ಅವರು ಅಡ್ಜೆಸ್ಟ್ ಮಾಡ್ಕೊಂಡರು, ದರ್ಶನ್ ಅವರಂತಹ ಸೂಪರ್ ಸ್ಟಾರ್‌ನ ನಾನು ನೋಡಿಲ್ಲ - ಶ್ವೇತಾ ಚೆಂಗಪ್ಪ...!

ಆ ಕಡೆ ದರ್ಶನ್ ಸದ್ಯಕ್ಕೆ ಬಳ್ಳಾರಿ ಜೈಲಿನಲ್ಲಿದ್ದಾರೆ. ಈ ಅಕ್ಟೋಬರ್ 4ರಂದು ಜಾಮೀನು ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಕಡೆ ದರ್ಶನ್ ಜೈಲಿನಲ್ಲಿದ್ದರು ಅವರ ಕುರಿತು ನಕಾರಾತ್ಮಕವಾದ ಚರ್ಚೆಯ ಜೊತೆ ಸಕಾರಾತ್ಮಕವಾದ ಚರ್ಚೆ ಕೂಡ ನಡೆಯುತ್ತಿದೆ. ಕೆಲವರು ದರ್ಶನ್ ಅವರ ನಡಾವಳಿಯ ಕುರಿತು ಕೆಂಡ ಕಾರಿದರೆ, ಬಹುತೇಕರು ದರ್ಶನ್ ಅವರಲ್ಲಿನ ನೇರವಂತಿಕೆ ಮತ್ತು ಹೃದಯವಂತಿಕೆಯ ಗುಣಗಾನವನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಶ್ವೇತಾ ಚೆಂಗಪ್ಪ.

ಹೌದು, ಶ್ವೇತಾ ಚೆಂಗಪ್ಪ.ಒಂದ್ಕಾಲದ ಕಿರುತೆರೆಯ ಸುಮತಿ. ಸುಮತಿ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯ ಗೆದ್ದ ಶ್ವೇತಾ ಆ ನಂತರ ಕಾದಂಬರಿ, ಅರುಂಧತಿ, ಧಾರಾವಾಹಿಗಳ ಮೂಲಕ ತಮ್ಮದೇ ಛಾಪು ಮೂಡಿಸಿದರು. ಆದರೆ, ಆ ನಂತರ ಏನಾಯ್ತೋ..ಕಿರುತೆರೆ ನಾಯಕಿಯಿಂದ ನಿರೂಪಕಿಯ ಸ್ಥಾನಕ್ಕೆ ಶಿಫ್ಟ್ ಆದ ಶ್ವೇತಾ ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾರಾ, ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್, ಸೂಪರ್ ಕ್ವೀನ್ ಹೀಗೆ ಅನೇಕ ಕಾರ್ಯಕ್ರಮಗಳ ನಿರೂಪಣೆಯನ್ನು ಮಾಡಿದರು. ಬಿಗ್ ಬಾಸ್ ಎರಡನೇ ಸೀಸನ್‌ನಲ್ಲಿ ಸ್ಫರ್ಧಿಯಾಗಿ ಕಾಣಿಸಿಕೊಂಡರು. ಮಜಾ ಟಾಕೀಸ್‌ ಮೂಲಕ ಮನೆ ಮಾತಾದರು.

Shwetha Chengappa recalled her time with actor Darshan saying I ve never seen a superstar like him

ಇಂಥಾ ಶ್ವೇತಾ ಚೆಂಗಪ್ಪ ತಮ್ಮ ಈ 21 ವರ್ಷಗಳ ಸುಧೀರ್ಘ ಪ್ರಯಾಣದಲ್ಲಿ ಕೆಲ ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ದರ್ಶನ್ ಅಭಿನಯದ ತಂಗಿಗಾಗಿ ಚಿತ್ರ ಕೂಡ ಒಂದು. ಈ ಚಿತ್ರದ ಅನುಭವವನ್ನು ಸದ್ಯಕ್ಕೆ ಶ್ವೇತಾ ಹಂಚಿಕೊಂಡಿದ್ದಾರೆ. ದರ್ಶನ್ ಅವರನ್ನು ಯಾಕೆ ಎಲ್ಲರೂ ಸೂಪರ್ ಸ್ಟಾರ್ ಎನ್ನುತ್ತಾರೆ ಎನ್ನುವುದಕ್ಕೆ ರ್ಯಾಪಿಡ್ ರಶ್ಮಿ ಅವರೆದುರು ಕುಳಿತು ಉತ್ತರ ನೀಡಿದ್ದಾರೆ.

ಹೌದು, ರ್ಯಾಪಿಡ್ ರಶ್ಮಿ ಅವರ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ಶ್ವೇತಾ ಚೆಂಗಪ್ಪ, ನಾನು ಆಗ ಕಾದಂಬರಿ ಸೀರಿಯಲ್ ಮಾಡುತ್ತಿದ್ದೆ, ಇದೇ ಸಮಯದಲ್ಲಿ ತಂಗಿಗಾಗಿ ಚಿತ್ರದ ಅವಕಾಶ ಬಂತು. ಆದರೆ ಈ ಅವಕಾಶ ಬಂದಾಗ ನಾನು ಆಗ ತುಂಬಾ ಬ್ಯುಸಿ ಇದ್ದೆ, ಹೀಗಾಗಿ ಸರ್ ಡೇಟ್ಸ್ ತುಂಬಾ ಕಷ್ಟ ನನ್ನಿಂದ ನಿಮಗೆ ತೊಂದರೆಯಾಗುತ್ತೆ ಎಂದು ನಾನು ನಿರ್ದೇಶಕ ಪಿ.ಎನ್.ಸತ್ಯಾ ಅವರಿಗೆ ಹೇಳಿದೆ ಎಂದು ಹೇಳಿದ್ದಾರೆ. ಆದರೆ, ನನ್ನ ಈ ಮಾತುಗಳಿಗೆ ನಿರ್ದೇಶಕರು ಪರವಾಗಿಲ್ಲಮ್ಮ ನಿಮ್ಮ ಡೇಟ್ಸ್ ಯಾವಾಗ ಇರುತ್ತೆ ಹೇಳಿ ನಾವೇ ಅದಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ನನಗೆ ಆಗ ಪರಮಾಶ್ಚರ್ಯವಾಯಿತು ಎಂದು ಹೇಳಿರುವ ಶ್ವೇತಾ, ನನ್ನ ಡೇಟ್ಸ್‌ ಗೆ ಅನುಗುಣವಾಗಿ ದರ್ಶನ್ ಅವರು ಕೂಡ ತಮ್ಮ ಡೇಟ್ಸ್‌ ನ ಆ ಚಿತ್ರಕ್ಕೆ ಅಡೆಸ್ಟ್ ಮಾಡ್ತಿದ್ದರು, ನಾನು ಆ ತರಹದ ಸೂಪರ್ ಸ್ಟಾರ್‌ನ ನೋಡಿಲ್ಲ ಎಂದು ಹೇಳಿದ್ದಾರೆ. ಚಿತ್ರದಲ್ಲಿ ನನ್ನದು ತಂಗಿಯ ಪಾತ್ರ, ಟೈಟಲ್ ರೋಲ್, ದರ್ಶನ್ ಅವರು ಕಲಾವಿದರಿಗಾಗಿ ತಮ್ಮ ಡೇಟ್ಸ್‌ನ ಅಡೆಸ್ಟ್ ಮಾಡಿಕೊಂಡು ಮಾಡಿದರು ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ ಶ್ವೇತಾ ಚೆಂಗಪ್ಪ.

ಮುಂದುವರೆದು ತಂಗಿಗಾಗಿ ಚಿತ್ರದ ಚಿತ್ರೀಕರಣಕ್ಕೆ ನಾನು ಹೋಗುವ ಮುನ್ನ ನಿರ್ದೇಶಕರು ನನ್ನನ್ನೂ ಭೇಟಿಯೇ ಆಗಿರಲಿಲ್ಲ , ಅವರು ನನ್ನನ್ನೂ ಆಯ್ಕೆ ಮಾಡಿದ್ದೇ ಕಾದಂಬರಿಯನ್ನು ನೋಡಿ ಎಂದಿರುವ ಶ್ವೇತಾ ಚೆಂಗಪ್ಪ ನನ್ನ ಹೆಂಡತಿ ನಿಮ್ಮ ಅಭಿಮಾನಿ ಹೀಗಾಗಿ ನಿಮ್ಮನ್ನು ಆಯ್ಕೆ ಮಾಡಿದ್ದು ಎಂದು ನನಗೆ ಅವರು ಹೇಳಿದ್ದರು ಎಂದು ಹೇಳಿದ್ದಾರೆ. ಮೊದಲ ದಿನ ಚಿತ್ರೀಕರಣಕ್ಕೆ ಹೋದಾಗ ನಿರ್ದೇಶಕರೇ ಬಂದು ನಾನೇ ಈ ಚಿತ್ರದ ನಿರ್ದೇಶಕ ಎಂದು ತಮ್ಮ ಪರಿಚಯ ಮಾಡಿಕೊಂಡಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ. ಆ ಕಾಲದಲ್ಲಿ ನಾನು ಅಷ್ಟು ಬ್ಯುಸಿಯಾಗಿದ್ದೇ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X