ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಶ್ವೇತಾ ಚೆಂಗಪ್ಪ ದಂಪತಿ
ನಟಿ ಶ್ವೇತಾ ಚೆಂಗಪ್ಪ ದಂಪತಿ ಈಗ ಸಿಕ್ಕಾಪಟ್ಟೆ ಖುಷಿಯಲ್ಲಿ ಇದ್ದಾರೆ. ಆ ಖುಷಿಗೆ ಕಾರಣ ತಮ್ಮ ದಾಂಪತ್ಯ ಜೀವನ. ನಟಿ ಶ್ವೇತಾ ಚೆಂಗಪ್ಪ ಈಗ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ನಿನ್ನೆ (ಮೇ 4) ಅವರ ಮದುವೆಯಾದ ದಿನ.
ಕಳೆದ ವರ್ಷ ಮಲ್ಡೀವ್ಸ್ ನ ಸಮುದ್ರ ತೀರದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿದ್ದ ಶ್ವೇತಾ ಚೆಂಗಪ್ಪ ದಂಪತಿ ಈ ವರ್ಷವೂ ತಮ್ಮ ವಿವಾಹ ವಾರ್ಷಿಕೋತ್ಸವನ್ನು ವಿದೇಶದಲ್ಲಿ ಆಚರಣೆ ಮಾಡಿದೆ.

ತಮ್ಮ ಪತಿ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ''ನನ್ನ ಜೊತೆ ಇದ್ದು, ನಿಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದ.'' ಎಂದಿದ್ದಾರೆ. ಅವರ ಸ್ಫೂರ್ತಿ, ಸಹಾಯವನ್ನು ನೆನೆದಿದ್ದಾರೆ. ಜೊತೆಗೆ ಪತಿ ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಿರುತೆರೆಯ ಮೂಲಕ ಸಾಕಷ್ಟು ಹೆಸರು ಮಾಡಿರುವ ಶ್ವೇತಾ ಚೆಂಗಪ್ಪ ಸದ್ಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಬಿಜಿ ಇದ್ದಾರೆ. ಸೃಜನ್ ಲೋಕೇಶ್ ಗ್ಯಾಂಗ್ ಸೇರಿ ಶ್ವೇತಾ ಎಲ್ಲರನ್ನು ನಗಿಸುತ್ತಿದ್ದಾರೆ. ಸಾಕಷ್ಟು ರಿಯಾಲಿಟಿ ಶೋ ಗಳ ನಿರೂಪಣೆ ಜೊತೆಗೆ ಕೆಲ ಧಾರಾವಾಹಿಗಳಲ್ಲಿ ಶ್ವೇತಾ ಚೆಂಗಪ್ಪ ಕಾಣಿಸಿಕೊಂಡಿದ್ದರು. ಇವುಗಳ ಜೊತೆಗೆ 'ಬಿಗ್ ಬಾಸ್' ಕಾರ್ಯಕ್ರಮದ ಸ್ಪರ್ಧಿ ಕೂಡ ಆಗಿದ್ದರು.


Click it and Unblock the Notifications











