ಚಂದನ್ ಆಚಾರ್ ಮತ್ತು ಶ್ವೇತಾ ಚಂಗಪ್ಪ ಇನ್ಸ್ಟಾಗ್ರಾಮ್ ಹ್ಯಾಕ್: ದೀಪಿಕಾ ದಾಸ್ ಹೇಳಿದ್ದೇನು?

ಹ್ಯಾಕರ್ಸ್ ಗಳ ಪ್ರಮುಖ ಟಾರ್ಗೆಟ್ ಸೆಲೆಬ್ರಿಟಿಗಳು. ಇತ್ತೀಚಿಗೆ ಸಾಕಷ್ಟು ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣವನ್ನು ಹ್ಯಾಕ್ ಮಾಡಿದ್ದಾರೆ ಕಿಡಿಗೇಡಿಗಳು. ಮೊನ್ನೆ ಮೊನ್ನೆಯಷ್ಟೆ ದಿಯಾ ಸಿನಿಮಾದ ನಟಿ ಖುಷಿ ಅವರ ಇನ್ಸ್ಟಾಗ್ರಾಮ್ ಹ್ಯಾಕ್ ಆಗಿರುವ ಬಗ್ಗೆ ಬಹಿರಂಗಪಡಿಸಿದ್ದರು. ಈಗ ಹ್ಯಾಕರ್ಸ್ ಗಳ ಕಣ್ಣು ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಬಿದ್ದಿದೆ.

Recommended Video

ಚಿರು ಅನಾರೋಗ್ಯದ ಅಂತೆ-ಕಂತೆಗಳಿಗೆ ಕುಟುಂಬದವರು ಏನ್ ಹೇಳ್ತಾರೆ? | Chiranjeevi Sarja Family About his Health

ಬಿಗ್ ಬಾಸ್ ಸ್ಪರ್ಧಿಗಳಾದ ಚಂದನ್ ಆಚಾರ್ ಮತ್ತು ಶ್ವೇತಾ ಚಂಗಪ್ಪ ಇನ್ಸ್ಟಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಚಂದನ್ ಆಚಾರ್ ಅವರ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ನಟಿ ದೀಪಿಕಾ ದಾಸ್ ಹೇಳಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವು ದೀಪಿಕಾ "ಹ್ಯಾಕರ್ಸ್ ಕೇಲವರ ಖಾತೆಯಗಳನ್ನ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಚಂದನ್ ಆಚಾರ್ ಪ್ರೊಫೈಲ್ ಬಳಸಿಕೊಳ್ಳಲಾಗಿದೆ. ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಅವರ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ ಇನ್ ಫೋ ಕಾಪಿರೈಟ್ ಹೆಸರಿನಲ್ಲಿ ಪೋಸ್ಟ್ ಸಂದೇಶ ಕಳುಹಿಸಲಾಗುತ್ತಿದೆ. ಇದು ಮೊದಲು ಚಂದನ್ ಆಚಾರ್ ಹೆಸರಿನಲ್ಲಿತ್ತು. ನಿಮ್ಮ ಯಾವುದೆ ವಿವರಗಳನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

Shwetha Changappa And Chandan Achar Instagram Account Hacked

ಇನ್ನೂ ಶ್ವೇತಾ ಚಂಗಪ್ಪ ಅವರ ಇನ್ಸ್ಟಾಗ್ರಾಮ್ ಖಾತೆ ಕೂಡ ಹ್ಯಾಕ್ ಆಗಿದೆ. ಈ ಬಗ್ಗೆ ನಟಿ ಶ್ವೇತಾ ಚಂಗಪ್ಪ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. "ನನ್ನ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗುವುದರಿಂದ ನಾನು ಬಚಾವ್ ಆಗಿದ್ದೀನಿ. ನಿಮಗೆ ಯಾವುದಾದರು ಸಂದೇಶ ಬಂದರೆ ಹುಷಾರಾಗಿರಿ" ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Actress Shwetha Changappa and Chandan Achar instagram account hacked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X