ದರ್ಶನ್ ವಿಚಾರದಲ್ಲಿ ನಿಜವಾಗ್ತಿದೆಯಾ ಆ ಸ್ವಾಮೀಜಿ ನುಡಿದ ಭವಿಷ್ಯ..?
''ವಿವಾದ''ದ ಜೊತೆ ಚಾಲೆಂಜಿಂಗ್ ಸ್ಟಾರ್ ''ದರ್ಶನ್'' ಅವರಿಗೆ ಇರುವ ಸಂಬಂಧ ಇಂದು ನಿನ್ನೆಯದಲ್ಲ. ವಿವಾದದ ಜೊತೆ ವರ್ಷಾನು ವರ್ಷಗಳಿಂದ ಅವಿನಾಭಾವ ಸಂಬಂಧವನ್ನ ದರ್ಶನ್ ಬೆಳೆಸಿಕೊಂಡು ಬಂದಿದ್ದಾರೆ. ಆದರೆ ಈಗ ಈ ''ಸಂಬಂಧ''ಕ್ಕೆ ಅಭಿಮಾನಿಗಳ ಪ್ರೀತಿಯ ಬಾಕ್ಸಾಫೀಸ್ ಸುಲ್ತಾನ್ ದರ್ಶನ್ ''ಎಳ್ಳು ನೀರು'' ಬಿಡುವುದು ಒಳ್ಳೇಯದು. ಇಲ್ಲದೇ ಇದ್ದರೆ ''ನೆಮ್ಮದಿ''ಯ ಬದುಕಿನ ಕೀಲಿ ಕೈಯನ್ನ ದರ್ಶನ್ ಕಳೆದುಕೊಳ್ಳಲಿದ್ದಾರೆ.
ಹೌದು, ನಿಮಗೆ ಗೊತ್ತಿರಲಿ.. ಕಳೆದ ಕೆಲ ದಿನಗಳ ಹಿಂದೆ ''ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು'' ದರ್ಶನ್ ಅವರ ವಿಚಾರದಲ್ಲಿ ಭವಿಷ್ಯವನ್ನ ನುಡಿದಿದ್ದರು. ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ತುಂಬಾನೇ ಕಷ್ಟ ಪಟ್ಟು ಮೇಲೆ ಬಂದವರು. ಅವರಲ್ಲಿನ ಪ್ರತಿಭೆ ಹಾಗೂ ಅವರು ಪಡೆದ ಪ್ರಸಿದ್ಧಿ ನಿಜಕ್ಕೂ ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರ ಅಂದಿದ್ದರು. ಆದರೆ ಇದೇ ಸಮಯದಲ್ಲಿ ಈ ವರ್ಷ ದರ್ಶನ್ ಅವರ ಮೈಯೆಲ್ಲ ಕಣ್ಣಾಗಿರಬೇಕು ಎಂದು ಎಚ್ಚರಿಸಿದ್ದರು. ದರ್ಶನ್ ಅವರ ಸುತ್ತ ಮುತ್ತ ರಕ್ಷಣಾವಲಯ ಸೂಕ್ತ ಎಂದು ಹೇಳಿದ್ದರು ''ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು''.
ಕಾಟೇರ ಗೆಲುವಿನ ಬೆನ್ನಲ್ಲಿಯೇ ದರ್ಶನ್ ''ಟೈಮ್ ಸರಿ ಇಲ್ಲ'' ಅಂದಿದ್ದ ''ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು'' ಅವರ ನೆಮ್ಮದಿಗೆ ''ಭಂಗ'' ತರುವಂತಹ ಅನೇಕ ಘಟನಾವಳಿಗಳು ನಡೆಯುತ್ತವೆ, ಆದ್ದರಿಂದ ದರ್ಶನ್ ''ಎಚ್ಚರಿಕೆ''ಯಿಂದ ಇದ್ದರೆ ಒಳ್ಳೇಯದು ಅಂದಿದ್ದರು. ''ಅನಾರೋಗ್ಯ ಭಾದೆ''.. ''ಮಾನಹಾನಿ''.. ''ಷಡ್ಯಂತ್ರ''.. ಇವೆಲ್ಲವೂ ಘಟಿಸಲಿವೆ ಅಂದಿದ್ದರು.

ಕಾಕತಾಳೀಯವಾ ಗೊತ್ತ್ ಇಲ್ಲ. ಈ ''ವರ್ಷದ ಆರಂಭ''ದಿಂದನೇ ದರ್ಶನ್ ಅವರ ಹೆಸರು ''ವಿವಾದ-ಪ್ರಮಾದ''ದಿಂದನೇ ಸದ್ದು ಮಾಡುತ್ತಿದೆ. ಅದು ''ಪವಿತ್ರಾ ಗೌಡ ಫೋಟೋ ಪ್ರಸಂಗ'' ಇರಬಹದು.. ''ವಿಜಯ್ ಲಕ್ಷ್ಮೀ ದರ್ಶನ್'' ಅವರು ಪವಿತ್ರಾ ಮೇಲೆ ಮಾಡಿದ ''ಟೀಕಾಸ್ತ್ರ'' ಇರಬಹುದು. ದರ್ಶನ್ ಸುತ್ತ ನಿರ್ಮಾಣವಾಗಿದ್ದು ವಿವಾದದ ಹುತ್ತಾನೇ.

ಇನ್ನೂ.. ''ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ ಹೋಯಿತು''.. ಅನ್ನುವಂತೆ, ದರ್ಶನ್.. ''ಬೆಳ್ಳಿ ಪರ್ವ'' ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾತು ಇವರ ಸುತ್ತ ಮುತ್ತನೇ ಸ್ಫೋಟವಾಯಿತು. ''ಇವತ್ತು ಇವಳು ಇರ್ತಾಳೆ.. ನಾಳೆ ಅವಳು ಇರ್ತಾಳೆ''.. ಅನ್ನುವ ಮಾತು ಅನೇಕರನ್ನ ಕೆರಳಿಸಿತ್ತು. ದರ್ಶನ್ ಅವತ್ತು ಆಡಿದ ಈ ಮಾತುಗಳಿಗೆ ಕರುನಾಡಿನೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಇನ್ನೂ ನಿರ್ಮಾಪಕ ''ಉಮಾಪತಿ ಶ್ರೀನಿವಾಸ್'' ವಿಚಾರದಲ್ಲಿಯೂ ಕೂಡ ಆಗಿದ್ದು ಇದೆ. ''ಕಾಟೇರ'' ಚಿತ್ರದ ''ಕ್ರೆಡಿಟ್'' ವಿಚಾರದಲ್ಲಿ ಮತ್ತೆ ಆರಂಭವಾದ ಇಬ್ಬರ ನಡುವೆ ವಾಕ್ಸಮರ ಗಾಂಧಿನಗರದಲ್ಲಿ ಬಿರುಗಾಳಿಯನ್ನ ಎಬ್ಬಿಸಿತ್ತು. ಅವತ್ತು ಉಮಾಪತಿ ಶ್ರೀನಿವಾಸ್ ವಿರುದ್ಧ ಮಾತನಾಡುವ ಭರದಲ್ಲಿ ದರ್ಶನ್ ''ತಗಡು''.. ''ಗುಮ್ಮಸ್ಕೋತಿಯಾ''.. ಎಂಬ ಪದಗಳನ್ನ ಬಳಸಿ ಮತ್ತೆ ಬೇಡದ ಕಾರಣಕ್ಕೆ ಸುದ್ದಿಯಾದರು.
ಇದೆಲ್ಲದರ ನಡುವೆ ನಡೆದ ''ಪಾರ್ಟಿ'' ಪ್ರಕರಣ ದರ್ಶನ್ ಅಂದರೆ ''ಕಿರಿಕ್ ಪಾರ್ಟಿ'' ಎಂಬ ಮಾತುಗಳಿಗೆ ಕಾರಣವಾಯಿತು. ಇದೀಗ ''ಗಜಪಡೆ''ಯ ಗದ್ದಲ.

''ಗಜಪಡೆ'' ಗದ್ದಲದಿಂದ ದರ್ಶನ್ ಹೆಸರು ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದೆ. ಕರುನಾಡಿನಾದ್ಯಂತ ಆ ಕಿಡಿಗೇಡಿ ಗಜಪಡೆ ಎಂಬ ವ್ಯಕ್ತಿಯ ವಿರುದ್ಧ ಆಕ್ರೋಶದ ಅಲೆ ಎದ್ದಿದೆ. ''ಗಾಂಧಿನಗರ''ದಿಂದ ''ವಿಧಾನಸೌಧ''ದವೆರಗೂ ಈ ವಿಚಾರ ಚರ್ಚೆಗೀಡಾಗಿದೆ. ಇಷ್ಟೆಲ್ಲ ಆದರೂ ಕೊಳಕು ಮನಸ್ಥಿತಿಯ ಆ ವ್ಯಕ್ತಿ ಎಲ್ಲಿದ್ದಾನೆ ಅನ್ನುವುದು ಇನ್ನೂ ಗೊತ್ತಾಗದೇ ಇರುವುದು ಬೇರೆ ವಿಷಯ.
ಈ ಎಲ್ಲಾ ಕಾರಣಗಳಿಂದ ಈಗ ''ದರ್ಶನ್'' ವಿಚಾರದಲ್ಲಿ ''ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ''ಗಳು ನುಡಿದಿರುವ ಭವಿಷ್ಯ ಎಲ್ಲ ನಿಜವಾಗುತ್ತಿದೆ ಅನ್ನುವ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ಸದ್ಯಕ್ಕೆ ವ್ಯಕ್ತವಾಗುತ್ತಿದೆ. ಇನ್ನೂ ದರ್ಶನ್ ಮೊನ್ನೆಯಷ್ಟೇ ''ಕೈ ಶಸ್ತ್ರ ಚಿಕಿತ್ಸೆ''ಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಹೇಳಿರುವ ''ಅನಾರೋಗ್ಯದ ಭವಿಷ್ಯ''ವನ್ನೂ ಅನೇಕರು ನೆನಪಿಸಿಕೊಂಡು ಸ್ವಾಮೀಜಿಗಳು ಹೇಳಿರುವಂತೆ ದರ್ಶನ್ ಟೈಮ್ ನಿಜಕ್ಕೂ ಸರಿ ಇಲ್ಲ ಎನ್ನುತ್ತಿದ್ದಾರೆ.


Click it and Unblock the Notifications











