ಆ ಕರಾಳ 21 ದಿನ: ಮಜಾ ಟಾಕೀಸ್ ರಾಣಿ ಹಂಚಿಕೊಂಡ ಕೊರೊನಾ ಅನುಭವ

ಕೊರೊನಾ ಎರಡನೇ ಅಲೆ ಅತ್ಯಂತ ಪ್ರಬಲವಾಗಿದೆ. ಕಳೆದ ವರ್ಷ ಕೊರೊನಾ ಸೋಂಕಿತರಿಗೆ ಬರುತ್ತಿದ್ದ ರೋಗಲಕ್ಷಣಕ್ಕೂ ಈ ಬಾರಿಯ ರೋಗಲಕ್ಷಣಕ್ಕೂ ದೊಡ್ಡ ವ್ಯತ್ಯಾಸವಿದೆ. ಕೊರೊನಾ ಎರಡನೇ ಅಲೆಯಲ್ಲಿ ವೈರಸ್‌ ಸೋಂಕಿತರು ಹೆಚ್ಚು ಕಷ್ಟಗಳನ್ನು, ದೈಹಿಕ ಬಾಧೆಗಳನ್ನು ಅನುಭವಿಸುತ್ತಿದ್ದಾರೆ.

ಕನ್ನಡದ ಹಲವು ಸೆಲೆಬ್ರಿಟಿಗಳು ಇತ್ತೀಚೆಗೆ ಕೊರೊನಾ ವೈರಸ್‌ಗೆ ತುತ್ತಾಗಿದ್ದು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಮಜಾ ಟಾಕೀಸ್‌ನ ರಾಣಿ ಪಾತ್ರದಿಂದ ಖ್ಯಾತಿ ಗಳಿಸಿರುವ ನಟಿ ಶ್ವೇತಾ ಚಂಗಪ್ಪ ತಾವು ಹಾಗೂ ತಮ್ಮ ಕುಟುಂಬ ಕೊರೊನಾದಿಂದ ಅನುಭವಿಸಿದ ಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದ ಶ್ವೇತಾ ಚಂಗಪ್ಪ 21 ದಿನಗಳ ಕಾಲ ಕೊರೊನಾದಿಂದ ಅನುಭವಿಸಿದ ದೈಹಿಕ, ಮಾನಸಿಕ ಹಿಂಸೆಯ ಬಗ್ಗೆ ಮಾತನಾಡಿದ್ದಾರೆ. 'ತಿಂಗಳ ಆರಂಭದಲ್ಲಿ ನನಗೆ ತುಸು ನೆಗಡಿ,ಜ್ವರ ಕಾಣಿಸಿಕೊಂಡಿತು. ಮನೆಯಲ್ಲಿ ಒಂದೂವರೆ ವರ್ಷದ ಮಗು ಇದ್ದಿದ್ದರಿಂದ ನಾನು ಕೂಡಲೇ ಐಸೋಲೇಷನ್ ಆದೆ. ಆದರೆ ಜ್ವರ ಬಿಡಲಿಲ್ಲ. ಹಾಗಾಗಿ ನಾನು, ನನ್ನ ಪತಿ ಹಾಗೂ ಅಮ್ಮ ಕೊರೊನಾ ಟೆಸ್ಟ್‌ಗೆ ಒಳಗಾದೆವು. ವರದಿಯಲ್ಲಿ ನನಗೆ ಹಾಗೂ ಅಮ್ಮನಿಗೆ ಕೊರೊನಾ ಪಾಸಿಟಿವ್ ಆಗಿರುವುದು ಗೊತ್ತಾಯಿತು' ಎಂದು ಕೊರೊನಾ ಬಂದ ಆರಂಭದ ದಿನ ನೆನಪಿಸಿಕೊಂಡರು ಶ್ವೇತಾ ಚಂಗಪ್ಪ.

ಮಗುವಿಗೆ ತೀವ್ರ ಜ್ವರ ಆರಂಭವಾಯಿತು: ಶ್ವೇತಾ ಚಂಗಪ್ಪ

ಮಗುವಿಗೆ ತೀವ್ರ ಜ್ವರ ಆರಂಭವಾಯಿತು: ಶ್ವೇತಾ ಚಂಗಪ್ಪ

'ಕೂಡಲೇ ನನ್ನ ಪತಿಯನ್ನು ಹಾಗೂ ಪುಟ್ಟ ಮಗುವನ್ನು ಸಂಬಂಧಿಗಳ ಮನೆಗೆ ಕಳಿಸಲು ನಿರ್ಧರಿಸಿದೆವು ಆದರೆ ಅದು ಬೇಡವೆಂದರು ಪರಿಚಿತ ವೈದ್ಯರು. ಸರಿ ಎಂದು ಮನೆಯಲ್ಲಿಯೇ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಮಾಡಿಕೊಂಡು ಇದ್ದೆವು. ಆದರೆ ಮಾರನೇಯ ದಿನವೇ ನನ್ನ ಪುಟ್ಟ ಮಗನಿಗೆ ತೀವ್ರ ಜ್ವರ ಕಾಡಲಾರಂಭಿಸಿತು. ನನಗೆ ಜಂಘಾಬಲವೇ ಉಡುಗಿ ಹೋಯಿತು. ಮಗುವಿಗೆ ತೀವ್ರ ಜ್ವರ ಆದರೆ ನಾನಾಗಲಿ, ಅಮ್ಮನಾಗಲಿ ಮಗುವನ್ನು ಮುಟ್ಟುವಂತಿಲ್ಲ ಬಹಳ ಕೆಟ್ಟ ಪರಿಸ್ಥಿತಿ ಅದು. ನಾನಂತೂ ಮಾನಸಿಕವಾಗಿ ತೀವ್ರವಾಗಿ ಕುಗ್ಗಿಬಿಟ್ಟಿದ್ದೆ. ನಮ್ಮಿಂದಲೇ ಅವನು ಔಷಧ ತೆಗೆದುಕೊಳ್ಳುವುದಿಲ್ಲ ಇನ್ನು ಪತಿಯಿಂದ ತೆಗೆದುಕೊಳ್ಳುವುದು ಇನ್ನೂ ಭಾವುಕವಾಗಿ ಹೇಳಿದರು ಶ್ವೇತಾ ಚಂಗಪ್ಪ.

ಕೊರೊನಾ ಇದ್ದರು ಮಗುವಿನ ಆರೈಕೆ ಮಾಡಿದೆ: ಶ್ವೇತಾ ಚಂಗಪ್ಪ

ಕೊರೊನಾ ಇದ್ದರು ಮಗುವಿನ ಆರೈಕೆ ಮಾಡಿದೆ: ಶ್ವೇತಾ ಚಂಗಪ್ಪ

'ಕೊನೆಗೆ ವೈದ್ಯರ ಸಲಹೆಯಂತೆ ಕೊರೊನಾ ಪಾಸಿಟಿವ್ ಆಗಿದ್ದರೂ ಸಹ ನಾನೇ ಮಾಸ್ಕ್ ಗ್ಲೌಸ್ ಧರಿಸಿ ಮಗುವಿಗೆ ಔಷಧ, ಆಹಾರ ಕೊಟ್ಟೆ. ಆಗಂತೂ ನನಗೆ ಬಹಳ ಭಯವಾಗಿತ್ತು. ಮಗುವನ್ನು ರಿಸ್ಕ್‌ಗೆ ಒಳಪಡಿಸುತ್ತಿದ್ದೇನಾ ಎಂಬ ಭಾವ ಕಾಡಲಾರಂಭಿಸಿತು. ಆದರೆ ವೈದ್ಯರು ಧೈರ್ಯ ತುಂಬಿದರು. ಆ ದಿನಗಳು ನನ್ನ ಪಾಲಿಗೆ ಭಯಾನಕ ದಿನಗಳು' ಎಂದು ಆತಂಕದಿಂದಲೇ ಹೇಳಿದರು ಶ್ವೇತಾ.

ಅಮ್ಮನಿಗೆ ರೋಗಲಕ್ಷಣ ಉಲ್ಬಣವಾಯಿತು: ಶ್ವೇತಾ

ಅಮ್ಮನಿಗೆ ರೋಗಲಕ್ಷಣ ಉಲ್ಬಣವಾಯಿತು: ಶ್ವೇತಾ

'ಮಗುವಿಗೆ ನಾಲ್ಕು ದಿನಕ್ಕೆ ಜ್ವರ ಕಡಿಮೆ ಆಯಿತು. ಆದರೆ ಆ ವೇಳೆಗೆ ಅಮ್ಮನಿಗೆ ರೋಗಲಕ್ಷಣಗಳು ಆರಂಭವಾದವು. ಎಂದೂ ಸುಸ್ತಾಗದಿದ್ದ ಅಮ್ಮನಿಗೆ ಬೆಡ್‌ನಿಂದ ಶೌಚಾಗೃಹಕ್ಕೆ ಹೋಗಿ ಬರಲು ಸಹ ಆಗದ ಸ್ಥಿತಿಗೆ ಬಂದುಬಿಟ್ಟರು. ತೀವ್ರ ಸುಸ್ತು ಅವರನ್ನು ಕಾಡಲು ಆರಂಭಿಸಿತು. ನನಗೂ ರೋಗಲಕ್ಷ್ಣಗಳು ಕಡಿಮೆ ಆಗಿರಲಿಲ್ಲ. ನನಗೆ ಮೊದಲಿನಿಂದಲೂ ಆರೋಗ್ಯ ಸಮಸ್ಯೆ ಇತ್ತು ಹಾಗಾಗಿ ಆಸ್ಪತ್ರೆಗೆ ದಾಖಲಾಗುವುದೋ ಬೇಡವೋ ಎಂಬ ದೊಡ್ಡ ಗೊಂದಲವನ್ನು ನಾವು ಅನುಭವಿಸಿದೆವು' ಎಂದರು ಮಜಾ ಟಾಕೀಸ್‌ನ ರಾಣಿ.

