Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಶ್ರೀವಾತ್ಸವ್ ಚಿತ್ರರಂಗಕ್ಕೆ ಎಂಟ್ರಿ!
ನಟಿ ಶ್ವೇತಾ ಶ್ರೀವಾತ್ಸವ್ ಕನ್ನಡದ ಹೆಸರಾಂತ ನಟಿಯರಲ್ಲಿ ಒಬ್ಬರು. 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸಿಕ್ಕಾ ಪಟ್ಟೆ ಫೇಮಸ್ ಆದ ಬಬ್ಲಿ ಬೆಡಗಿ, ನಟಿ ಶ್ವೇತಾ ಶ್ರೀವಾತ್ಸವ್ ಸಿನಿಮಾ ರಂಗದಲ್ಲಿ ಹಲವು ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಶ್ವೇತಾ ಅವರು ಮಾಡಿರುವ ಹಲವು ಪಾತ್ರಗಳು ಜನರ ಮನಸಲ್ಲಿ ಉಳಿಸು ಬಿಟ್ಟಿವೆ.
ಶ್ವೇತಾ ಶ್ರೀವಾತ್ಸವ್ ಚಿತ್ರರಂಗಕ್ಕೆ ಬಂದು ಒಂದು ಟ್ರೆಂಡ್ ಹುಟ್ಟು ಹಾಕಿದರು. ಬಳಿಕ ಮದುವೆ ಆದ ಶ್ವೇತಾ ಶ್ರೀವಾತ್ಸವ್ ಮತ್ತೆ ಸಿನಿಮಾ ಮಾಡಲ್ಲ ಎನ್ನುವ ಸುದ್ದಿಗಳು ಹಬ್ಬಿದ್ದವು. ಮದುವೆ ಬಳಿಕ ಮಗು ಆದ ನಂತರ ಶ್ವೇತಾ ಶ್ರೀವಾತ್ಸವ್ ಈಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲು ಶ್ವೇತಾ ಸಿಕ್ಕಾ ಪಟ್ಟೆ ಬ್ಯೂಸಿಯಾಗಿದ್ದಾರೆ.
ಬಾಲಿವುಡ್ನಲ್ಲಿ
ರಕ್ಷಿತ್
ಶೆಟ್ಟಿ
ಹವಾ:
'777
ಚಾರ್ಲಿ'
ಹಿಂದಿ
ವಿತರಣಾ
ಹಕ್ಕು
ಸೋಲ್ಡ್!
ಆದರೆ ಈಗ ಇಲ್ಲಿ ಹೇಳ ಹೊರಟಿರುವುದು ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಶ್ರೀವಾತ್ಸವ್ ಸಿನಿಮಾ ಜರ್ನಿ ಬಗ್ಗೆ. ಅರೆ ಆ ಪುಟ್ಟ ಪೋರಿ ಸಿನಿಮಾ ಮಾಡೇ ಇಲ್ಲ ಇನ್ನು ಸಿನಿಮಾ ಜರ್ನಿ ಎಲ್ಲಿಂದ ಬಂತು ಎಂದು ಯೋಚಿಸಬೇಡಿ. ಯಾಕೆಂದರೆ ಅಶ್ಮಿತಾ ಸಿನಿಮಾ ಜರ್ನಿ ಶುರುವಾಗಲಿದೆ ಎನ್ನುವ ಬಗ್ಗೆ ಹೇಳ ಹೊರಟಿದ್ದೇವೆ.

ಸದ್ಯದಲ್ಲೇ ಸಿನಿಮಾದಲ್ಲಿ ಅಶ್ಮಿತಾ ಶ್ರೀವಾತ್ಸವ್!
ಶ್ವೇತಾ ಶ್ರೀವಾತ್ಸವ್ ಮ ಸಾಮಾಜಿಕ ಜಾಲತಾಣಲ್ಲಿ ಅಶ್ಮಿತಾ ತುಂಬಾನೇ ಫೇಮಸ್, ಅಶ್ಮಿತಾ ಪೋಸ್ಟ್‌ಗಳಿಗಾಗಿ ಕಾಯುವ ಸಾಕಷ್ಟು ಜನರಿದ್ದಾರೆ. ಅಶ್ಮಿತಾ ಹೆಸರಲ್ಲಿ ಇನ್‌ಸ್ಟಾಗ್ರಾಮ್ ಅಕೌಂಟ್ ಇದ್ದು, ಸದಾ ಅಶ್ಮಿತಾ ಫೊಟೋ ಮತ್ತು ವಿಡೀಯೋಗಳನ್ನು ಶೇರ್ ಮಾಡಲಾಗುತ್ತದೆ.
ಅಶ್ಮಿತಾಗೆ ಚೆನ್ನಾಗಿ ಅಭಿನಯಿಸುತ್ತಾಳೆ: ಶ್ವೇತಾ ಶ್ರೀವಾತ್ಸವ್!
