»   » ಅಮ್ಮನಂತೆ ಫೇಮಸ್ ಆದ ಸಿಂಪಲ್ ಹುಡ್ಗಿಯ ಪುತ್ರಿ

ಅಮ್ಮನಂತೆ ಫೇಮಸ್ ಆದ ಸಿಂಪಲ್ ಹುಡ್ಗಿಯ ಪುತ್ರಿ

Posted By:
Subscribe to Filmibeat Kannada
ಅಮ್ಮನಷ್ಟೇ ಫೇಮಸ್ ಶ್ವೇತಾ ಶ್ರೀವಾತ್ಸವ್ ಮಗಳು | shwetha srivatsav's daughter is a star |Filmibeat Kannada

ಸ್ಟಾರ್ ಗಳಿಗೆ ಅಭಿಮಾನಿಗಳು ಇರುವುದು ಕಾಮನ್ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಟಾರ್ ಮಕ್ಕಳಿಗೂ ಕೂಡ ಅಭಿಮಾನಿಗಳು ಹುಟ್ಟುಕೊಳ್ಳುತ್ತಾರೆ. ಮಕ್ಕಳು ಹುಟ್ಟಿ ಏಳೆಂಟು ವರ್ಷಗಳ ನಂತವ ಅವರುಗಳನ್ನ ಫ್ಯಾನ್ಸ್ ಗಳು ಇಷ್ಟಪಡಲು ಆರಂಭ ಮಾಡುತ್ತಾರೆ.

ಆದರೆ ಇಲ್ಲೊಬ್ಬರು ಸ್ಟಾರ್ ಇದ್ದಾರೆ ಹುಟ್ಟಿದ 8 ತಿಂಗಳಲ್ಲಿ ಭರ್ಜರಿ ಅಭಿಮಾನಿಗಳನ್ನ ಪಡೆದುಕೊಂಡು ಫೇಮಸ್ ಆಗಿದ್ದಾರೆ. ಅಷ್ಟಕ್ಕೂ ಇವರು ಇಷ್ಟೆಲ್ಲಾ ಪ್ರಖ್ಯಾತಿ ಪಡೆದುಕೊಳ್ಳಲು ಕಾರಣ ಏನಪ್ಪಾ ಅಂದರೆ ಆಕೆಯ ಮುದ್ದಾದ ನಗು. ತನ್ನ ನಗುವುನಂದಲೇ ಈಕೆ ಎಲ್ಲರನ್ನೂ ಮೋಡಿ ಮಾಡುತ್ತಿದ್ದಾಳೆ. ನಾವು ಹೇಳುತ್ತಿರುವ ಆ ಪುಟ್ಟ ಸ್ಟಾರ್ ನಟಿ ಶ್ವೇತಾ ಶ್ರೀ ವಾತ್ಸಾವ್ ಅವರ ಪುತ್ರಿ ಅಶ್ಮಿತಾ ಶ್ರೀ ವಾತ್ಸಾವ್.

ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ತಯಾರಾದ ಶ್ವೇತಾ ಶ್ರೀವಾತ್ಸವ್:

Shweta Srivastava was created Instagram account in the name of her daughter

ಸ್ಯಾಂಡಲ್ ವುಡ್ ನ ಸಿಂಪಲ್ ಹುಡುಗಿ ನಟಿ ಶ್ವೇತಾ ಶ್ರೀ ವಾತ್ಸಾವ್ ಅವರ ಪುತ್ರಿ ಅಶ್ಮಿತಾ ಶ್ರೀ ವಾತ್ಸಾವ್ . ಅಶ್ಮಿತಾ ಜನಿಸಿ ಕೇವಲ 8 ತಿಂಗಳಷ್ಟೆ ಕಳೆದಿದೆ. ಆದರೆ ಈಕೆ ಈಗಾಗಲೇ ಇನ್‌ಸ್ಟಾಗ್ರಾಂ ನಲ್ಲಿ ಸೂಪರ್ ಸ್ಟಾರ್ ಆಗಿದ್ದಾರೆ. ಅಶ್ಮಿತಾ ಹೆಸರಿನಲ್ಲಿ ಅಕೌಂಟ್ ಇದ್ದು ಅದಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಫಾಲೋವರ್ಸ್ ಇದ್ದಾರೆ.

Shweta Srivastava was created Instagram account in the name of her daughter

ಅಶ್ಮಿತಾ ಆಟದ ವಿಡಿಯೋ ಮತ್ತು ಫೋಟೋಗಳನ್ನ ಈ ಆಕೆಯ ಅಕೌಂಟ್ ನಲ್ಲಿ ಅಪ್ಲೋಂಡ್ ಮಾಡಲಾಗುತ್ತಿದೆ. ಸಣ್ಣ ಮಗುವಿನ ಪೋಟೋ ತೆಗೆದೆರೆ ದೃಷ್ಟಿ ಆಗುತ್ತೆ ಎಂದು ನಂಬುವವರ ಮಧ್ಯೆ ಅಶ್ಮಿತಾಳ ವಿಡಿಯೋ-ಫೋಟೋ ಸಾಕಷ್ಟು ಪ್ರಖ್ಯಾತಿ ಪಡೆದುಕೊಳ್ಳುವುದರ ಜೊತೆಯಲ್ಲಿ ಅಪಾರ ಅಭಿಮಾನಿಗಳನ್ನ ಗಿಟ್ಟಿಸಿಕೊಂಡಿರುವುದು ಖುಷಿಯ ವಿಚಾರ.

English summary
Kannada actress Shweta Srivastava was created Instagram account in the name of her daughter Ashmita Srivastava. Ashmita has more than 11,000 fans in Instagram and Shwetha has shared this news with fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X