Recommended Video

ಚಿರು ಇಲ್ಲದ‌ ಸ್ಥಿತಿಗೆ ಭಾವುಕರಾಗಿ ಕಣ್ಣೀರು ತರಿಸುವ ಫೋಟೋ ಶೇರ್ ಮಾಡಿದ ಮೇಘನಾ ರಾಜ್ | Filmibeat Kannada
ಆಕ್ಸಿಮೀಟರ್‌ನಲ್ಲಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದೆವು: ಶ್ವೇತಾ

ಆಕ್ಸಿಮೀಟರ್‌ನಲ್ಲಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದೆವು: ಶ್ವೇತಾ

'ಆದರೆ ವೈದ್ಯರ ಸಲಹೆಯಂತೆ ಉಪಚಾರ ಮಾಡಿಕೊಂಡೆವು, ಪದೇ-ಪದೇ ಆಕ್ಸಿಮೀಟರ್‌ನಲ್ಲಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ಪರೀಕ್ಷೆ ಮಾಡಿಕೊಂಡೆವು. ಹತ್ತು ದಿನಗಳ ನಂತರ ರೋಗಲಕ್ಷಣಗಳು ನಿಧಾನವಾಗಿ ಕಡಿಮೆ ಆಗುತ್ತಾ ಬಂದಿತು. ಅಲ್ಲಿಗೆ ತುಸು ಸಮಾಧಾನ ಸ್ಥಿತಿಗೆ ತಲುಪಿದೆವು. ಆದರೆ ಮೊದಲ ಹತ್ತು ದಿನಗಳು ಬಹಳ ಆತಂಕಕ್ಕೆ ಒಳಗಾಗಿದ್ದೆ, ದೈಹಿಕವಾಗಿ, ಮಾನಸಿಕವಾಗಿ ಬಹಳ ಕಷ್ಟವನ್ನು ಅನುಭವಿಸಿದೆ, ನನ್ನ ಕುಟುಂಬದವರೂ ಸಹ ತೀವ್ರ ಆತಂಕದಲ್ಲಿದ್ದರು' ಎಂದರು ಶ್ವೇತಾ ಚಂಗಪ್ಪ.

ಅಡುಗೆ ಮಾಡುವುದು ಸಹ ಕಷ್ಟವಾಗಿತ್ತು: ಶ್ವೇತಾ

ಅಡುಗೆ ಮಾಡುವುದು ಸಹ ಕಷ್ಟವಾಗಿತ್ತು: ಶ್ವೇತಾ

'ಲೈವ್‌ ವಿಡಿಯೋ ವೀಕ್ಷಿಕರ ಪ್ರಶ್ನೆಗಳಿಗೆ ಉತ್ತರಿಸಿದ ಶ್ವೇತಾ ಚಂಗಪ್ಪ, 'ನನಗೆ ಅಡುಗೆ ಮಾಡಿಕೊಳ್ಳುವುದಕ್ಕೂ ಆಗದಷ್ಟು ತೀವ್ರ ಸುಸ್ತಾಗಿತ್ತು. ಮಗುವಿಗೆ ಸಣ್ಣ ಮಟ್ಟಿಗಿನ ಆಹಾರ ಮಾಡುವುದು ಸಹ ಕಷ್ಟವಾಗಿತ್ತು ಅಷ್ಟೋಂದು ಸುಸ್ತು ಇರುತ್ತಿತ್ತು. ಅಪ್ಪ ಊರಿನಿಂದ ಕರೆ ಮಾಡುತ್ತಿದ್ದರು ಅವರೊಟ್ಟಿಗೆ ಮಾತನಾಡಲು ಸಹ ಸುಸ್ತಾಗುತ್ತಿತ್ತು, ಏದುಸಿರು ಬಂದಂತಾಗುತ್ತಿತ್ತು. ಕೊರೊನಾ ಎರಡನೇ ಅಲೆಯ ರೋಗಲಕ್ಷಣಗಳು ಬಹಳ ತೀವ್ರವಾಗಿದೆ' ಎಂದಿದ್ದಾರೆ ಶ್ವೇತಾ ಚಂಗಪ್ಪ.

More from Filmibeat

English summary
Shwetha Changappa has revealed that she was tested positive for Covid-19 earlier this month. She also shared her experience of fighting the virus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X