ಮಗಳ ಸಿನಿಮಾರಂಗದ ಎಂಟ್ರಿ ಬಗ್ಗೆ ಮಾತನಾಡುದ ನಟಿ ಶ್ವೇತಾ ಶ್ರೀವಾತ್ಸವ್, ಅಶ್ಮಿತಾಳನ್ನು ಸಿನಿಮಾದಲ್ಲಿ ನೋಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮಗಳ ಬಗ್ಗೆ ಫಿಲ್ಮೀ ಬೀಟ್ ಜೊತೆಗೆ ಮಾತನಾಡಿದ ಶ್ವೇತಾ ಶ್ರೀವಾತ್ಸವ್ "ಅಶ್ಮಿತಾ ತುಂಬಾ ಚೆನ್ನಾಗಿ ಅಭಿನಯಿಸುತ್ತಾಳೆ. ಅವಳಗೆ ಅಭಿನಯ ಅಂದ್ರೆ ಗೊತ್ತಿಲ್ಲ ಆದರೂ ಬೇರೆಯವರ ರೀತಿ ಇಮಿಟೇಟ್ ಮಾಡುತ್ತಾಳೆ. ಅಜ್ಜಿಯ ರೀತಿ ಇಮಿಟೇಟ್ ಮಾಡುತ್ತಾಳೆ. ಮುಖದಲ್ಲಿ ಹಲವು ಭಾವನೆಗಳನ್ನು ತೋರಿಸುತ್ತಾಳೆ." ಎಂದಿದ್ದಾರೆ.
'ವಿಕ್ರಾಂತ್
ರೋಣ'
ಪ್ಯಾನ್
ಇಂಡಿಯಾ
ಅಲ್ಲ,
ಪ್ಯಾನ್
ವರ್ಲ್ಡ್
ಸಿನಿಮಾ!
ಒಳ್ಳೆ ಕಥೆ ಇದ್ದರೆ ಅಶ್ಮಿತಾ ಸಿನಿಮಾ ಮಾಡಲಿ: ಶ್ವೇತಾ ಶ್ರೀವಾತ್ಸವ್!
ನಟಿ ಶ್ವೇತಾ ಶ್ರೀವಾತ್ಸವ್‌ಗೆ ತಮ್ಮ ಮಗಳನ್ನು ಸಿನಿಮಾದಲ್ಲಿ ನೋಡುವ ಆಸೆ ಇದೆ. ಹಾಗಾಗಿ ಉತ್ತಮ ಕಥೆ ಬಂದರೆ ಅಶ್ಮಿತಾಳನ್ನು ಅಭಿನಯಕ್ಕೆ ಕಳಿಸಲು ಸಜ್ಜಾಗಿದ್ದಾರೆ. "ಅವಳು ಮುಂದೆ ಏನು ಆಗುತ್ತಾಳೋ ಗೊತ್ತಿಲ್ಲ. ಆದರೆ ಈಗ 7, 8 ವರ್ಷದಳಿದ್ದಾಗ ಅವಳು ಸಿನಿಮಾದಲ್ಲಿ ನಟಿಸಲಿ ಎನ್ನುವ ಇಂಗಿತ ಇದೆ. ಆದರೆ ಅವಳಿಗೆ ತಕ್ಕನಾದ ಉತ್ತಮ ಕಥೆ ಬಂದರೆ ಮಾತ್ರ ಅಶ್ಮಿತಾಳನ್ನು ಸಿನಿಮಾದಲ್ಲಿ ನಟಿಸಲು ಕಳಿಸುತ್ತೇವೆ. ಇನ್ನು ಇದನ್ನು ಅವಳಿಗೆ ಒತ್ತಾಯದಾಯಕವಾಗಿ ಮಾಡುವುದಿಲ್ಲ. ಮುಂದೆ ಅವಳು ಸಿನಿಮಾರಂಗದಲ್ಲೇ ಇರಬೇಕು ಎಂದೇನು ಇಲ್ಲ." ಎಂದು ಶ್ವೇತಾ ಹೇಳಿದ್ದಾರೆ.
ಬೇಬಿ ಅಶ್ಮಿತಾ ಸಿಕ್ಕಾಪಟ್ಟೆ ಆ್ಯಕ್ಟಿವ್!
ಅಶ್ಮಿತಾಳ ಇನ್‌ಸ್ಟಾಗ್ರಾಮ್ ಒಮ್ಮೆ ನೋಡಿದರೆ ಗೊತ್ತಾಗಿತ್ತೆ, ಈ ಬೇಬಿ ಎಷ್ಟು ಆ್ಯಕ್ಟಿವ್ ಎಂದು. ಅಶ್ಮಿತಾಳ ನಿತ್ಯ ಚಟುವಟಿಕೆಗಳ ಬಗ್ಗೆ ವಿಡಿಯೋಗಳು, ಆಕೆಯ ಅಕೌಂಟ್‌ನಲ್ಲಿ ನೋಡ ಬಹದು. ಅಶ್ಮಿತಾ ಮುದ್ದಾಗಿ ಮಾತನಾಡುವ ಅಹಲವು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ.