twitter
    For Quick Alerts
    ALLOW NOTIFICATIONS  
    For Daily Alerts

    ಸಂಚಾರಿ ವಿಜಯ್‌ಗೆ ಸಂತಾಪ ಸೂಚಿಸಿದ ಸಿದ್ದರಾಮಯ್ಯ, ಮಾಧುಸ್ವಾಮಿ

    By ಫಿಲ್ಮಿಬೀಟ್ ಡೆಸ್ಕ್
    |

    ಇತ್ತೀಚೆಗಷ್ಟೆ ಅಪಘಾತದಲ್ಲಿ ನಿಧನರಾದ ನಟ ಸಂಚಾರಿ ವಿಜಯ್‌ಗೆ ಇಂದು ವಿಧಾನಸಭೆ ಕಲಾಪದಲ್ಲಿ ಸಂತಾಪ ಸೂಚನೆ ಮಾಡಲಾಯಿತು.

    ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಮಾಧುಸ್ವಾಮಿ ಸೇರಿ ಇನ್ನೂ ಕೆಲವರು ಸಂಚಾರಿ ವಿಜಯ್ ಕುರಿತು ಮಾತನಾಡಿ, ಸಂತಾಪ ಸೂಚಿಸಿದರು.

    ಸಂತಾಪ ಸೂಚನೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ''ಬಹಳ ಚಿಕ್ಕ ವಯಸ್ಸಿನಲ್ಲಿ ವಿಜಯ್ ನಿಧನರಾದರು, ರಂಗಭೂಮಿ, ಕಿರುಚಿತ್ರ ಹಾಗೂ ಚಲನಚಿತ್ರದಲ್ಲಿ ನಟಿಸಿದ್ರು, ನಾನು ಅವನಲ್ಲ ಅವಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು, ಮಂಗಳಮುಖಿಯರ ಅಭಿನಯ ಮಾಡುವುದು ಕಷ್ಟದ ಕೆಲಸ, ಅದನಯ ಬಹಳ ಚೇನ್ನಾಗಿ ಅಭಿನಯಿಸಿದ್ರು, 'ಹರಿವು' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು, ಕೊರೊನಾ ಸಂಧರ್ಭದಲ್ಲಿ ಜನರಿಗೆ ಸ್ಪಂದನೆ ಮಾಡುದ್ರು, ಬಹಳವರ್ಷ ಚಿತ್ರರಂಗದಲ್ಲಿ ಇರಬೇಕಿತ್ತು.ಅಪಘಾತದಲ್ಲಿ ವಿಜಯ್ ಕಾಲವಾದರು, ಪ್ರತಿಭಾವಂತ ನಟನನ್ನ ಕನ್ನಡ ಚಿತ್ರರಂಗ ಕಳೆದುಕೊಂಡಿದೆ, ಅವರ ಆತ್ಮಕ್ಕೆ ಶಾಂತಿಸಿಗಲಿ'' ಎಂದರು ಸಿದ್ದರಾಮಯ್ಯ.

    ''ನಾನು ಅಭಿ‌ನಯದಲ್ಲಿ ಅತ್ಯುತ್ತಮ ಪರಿಣಿತಿ ಹೊಂದಿದ್ರು, ನಾನು ಸಿನಿಮಾ ನೋಡಿಲ್ಲ, ನೀನು ನೋಡಿದ್ದೀಯೇನಪ್ಪಾ ಎಂದ ಸಿದ್ದರಾಮಯ್ಯ, ಸಚಿವ ಆನಂದ್ ಸಿಂಗ್ ಗೆ ಪ್ರಶ್ನೆ ಮಾಡಿದರು, 'ನಾನೂ ನೋಡಿಲ್ಲ'' ಎಂದು ಸಚಿವ ಆನಂದ್ ಸಿಂಗ್ ಹೇಳಿದರು. 'ಓ.. ನೀನು ನನ್ ಥರಾನೇ' ಎಂದ ಸಿದ್ದರಾಮಯ್ಯ

    ಅವರ 'ಹರಿವು' ಸಿನಿಮಾಗೆ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಆಗಿತ್ತು ಪಾಪ ಅಪಘಾತದಲ್ಲಿ ವಿಜಯ್ ತೀರಿಕೊಂಡಿದ್ದಾರೆ'' ಎಂದು ಮರುಕ ವ್ಯಕ್ತಪಡಿಸಿದರು ಸಿದ್ದರಾಮಯ್ಯ.

