ಬಿಗ್ ಬಾಸ್, ಸುದೀಪ್ ಬಗ್ಗೆ ಶ್ವೇತಾ ಹೇಳಿದ್ದೇನು?

By Rajendra
<ul id="pagination-digg"><li class="previous"><a href="/news/actress-shweta-pandit-interview-075053.html">« Previous</a>

7. ಬಿಗ್ ಬಾಸ್ ಸೀಸನ್ 2ಗೆ ಅವಕಾಶ ಸಿಕ್ಕಿದರೆ ಹೋಗುತ್ತೀರಾ?
ಖಂಡಿತ ಹೋಗುತ್ತೇನೆ. ಆದರೆ ಸೀಸನ್ 2ರಲ್ಲಿ ಸುದೀಪ್ ಇರುವುದಿಲ್ಲ ಎಂಬುದು ನಿಜಕ್ಕೂ ಬೇಸರ ತರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಸುದಿಪ್ ಅವರೇ ಸೂಕ್ತ. ಅವರ ಗಾಂಭೀರ್ಯ, ನಿರೂಪಣಾ ಶೈಲಿ ನೋಡಿರುವ ನಮಗೆ ಆ ಸ್ಥಾನದಲ್ಲಿ ಮತ್ತೊಬ್ಬರನ್ನು ಕಲ್ಪಿಸಿಕೊಳ್ಳುವುದು ಕಷ್ಟ.

8. ಕೇಸ್ ನಂಬರ್ 18/9 ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ತಿಳಿಸಿ?
ಇದೊಂದು ಕಂಪ್ಲೀಟ್ ಟೀನೇಜ್ ಸ್ಟೋರಿ. ಮುಗ್ಧ ಹುಡುಗಿಯೊಬ್ಬಳ ಪಾತ್ರ ನನ್ನದು. ಹೈಸ್ಕೂಲು, ಕಾಲೇಜಿಗೆ ಅಡಿಯಿಟ್ಟ ಮುಗ್ಧ ಹುಡುಗಿಯರು ಹೇಗೆ ಮೋಸ ಹೋಗುತ್ತಾರೆ ಎಂಬುದೇ ಕಥಾವಸ್ತು. ಇದೊಂದು ಯೂತ್ ಕ್ರೈಂ. ಚಿತ್ರದಲ್ಲಿ ಸಿಂಧುಲೋಕನಾಥ್ ಅವರಿಗೆ ಡೈಲಾಗ್ ಪೋರ್ಷನ್ ಜಾಸ್ತಿ ಇದೆ. ನನ್ನ ಭಾಗದ ಪಾತ್ರದಲ್ಲಿ ಅರಳು ಹುರಿದಂತೆ ಪಟಪಟ ಮಾತನಾಡುತ್ತೇನೆ.

9. ರೀಮೇಕ್ ಚಿತ್ರಗಳ ಬಗ್ಗೆ ನಿಮ್ಮ ಅನಿಸಿಕೆ?
ಕೇಸ್ ನಂಬರ್ 18/9 (ತಮಿಳಿನ 'ವಜುಕ್ಕು ವೆನ್ 18/9' ರೀಮೇಕ್) ಒಪ್ಪಿಕೊಳ್ಳಲು ಒಂದೇ ಒಂದು ಕಾರಣ ಸ್ಕ್ರಿಪ್ಟ್. ಈ ಪಾತ್ರ ನನ್ನ ಜೀವನಕ್ಕೆ ತುಂಬಾ ಹತ್ತಿರವಾಗಿತ್ತು. ಆದರೆ ನಾನು ಸ್ವಮೇಕನ್ನೇ ಸಪೋರ್ಟ್ ಮಾಡ್ತೀನಿ.

Actress Shweta Pandit
10. ತೆಲುಗು ಚಿತ್ರಗಳಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆಯೇ?
'ಥಿಯೇಟರ್ ಲೋ ನಲುಗುರು' ಚಿತ್ರದ ಯಶಸ್ಸಿನ ಮೂಲಕ ತೆಲುಗಿನಲ್ಲಿ ಅವಕಾಶಗಳು ಜಾಸ್ತಿ ಬರುತ್ತಿವೆ. ಆದರೆ ತಾನು ಕನ್ನಡದಲ್ಲೇ ಹೆಚ್ಚಾಗಿ ತೊಡಗಿಕೊಳ್ಳಬೇಕೆಂದಿದ್ದೇನೆ. ಈಗಷ್ಟೇ ತಮ್ಮ ವೃತ್ತಿ ಬದುಕು ತಿರುವು ಪಡೆದುಕೊಂಡಿದೆ. ನೋಡೋಣ ಏನಾಗುತ್ತದೋ.

11. ಡ್ರೀಮ್ ರೋಲ್ ಅಂಥ ಯಾವುದಾದರೂ ಇದೆಯೇ?
ಈಗ ಬಿಡುಗಡೆಗೆ ಸಿದ್ಧವಾಗಿರುವ 'ಕೇಸ್ ನಂಬರ್ 18/9' ಚಿತ್ರದ ಪಾತ್ರವೇ ನನ್ನ ಡ್ರೀಮ್ ರೋಲ್.

12. ಯಾವ ರೀತಿಯ ಪಾತ್ರಗಳನ್ನು ಮಾಡಲು ಇಷ್ಟಪಡ್ತೀರಾ?
ಎನಿಥಿಂಗ್, ಅಭಿನಯಕ್ಕೆ ಸವಾಲೊಡ್ಡುವಂತಹ ಯಾವುದೇ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟಪಡುತ್ತೇನೆ.

13. ತಮ್ಮ ವೃತ್ತಿ ಬದುಕಿಗೆ ಸೋಷಿಯಲ್ ನೆಟ್ ವರ್ಕಿಂಗ್ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ?
ಸೋಷಿಯಲ್ ನೆಟ್ ವರ್ಕಿಂಗ್ ನಿಂದಲೇ ನನ್ನ ಕೆರಿಯರ್ ಶುರುವಾಗಿದ್ದು. ಶ್ವೇತಾ ಪಂಡಿತ್ ಅವರು ಶ್ವೇತಾ ಪಂಡಿತ್ ಆಗಿರುವುದಕ್ಕೆ ಸೋಷಿಯಲ್ ನೆಟ್ ವರ್ಕಿಂಗ್ ಕಾರಣ.

14. ತಮ್ಮ ನೆಕ್ಟ್ಸ್ ಪ್ರಾಜೆಕ್ಟ್ಸ್ ಬಗ್ಗೆ ಹೇಳಿ?
ಸದ್ಯಕ್ಕೆ ಚಿತ್ರಕಥೆಗಳನ್ನು ಕೇಳುತ್ತಿದ್ದೇನೆ. ಇನ್ನೂ ಯಾವುದನ್ನೂ ಒಪ್ಪಿಕೊಂಡಿಲ್ಲ. ಕನ್ನಡಲ್ಲೂ ಅಷ್ಟೇ ಯಾವ ಚಿತ್ರಕ್ಕೂ ಅಂಕಿತ ಹಾಕಿಲ್ಲ. ಕಥೆ ಕೇಳುತ್ತಿದ್ದೇನೆ. ಮೊದಲು 18/9 ಚಿತ್ರದ ರಿಲೀಸ್ ಗೆ ಕಾಯುತ್ತಿದ್ದೇನೆ. ಆ ಚಿತ್ರಕ್ಕೆ ಸಿಗಲಿರುವ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇನೆ.

15. ಅವಕಾಶಗಳು ಬರುತ್ತಿಲ್ಲ ಎಂಬ ಅಳುಕು ಇದೆಯೇ?
ಸುಮ್ಮನೆ ಬಂದ ಅವಕಾಶಗಳೆಲ್ಲವನ್ನೂ ಒಪ್ಪಿಕೊಳ್ಳಲು ನನಗಿಷ್ಟವಿಲ್ಲ. ನಾನು ಸದ್ಯಕ್ಕೆ ಕಥೆಯ ಆಯ್ಕೆಗೆ ಪ್ರಮುಖ ಆದ್ಯತೆ ಕೊಟ್ಟಿದ್ದೇನೆ. ಒಂದ್ಸಲ ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿವೆ. ಅವರ ನಿರೀಕ್ಷೆಯನ್ನು ಹುಸಿ ಮಾಡಬಾರದಲ್ಲವೆ?

16. ಯಾವ ಭಾಷೆಯ ಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ?
ನನಗೆ ಯಾವುದೇ ಭಾಷೆಯ ಚಿತ್ರಗಳು ಕೊಟ್ಟರು ಸರಿ ಅಭಿನಯಿಸುತ್ತೇನೆ. ನಾನು ಮೊದಲು ಭಾರತೀಯಳು. [ಬಿಗ್ ಬಾಸ್ ನಿಂದ ಹೊರನಡೆದ ಬೆಳ್ಳಕ್ಕಿ]

<ul id="pagination-digg"><li class="previous"><a href="/news/actress-shweta-pandit-interview-075053.html">« Previous</a>

More from Filmibeat

English summary
An interview with Kannada actress Shweta Pandit. Speaking about her film career, Bigg Boss Kannada experience and her future projects. She says, Instead of taking everything coming my way, I am trying to be selective and work with a good script and director.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X