»   » ಶುಭಾ ಪೂಂಜಾ ಈಗ ಒಂದು ಮಗುವಿನ ತಾಯಿ

ಶುಭಾ ಪೂಂಜಾ ಈಗ ಒಂದು ಮಗುವಿನ ತಾಯಿ

Posted By:
Subscribe to Filmibeat Kannada
ಶುಭಾ ಪೂಂಜಾ ಈಗ ಒಂದು ಮಗುವಿನ ತಾಯಿ | Filmibeat Kannada

ಮೊಗ್ಗಿನ ಮನಸ್ಸಿನ ಹುಡುಗಿ ಶುಭಾ ಪೂಂಜಾ ಈಗ ಒಂದು ಮಗುವಿನ ತಾಯಿ ಈ ಮಾತನ್ನ ನಾವು ಹೇಳುತ್ತಿಲ್ಲ ಖುದ್ದು ಶುಭಾ ಅವರೇ ಹೇಳುತ್ತಿದ್ದಾರೆ. ಮೊಗ್ಗಿನ ಮನಸ್ಸಿನ ಹುಡುಗಿ ಮೊನ್ನೆಯಷ್ಟೇ ನನ್ನ ಮದುವೆ ಆಗುವ ಹುಡುಗ ಇದೇ ರೀತಿ ಇರಬೇಕು ಎಂದಿದ್ದರು. ಅಷ್ಟರಲ್ಲಿ ಆಗಲೇ ಮಗು ಹೇಗೆ ಅಂತ ತಲೆ ಕೆಡಿಸಿಕೊಳ್ಳಬೇಡಿ.

ಶುಭಾ ಪೂಂಜಾ ಹೇಳುತ್ತಿರುವುದು ತೆರೆ ಮೇಲಿನ ಸ್ಟೋರಿ ಬಗ್ಗೆ. ಹೌದು ಇದೇ ಮೊದಲ ಬಾರಿಗೆ ಶುಭಾ ಪೂಂಜಾ ಮದುವೆ ಆಗಿರುವ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮದುವೆ ಫೋಟೋ ನೋಡಿ ಗಾಬರಿ ಆಗಿದ್ದ ಅಭಿಮಾನಿಗಳಿಗೆ ಈ ಸುದ್ದಿಯೂ ಶಾಕಿಂಗ್.

ಶುಭಾ ಪೂಂಜಾ ಅಭಿನಯದ ಮುಂದಿನ ಸಿನಿಮಾದಲ್ಲಿ ಒಂದು ಮಗುವಿನ ತಾಯಿಯ ಪಾತ್ರವಂತೆ. ಈ ಪಾತ್ರವನ್ನ ಇಷ್ಟ ಪಟ್ಟು ಒಪ್ಪಿಕೊಂಡಿದ್ದಾರಂತೆ. ಹಾಗಾದರೆ ಶುಭಾ ಅಭಿನಯದ ಚಿತ್ರದ ವಿಶೇಷತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಗೂಗಲ್ ಗಾಗಿ ಒಂದು ಮಗುವಿನ ತಾಯಿ ಪಾತ್ರ

ನಟಿ ಶುಭಾ ಪೂಂಜಾ ಇದೇ ಮೊದಲ ಬಾರಿಗೆ ಒಂದು ಮಗುವಿನ ತಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿ ನಾಗೇಂದ್ರ ಪ್ರಸಾದ್ ನಿರ್ದೇಶನದ ಗೂಗಲ್ ಚಿತ್ರದಲ್ಲಿ ಶುಭಾ ಚಾಲೆಂಜಿಂಗ್ ಪಾತ್ರವನ್ನ ನಿರ್ವಹಿಸಿದ್ದಾರಂತೆ.

ವಿಭಿನ್ನ ಪಾತ್ರ ಆಯ್ಕೆ ಮಾಡಿದ ಶುಭಾ

ಕಳೆದ ಹತ್ತು ವರ್ಷಗಳಿಂದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದ ಶುಭಾ ಎಂದಿಗೂ ಇಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಗೂಗಲ್ ಚಿತ್ರದಲ್ಲಿ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವ ಕಾರಣ ಮದುವೆ ಆಗಿರುವ ಮಹಿಳೆಯಾಗಿ ತೆರೆ ಮೇಲೆ ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ.

ಸಾಕಷ್ಟು ದಿನಗಳ ನಂತರ ನಿರ್ದೇಶನ

ಚಿತ್ರಗಳಿಗೆ ಸಂಗೀತ ಹಾಗೂ ಸಂಭಾಷಣೆ ಬರೆಯುವಲ್ಲಿ ಬ್ಯುಸಿ ಆಗಿದ್ದ ನಿರ್ದೇಶಕ ಹಾಗೂ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಸಾಕಷ್ಟು ದಿನಗಳ ನಂತರ ಚಿತ್ರ ನಿರ್ದೇಶನ ಮಾಡಿದ್ದಾರೆ.

ಸ್ಟಾರ್ ಗಳು ಮೆಚ್ಚಿದ ಸಿನಿಮಾ

ಗೂಗಲ್ ಸಿನಿಮಾದ ಹಾಡುಗಳನ್ನ ನೋಡಿರುವ ಶಿವರಾಜ್ ಕುಮಾರ್ ಹಾಗೂ ದರ್ಶನ್ ಸಿನಿಮಾ ಕಥೆ ಕೇಳಿ ಚಿತ್ರವನ್ನ ನೋಡಬೇಕು ಎನ್ನುವ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಸಿನಿಮಾ ಪ್ರಚಾರ ಪ್ರಾರಂಭ ಮಾಡಿರುವ ವಿ ನಾಗೇಂದ್ರ ಪ್ರಸಾದ್ ಫೆಬ್ರವರಿ 16 ರಂದು ಚಿತ್ರವನ್ನ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

Shubha Poonja plays the role of a baby mother in Google movie.
English summary
Kannada actress Shubha Poonja plays the role of a baby mother in Google movie. Google film is directed by V Nagendra Prasad. The film is being released by the end of this month.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada