"ಬಿಟ್ಟುಬಿಡುವ ಕಲೆ" ಬಗ್ಗೆ ಶ್ವೇತಾ ಪ್ರಸಾದ್,"ಬಿಟ್ಕೊಡ್ಬೇಕು ಅಂತ ಪ್ರದೀಪ್"; ಇಬ್ಬರ ಲೈಫ್‌ನಲ್ಲಿ ಏನಾಗ್ತಿದೆ?
ಬಿಗ್ ಬಾಸ್ ಕನ್ನಡ 12ರಲ್ಲಿ ಶುರುವಾಗುವುದಕ್ಕೆ ಇನ್ನೇನು ಕೆಲವೇ ಕ್ಷಣಗಳು ಉಳಿದಿವೆ. ಅದರಲ್ಲಿ ಕಿರುತೆರೆ ನಟಿ ಶ್ವೇತಾ ಪ್ರಸಾದ್ ಕೂಡ ಸ್ಪರ್ಧಿಯಾಗಿದ್ದಾರೆ ಅನ್ನೋ ಮಾಹಿತಿಯಿದೆ. ಶ್ವೇತಾ ಪ್ರಸಾದ ಕಿರುತೆರೆ ಅಷ್ಟೇ ಅಲ್ಲ, ಫ್ಯಾಷನ್ ಲೋಕದಲ್ಲಿಯೂ ಅಷ್ಟೇ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ನಟಿ ಈಗ ಬಿಗ್ ಬಾಸ್ ಎಂಟ್ರಿ ಬಗ್ಗೆ ಚರ್ಚೆಯಾಗುತ್ತಿದೆ.
ಈ ಗ್ಯಾಪ್‌ನಲ್ಲಿ ನಟಿ ಶ್ವೇತಾ ಹಾಗೂ ಅವರ ಪತಿ ಆರ್‌ಗೆ ಪ್ರದೀಪ ಅವರ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಗೊಂದಲಕ್ಕೆ ಎಡೆ ಮಾಡಿಕೊಟ್ಟಿವೆ. ಇತ್ತೀಚೆಗೆ ಶ್ವೇತಾ ಪ್ರಸಾದ್ ಪ್ರೀತಿ ಹಾಗೂ ಬದುಕಿನ ಬಗ್ಗೆ ಇಷ್ಟುದ್ದ ಮೆಸೇಜ್ ಹಾಕಿದ್ದರು. ಇದರಲ್ಲಿ ಏನೋ ಅಡಗಿದೆ ಅನ್ನೋ ಅಂತ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದರು. ಈ ಮಧ್ಯೆ ಶ್ವೇತಾ ಪ್ರಸಾದ್ ಬಿಗ್ ಬಾಸ್ ಎಂಟ್ರಿ ಬಗ್ಗೆ ಚರ್ಚೆಯಾಗಿತ್ತು.

ಇನ್ನೇನು ಬಿಗ್ ಬಾಸ್ ಆರಂಭಕ್ಕೆ ಒಂದು ದಿನ ಇದೆ ಎನ್ನುವಾಗಲೇ ಆರ್ ಜೆ ಪ್ರದೀಪ್ ಇನ್‌ಸ್ಟಾಗ್ರಾಂ ಸ್ಟೋರಿ ಮತ್ತೆ ಗೊಂದಲಕ್ಕೆ ತಳ್ಳಿದೆ. ನೆಟ್ಟಿಗರು ಇಬ್ಬರ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಅನ್ನೋ ಮಾತುಗಳು ಹರಿದಾಡುವುದಕ್ಕೆ ಶುರು ಮಾಡಿದೆ. ಅದರಲ್ಲಿ ನೆಟ್ಟಿಗರೊಬ್ಬರು ಈ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದಾರೆ. ಆದರೆ, ಶ್ವೇತಾ ಪ್ರಸಾದ್ ಉತ್ತರವನ್ನೂ ಕೊಟ್ಟಿದ್ದಾರೆ. ಅಷ್ಟಕ್ಕೂ ಏನಿದು ಇಬ್ಬರ ಇನ್‌ಸ್ಟಾಗ್ರಾಂ ಪೋಸ್ಟ್‌ನ ಗೊಂದಲ? ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಿದೆಯೇ? ಶ್ವೇತಾ ಪ್ರಸಾದ್ ಏನಂದ್ರು? ತಿಳಿಯುವುದಕ್ಕೆ ಮುಂದೆ ಓದಿ.
ಬಿಟ್ಟುಬಿಡುವ ಕಲೆ ಬಗ್ಗೆ ಶ್ವೇತಾ ಪೋಸ್ಟ್
ಹೌದು, ಒಂದು ದಿನದ ಹಿಂದಷ್ಟೇ ನಟಿ ಶ್ವೇತಾ ಪ್ರಸಾದ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಪ್ರೀತಿ, ಸಂಬಂಧ, ತ್ಯಜಿಸುವ ಕಲೆಯ ಬಗ್ಗೆ ಭಾವನಾತ್ಮಕವಾಗಿ ಮಾಡಿದ್ದರು. ಈ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರಲ್ಲಿ ನೂರಾರು ಗೊಂದಲ ಮೂಡಿದ್ದವು. ನೆಟ್ಟಿಗರು ತಲೆಯಲ್ಲಿ ನೂರಾರು ಹುಳವನ್ನು ಬಿಟ್ಟುಕೊಟ್ಟಿದ್ದರು. ಇವರ ದಾಂಪತ್ಯದಲ್ಲಿ ಏನೋ ಸರಿಯಾಗಿಲ್ಲ ಎಂಬ ಕಮೆಂಟ್‌ಗಳು ಪಾಸ್ ಆಗಿದ್ದವು. ಅಷ್ಟಕ್ಕೂ ಶ್ವೇತಾ ಪ್ರಸಾದ್ ಪೋಸ್ಟ್‌ನಲ್ಲಿ ಏನಿದೆ ಅಂತ ನೋಡುವುದಾರೇ..
"ಬಿಟ್ಟು ಬಿಡಬೇಕು ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ, ನನ್ನ ದೃಷ್ಟಿಯಲ್ಲಿ ಬಿಡುವ ಕಲೆಯ ಅರ್ಥವೇ ಬೇರೆಯಿದೆ. ಅದು ಅರ್ಧ ದಾರಿಯಲ್ಲಿ ಬಿಟ್ಟು ಹೋಗುವುದಲ್ಲ. ಪ್ರೀತಿ ಕಷ್ಟದಲ್ಲಿ ಇದ್ದಾಗ ಹಿಂದೆ ಸರಿಯುವುದಲ್ಲ. ಬಿಟ್ಟು ಬಿಡುವುದು ಪ್ರೀತಿಯ ಕೊನೆಯ ಅಧ್ಯಾಯ. ನೀವು ಎಲ್ಲವನ್ನೂ ಪೂರ್ತಿಯಾಗಿ ಕೊಟ್ಟು, ಮುಂದಿನ ದಾರಿಯೇ ಇಲ್ಲವೆಂದು ತಿಳಿದು ಆ ಸಂಬಂಧವನ್ನು ಗೌರವದಿಂದ ಅಂತ್ಯಗೊಳಿಸುವುದು ನಿಜವಾದ ಬಿಡುವಿಕೆ. ಹಲವು ಮಂದಿ ಪ್ರೀತಿಯನ್ನು ಆಳವಾಗಿ ಅನುಭವಿಸದೇ ಬಿಟ್ಟು ಬಿಡುವುದರ ಬಗ್ಗೆ ಮಾತಾಡುತ್ತಾರೆ. ಇದು ಬಿಟ್ಟುಬಿಡುವ ಕಲೆಯಲ್ಲ. ಎಸ್ಕೇಪ್ ಆಗುವುದು ಎಂದಲ್ಲ. ಬಿಟ್ಟು ಬಿಡುವುದಕ್ಕಿಂತಲೂ ಮುನ್ನ ಸಂಪೂರ್ಣವಾಗಿ ಪ್ರೀತಿಯಲ್ಲಿ ಬೀಳಬೇಕು. ಅಲ್ಲೇ ನಿಜವಾದ ಸೌಂದರ್ಯದ ಗುಟ್ಟು ಅಡಗಿದೆ." ಎಂದು ಶ್ವೇತಾ ಬರೆದು ಪೋಸ್ಟ್ ಮಾಡಿದ್ದರು.

"ಬಿಟ್ಕೊಡ್ಬೇಕು" ಅಂತ ಆರ್ ಜೆ ಪ್ರದೀಪ್
ಇನ್ನು ಒಂದು ದಿನದ ಹಿಂದೆ ಶ್ವೇತಾ ಪೋಸ್ಟ್ ಮಾಡುತ್ತಿದ್ದಂತೆ ಆರ್‌ಜೆ ಪ್ರದೀಪ್ ಕೂಡ ಇನ್‌ಸ್ಟಾಗ್ರಾ ಸ್ಟೋರಿಯಲ್ಲಿ 'ಬಿಟ್ಕೊಡ್ಬೇಕು' ಅಂತ ಹೇಳಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆಂದು ನೋಡುವುದಾರೇ, "ನಮ್ಮದಾದ ವಸ್ತು ನಮ್ಮ ಹೃದಯದಲ್ಲೇ ಶಾಶ್ವತವಾಗಿ ಇರಬೇಕು ಅಂತ ನಾವೆಷ್ಟು ಆಸೆ ಪಡ್ತಿವೋ, ಆ ವಸ್ತು ಇನ್ನೊಂದು ಒಳ್ಳೆದೊಸ್ಕರ ನಮ್ಮನ್ನು ಬಿಟ್ಟೋಗುತ್ತೆ ಅನ್ನುವಾಗ ಅಷ್ಟೇ ಸಂತೋಷದಿಂದ ನಾವ್ ಅದನ್ನು ಬಿಟ್ಕೊಡೋದು ನಿಜವಾದ ಮನುಷ್ಯ ಧರ್ಮ." ಎಂದು ಆರ್‌ಜೆ ಪ್ರದೀಪ ಸ್ಟೋರಿಯಲ್ಲಿ ಹೇಳಿದ್ದಾರೆ. ಇದು ಇನ್ನಷ್ಟು ಗೊಂದಲಕ್ಕೆ ಮೂಡಿದ್ದಾರೆ.
ಬೇರೆಯಾಗುತ್ತಿದೆಯಾ ಈ ಜೋಡಿ?
ಇನ್ನು ಇದನ್ನೆಲ್ಲ ನೋಡಿವರಿಗೆ ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಒಬ್ಬರು ನೆಟ್ಟಿಗರು ಶ್ವೇತಾ ಪ್ರಸಾದ್‌ಗೆ ನೀವಿಬ್ಬರು ಬೇರೆಯಾಗುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಶ್ವೇತಾ ಪ್ರಸಾದ್ ಇನ್‌ಸ್ಟಾಗ್ರಾಂನಲ್ಲಿಯೇ ಉತ್ತರ ಕೊಟ್ಟಿದ್ದಾರೆ. " ಇಲ್ಲ.. ದೇವರ ದೆಯೆಯಿಂದ ಅದೇನೂ ಇಲ್ಲ. ನಾವು ಆರಾಮಾಗಿ ಇದ್ದೇವೆ. ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ಧನ್ಯವಾದಗಳು. ಈ ಪದಗಳು ಕೇವಲ ನನ್ನ ಅಭಿಪ್ರಾಯವಷ್ಟೇ. ಇದು ನನ್ನ ವೈಯಕ್ತಿಕ ಜೀವನದ ಪ್ರತಿಬಿಂಬ ಅಲ್ಲ. ನಮ್ಮ ಮೇಲೆ ಪ್ರೀತಿ ಹೀಗೆ ಮುಂದುವರೆಯಲಿ" ಎಂದು ಶ್ವೇತಾ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











