ್ರಯತ್ನ ಮಾಡುತ್ತೇನೆ. ದಯವಿಟ್ಟು ನಿಮ್ಮ ಪ್ರದೇಶದ ಜನರಿಗೆ ಸಹಾಯ ಮಾಡಿ. ದಯವಿಟ್ಟು ಪ್ರಾಣಿಗಳಿಗೆ ಆಹಾರ ನೀಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.

  ಶುಭಾ ಮಾನವೀಯ ಕೆಲಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬಳಿಕ ರಿಯಾಲಿಟಿ ಶೋ ಬಳಿಕ ಮತ್ತಷ್ಟು ಜನಪ್ರಿಯತೆ ಪಡೆದಿರುವ ಶುಭಾ ಪೂಂಜಾ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ.

  ಸ್ಯಾಂಡಲ್ ವುಡ್ ನ ಅನೇಕ ಮಂದಿ ಸಂಕಷ್ಟದ ಸಮಯದಲ್ಲಿ ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಶ್ರೀಮುರಳಿ, ಕಿಚ್ಚ ಸುದೀಪ್, ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಸೇರಿದಂತೆ ಅನೇಕರು ಕೊರೊನಾ ಸಂಕಷ್ಟದಲ್ಲಿ ನೆರವಾಗಿದ್ದಾರೆ. ಇದೀಗ ನಟ ಚಿಕ್ಕಣ್ಣ ಕೂಡ ಬಡವರಿಗೆ ಆಹಾರ ವಿತರಿಸುವ ಕೆಲಸ ಮಾಡುತ್ತಿದ್ದಾರೆ.

  English summary
  Actress Shubha Poonja distributes food for needy people in her village.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X