»   » ಹೆಣ್ಣು ಮಗುವಿಗೆ ಜನ್ಮ ನೀಡಿದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

ಹೆಣ್ಣು ಮಗುವಿಗೆ ಜನ್ಮ ನೀಡಿದ ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ್

Posted By:
Subscribe to Filmibeat Kannada

'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಖ್ಯಾತಿಯ ನಟಿ ಶ್ವೇತಾ ಶ್ರೀವಾತ್ಸವ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷ್ಯವನ್ನ ಸ್ವತಃ ಶ್ವೇತಾ ಶ್ರೀವಾತ್ಸವ್ ಅವರೇ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಖಚಿತಪಡಿಸಿದ್ದಾರೆ.

ಶ್ವೇತಾ ಶ್ರೀವಾತ್ಸವ್ ವೈಯಕ್ತಿಕ ಜೀವನದಲ್ಲಿ ಗುಡ್ ನ್ಯೂಸ್

ಈ ಬಗ್ಗೆ ಸ್ಟೇಟಸ್ ಹಾಕಿರುವ ಶ್ವೇತಾ ಶ್ರೀವಾತ್ಸವ್ '' ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ. ಈ ಸುದ್ದಿಯನ್ನ ಹಂಚಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಖುಷಿ ಮತ್ತು ಹೆಮ್ಮೆ ಎನಿಸುತ್ತಿದೆ. ನನಗೆ ಶುಭಹಾರೈಸಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದಿದ್ದಾರೆ.

ತಾಯ್ತನದ ಆನಂದದಲ್ಲಿ ಸಿಂಪಲ್ ಹುಡುಗಿ ಶ್ವೇತಾ ಶ್ರೀವಾತ್ಸವ್

Shwetha Srivatsav gives Birth to Baby Girl

ಶ್ವೇತಾ ಶ್ರೀವಾತ್ಸವ್ ಅವರು ಅಮಿತ್ ಶ್ರೀವಾತ್ಸವ್ ಅವರನ್ನ ಮದುವೆ ಆಗಿದ್ದರು. ಇತ್ತೀಚೆಗಷ್ಟೇ ತುಂಬು ಗರ್ಭಿಣಿಯಾಗಿದ್ದ ಶ್ವೇತಾ ಶ್ರೀವಾತ್ಸವ್ ತನ್ನ ಹೊಟ್ಟೆಯ ಮೇಲೆ ಮಲಗಿರುವ ಮಗುವಿನ ಚಿತ್ರವನ್ನು ಬರೆಸಿಕೊಳ್ಳುವ ಮೂಲಕ ಮೂಲಕ ಸುದ್ದಿಯಾಗಿದ್ದರು.

English summary
Kannada Actress Shwetha Srivatsav Gives Birth to Baby Girl
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada