ತಾಯಿ ಆಗ್ತಿದ್ದಾರೆ ನಟಿ, ನಿರೂಪಕಿ ಶ್ವೇತ ಚೆಂಗಪ್ಪ

Recommended Video

ಶ್ವೇತಾ ಚೆಂಗಪ್ಪ ಕಿರುತೆರೆ ಜನಪ್ರಿಯ ನಟಿ ಕೊಟ್ಟಿದ್ದಾರೆ ಗುಡ್ ನ್ಯೂಸ್ | FILMIBEAT KANNADA

'ನಾನು ತಾಯಿ ಆಗ್ತಿದ್ದೀನಿ..' ಈ ಮಾತು ಹೇಳಲು ಆ ಹೆಣ್ಣು ಜೀವಕ್ಕೆ ಎಷ್ಟು ಖುಷಿ ಆಗುತ್ತದೆ ಅಲ್ವಾ. ಅದೇ ರೀತಿ... ಅಷ್ಟೇ ಖುಷಿಯಲ್ಲಿ.. ಈಗ ನಟಿ, ನಿರೂಪಕಿ ಶ್ವೇತ ಚೆಂಗಪ್ಪ ಇದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ನಟಿ, ನಿರೂಪಕಿ ಆಗಿರುವ ಶ್ವೇತ ಚೆಂಗಪ್ಪ ಈಗ ತಮ್ಮ ಜೀವನದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಧಾರಾವಾಹಿ, ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ಮಾಡಿದ್ದ ಇವರು ತಮ್ಮ ಜೀವನದ ಮುಖ್ಯ ಘಟ್ಟಕ್ಕೆ ಬಂದಿದ್ದಾರೆ. ಅಂದ್ರೆ, ಶ್ವೇತ ಚೆಂಗಪ್ಪ ತಾಯಿ ಆಗುತ್ತಿದ್ದಾರೆ.

ತಾಯ್ತನದ ಅದ್ಭುತ ಕ್ಷಣಗಳನ್ನು ಕಳೆಯುತ್ತಿರುವ ಶ್ವೇತ ಚೆಂಗಪ್ಪ ಸಿಹಿ ಸುದ್ದಿಯನ್ನು ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಪತಿಯ ಹುಟ್ಟುಹಬ್ಬಕ್ಕೆ ಸಿಹಿ ಸುದ್ದಿ

ಪತಿಯ ಹುಟ್ಟುಹಬ್ಬಕ್ಕೆ ಸಿಹಿ ಸುದ್ದಿ

ನಟಿ ಶ್ವೇತ ಚೆಂಗಪ್ಪ ತಾಯಿ ಆಗುತ್ತಿದ್ದಾರೆ. ಈ ವಿಷಯವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುದ್ದು ಕಂದನ ನಿರೀಕ್ಷೆಯಲ್ಲಿ ಇರುವ ಅವರು ಸುಂದರವಾದ ಪ್ರೆಗ್ನೆಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಪತಿ ಕಿರಣ್ ಹುಟ್ಟುಹಬ್ಬದ ವಿಶೇಷವಾಗಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇರಲಿ

ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಇರಲಿ

''ಇಷ್ಟು ವರ್ಷ ನನ್ನ ಮೇಲೆ ನೀವು ಪ್ರೀತಿ ಮತ್ತು ಆಶೀರ್ವಾದ ತೋರುತ್ತಾ ಬಂದಿದ್ದೀರಿ ಅದಕ್ಕೆ ನನ್ನ ಧನ್ಯವಾದ. ನನ್ನ ಟಿವಿ ಮತ್ತು ಸಿನಿಮಾಗಳ ಕೆಲಸಕ್ಕೆ ನೀವು ಮೆಚ್ಚಿಗೆ ನೀಡಿದ್ದೀರಿ. ಈಗ ನಾನು ನನ್ನ ರಿಯಲ್ ಲೈಫ್ ನಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ನಮ್ಮ ಕುಟುಂಬಕ್ಕೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಬೇಕು.'' ಎಂದು ಇನ್ಸ್ಟಾಗ್ರಾಮ್ ನಲ್ಲಿ ಶ್ವೇತ ಖುಷಿ ಹಂಚಿಕೊಂಡಿದ್ದಾರೆ.

'ಸುಮತಿ' ಧಾರಾವಾಹಿ ಮೂಲಕ ಕಿರುತೆರೆಗೆ

'ಸುಮತಿ' ಧಾರಾವಾಹಿ ಮೂಲಕ ಕಿರುತೆರೆಗೆ

2003 ರಲ್ಲಿ 'ಸುಮತಿ' ಧಾರಾವಾಹಿ ಮೂಲಕ ಕಿರುತೆರೆಗೆ ನಟಿ ಶ್ವೇತಾ ಚೆಂಗಪ್ಪ ಆಗಮನ ಆಯ್ತು. ಎಸ್ ನಾರಾಯಣ್ ಶ್ವೇತರನ್ನು ಧಾರಾವಾಹಿ ಲೋಕಕ್ಕೆ ಪರಿಚಯ ಮಾಡಿದ್ದರು. ಬಳಿಕ 2006 ರಲ್ಲಿ ಶುರುವಾದ 'ಕಾದಂಬರಿ' ಸೀರಿಯಲ್ ಶ್ವೇತಕ್ಕೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು. ಇದರ ನಂತರ ನಿರೂಪಕಿಯಾಗಿ ಅನೇಕ ಶೋ ಗಳನ್ನು ನಿರ್ವಹಿಸಿದರು.

'ಬಿಗ್ ಬಾಸ್' ಹಾಗೂ 'ಮಜಾ ಟಾಕೀಸ್'

'ಬಿಗ್ ಬಾಸ್' ಹಾಗೂ 'ಮಜಾ ಟಾಕೀಸ್'

ಸದ್ಯ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಶ್ವೇತ ಬಿಜಿ ಇದ್ದಾರೆ. ಸೃಜನ್ ಲೋಕೇಶ್ ಗ್ಯಾಂಗ್ ಸೇರಿ ಶ್ವೇತಾ ಎಲ್ಲರನ್ನು ನಗಿಸುತ್ತಿದ್ದಾರೆ. ಇವುಗಳ ಜೊತೆಗೆ 'ಬಿಗ್ ಬಾಸ್ ಕನ್ನಡ ಸೀಸನ್ 2' ಕಾರ್ಯಕ್ರಮದ ಸ್ಪರ್ಧಿ ಕೂಡ ಆಗಿದ್ದರು. ಸ್ಟಾರ್ ಸುವರ್ಣದಲ್ಲಿ ಆಗ ಸೀಸನ್ ನ ಬಿಗ್ ಬಾಸ್ ಪ್ರಸಾರ ಆಗಿತ್ತು.

More from Filmibeat

English summary
Kannada actress Shwetha Chengappa shared her pregnancy news.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X