»   » 'ಭಿನ್ನ'ವಾಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಶುದ್ಧಿ ಚಿತ್ರತಂಡ

'ಭಿನ್ನ'ವಾಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ ಶುದ್ಧಿ ಚಿತ್ರತಂಡ

Posted By:
Subscribe to Filmibeat Kannada

'ಶುದ್ಧಿ' ಕಳೆದ ವರ್ಷದಲ್ಲಿ ಕನ್ನಡ ಸಿನಿಮಾ ಪ್ರೇಕ್ಷಕರ ಮೇಲೆ ಭಾರಿ ಪ್ರಭಾವ ಬೀರಿದ್ದ ಸಿನಿಮಾ. ಹಿಂಗೂ ಸಿನಿಮಾ ಮಾಡಬಹುದಾ, ಎನ್ನುವಷ್ಟರ ಮಟ್ಟಿಗೆ ಸಿನಿಮಾವನ್ನ ತೆರೆ ಮೇಲೆ ಕಟ್ಟಿಕೊಟ್ಟಿದ್ದ ನಿರ್ದೇಶಕ ಆದರ್ಶ್ ಈಶ್ವರಪ್ಪ ಮತ್ತೆ ತಮ್ಮ ತಂಡದ ಜೊತೆಯಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ.

ಈ ಹಿಂದೆಯೇ ಆದರ್ಶ ಹೇಳಿದ್ದಂತೆ 'ಶರಪಂಜರ'ದ ಛಾಯೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸಲು ಮುಂದಾಗಿದ್ದು ಸಿನಿಮಾದ ಫಸ್ಟ್ ಲುಕ್ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಭಿನ್ನ ಎನ್ನುವ ಟೈಟಲ್ ಇಟ್ಟು ಶೀರ್ಷಿಕೆಯ ಮೂಲಕವೇ ಸಿನಿಮಾದಲ್ಲಿ ವಿಭಿನ್ನವಾಗಿರುವುದನ್ನ ಹೇಳಲು ಹೊರಟಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ.

Shuddhi movie fame director Adarsh ​​is directing Bhinna movie

IPL ಬೆಟ್ಟಿಂಗ್ ಬಗ್ಗೆ ಮಾತನಾಡಿದ ಡಿ ಬಾಸ್ ದರ್ಶನ್

ನಿರ್ದೇಶಕ ಪುಟ್ಟಣ್ಣ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿರುವ ನಿರ್ದೇಶಕ ಆದರ್ಶ್ ಚಿತ್ರದಲ್ಲಿ ಏಳು ಪಾತ್ರಗಳಷ್ಟೇ ಇದ್ದು ಒಂದೇ ಒಂದು ಹಾಡು ಇಲ್ಲದಿರುವುದು ಈ ಸಿನಿಮಾದ ವಿಶೇಷ. ಶುದ್ಧಿ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಂತ್ರಜ್ಙನರೇ ಇಲ್ಲೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಕಲಾವಿದರ ಬಗ್ಗೆ ಸುಳಿವು ಬಿಟ್ಟುಕೊಡದ ನಿರ್ದೇಶಕರು ತಿಂಗಳ ಅಂತ್ಯಕ್ಕೆ ಚಿತ್ರದ ಕಲಾವಿದರ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಭಿನ್ನ, ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು ಜುಲೈ ನಲ್ಲಿ ಚಿತ್ರೀಕರಣ ಶುರುವಾಗಲಿದೆ. ಬೆಂಗಳೂರಿನ ಸುತ್ತಾ ಮುತ್ತ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದ್ದು ಕೆಲ ದೃಶ್ಯಗಳಿಗೆ ಮಾತ್ರ ಬೇರೆ ಕಡೆಗಳಲ್ಲಿ ಶೂಟ್ ಮಾಡಲಾಗುತ್ತಂತೆ. ಚಿತ್ರವನ್ನ ನಿರ್ದೇಶನ ಮಾಡುವುದರ ಜೊತೆಯಲ್ಲಿ ಸಂಕಲನವನ್ನು ಆದರ್ಶ್ ಅವರೇ ಮಾಡಲಿದ್ದಾರೆ.

Shuddhi movie fame director Adarsh ​​is directing Bhinna movie

ಸಿನಿಮಾಗೆ ಯತೀಶ್ ವೆಂಕಟೇಶ್ ಹಾಗೂ ಪರ್ಪಲ್ ಆರೋ ಫಿಲಂಸ್ ಹಣ ಹಾಕುತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಗಣೇಶ್ ಪಾಪಣ್ಣ ಹಾಗೂ ಶಶಾಂಕ್ ಪುರುಷೋತ್ತಮ್ ಜೊತೆಯಾಗಲಿದ್ದಾರೆ. ಸಂಗೀತ ಜಸ್ಸಿ ಕ್ಲಿಂಟನ್ ಮಾಡಿದ್ರೆ, ನಿತಿನ್ ಲೂಕೋಸ್ ಧ್ವನಿ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಆಂಡ್ರೋ ಆಯಿಲೋ ಭಿನ್ನ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟಿದ್ದ ಆದರ್ಶ್ ಭಿನ್ನ ಚಿತ್ರದ ಮೂಲಕ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

English summary
Shuddhi Kannada movie fame director Adarsh ​​Eshwarappa released his second film titled, Adarsh ​​is directing 'Bhinna' movie and it will start filming in July.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X