    ನಿನ್ನೆಯೇ ಸಂತಾಪ ಸಲ್ಲಿಸಬೇಕಿತ್ತು: ಸಿದ್ದರಾಮಯ್ಯ

    ನಿನ್ನೆಯೇ ಸಂತಾಪ ಸಲ್ಲಿಸಬೇಕಿತ್ತು: ಸಿದ್ದರಾಮಯ್ಯ

    ''ನಾನು ಹೆಚ್ಚಾಗಿ ಸಿನಿಮಾ ನೋಡುವುದಿಲ್ಲ, ನೀವು ಸಿನಿಮಾ‌ ನೋಡ್ತಿರಾ?'' ಎಂದು ಸಿಎಂ ಬೊಮ್ಮಾಯಿಯವರನ್ನು ಸಿದ್ದರಾಮಯ್ಯ ಕೇಳಿದರು. ಈ ವೇಳೆ, ಇಲ್ಲ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ಆಗ ''ನೀವು ನನ್ನ ತರಹಾನೇ'' ಎಂದರು ಸಿದ್ದರಾಮಯ್ಯ. ''ಸಂಚಾರಿ ವಿಜಯ್‌ ಅವರಿಗೆ ನಿನ್ನೆಯೇ ಸಂತಾಪ ಸಲ್ಲಿಸಬೇಕಾಗಿತ್ತು .ಆದ್ರೆ ಯಾಕೋ ಪಟ್ಟಿಯಲ್ಲಿರಲಿಲ್ಲ ಸಂಚಾರಿ ವಿಜಯ್‌ ಉತ್ತಮವಾದ , ಪ್ರತಿಭಾನ್ವಿತ ನಟರಾಗಿದ್ದರು'' ಎಂದರು ಸಿದ್ದರಾಮಯ್ಯ. ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ ಬಂದಾಗ ಸಿದ್ದರಾಮಯ್ಯ ಅವರು ವಿಜಯ್‌ಗೆ ಸನ್ಮಾನ ಮಾಡಿದ್ದರು.

    ರಾಷ್ಟ್ರಪ್ರಶಸ್ತಿ ಬರುತ್ತೆ ಅಂತ ಹೇಳಿದ್ದೆ: ಮಾಧುಸ್ವಾಮಿ

    ರಾಷ್ಟ್ರಪ್ರಶಸ್ತಿ ಬರುತ್ತೆ ಅಂತ ಹೇಳಿದ್ದೆ: ಮಾಧುಸ್ವಾಮಿ

    ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ''ವಿಜಯ್ ಊರು ನನ್ನ ಊರಿಗೆ ಎರಡು ಕಿಮೀ ಮಾತ್ರ, ತಿಪಟೂರಿನಲ್ಲೇ ಓದಿದವನು, ನಾಟಕ ಮಾಡೋಕೆ ಸ್ಕೂಟರ್ ಮಾರಿದ್ದರು ಅವರು, ನಿರ್ದೇಶಕ ಲಿಂಗದೇವರು ನನ್ನ ಸಂಬಂಧಿ, 'ನಾನವನಲ್ಲ ಅವಳು' ಎಂಬ ಸಿನಿಮಾ ತೆಗೆದರು, ಅವರ ಕಲ್ಪನೆಯಂತೆ ಸಿನಿಮಾ ಮೂಡಿಬಂದಿತ್ತು, ಆ ಸಿನಿಮಾ ನೋಡಿದರೆ ಮಂಗಳ ಮುಖಿಯರ ಸ್ಥಿತಿಗತಿ ಅರಿವಾಗುತ್ತದೆ, ಮೊದಲೇ ಸಿನಿಮಾ ಬಗ್ಗೆ ನನ್ನ ಜೊತೆ ಮಾತನಾಡಿದ್ದರು, ನಾನು ರಾಷ್ಟ್ರಪ್ರಶಸ್ತಿ ಬರುತ್ತೆ ಅಂದಿದ್ದೆ'' ಎಂದು ನೆನಪು ಮಾಡಿಕೊಂಡರು.

    ನನಗೆ ಬಹಳ ನೋವಾಯ್ತು: ಮಾಧುಸ್ವಾಮಿ

    ನನಗೆ ಬಹಳ ನೋವಾಯ್ತು: ಮಾಧುಸ್ವಾಮಿ

    ''ಅದರಂತೆ ವಿಜಯ್ ಗೆ ರಾಷ್ಟ್ರಪ್ರಶಸ್ತಿ ಬಂತು, ಕೊರೊನಾ ಕಾಲದಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿದ್ದ, ಮೋಟಾರ್ ಸೈಕಲ್ ನಿಂದ ಬಿದ್ದು ಮರಣಹೊಂದಿದ, ನನಗಂತೂ ತುಂಬಾ ನೋವಾಯ್ತು, ಅವನನ್ನ ಗುರ್ತಿಸುವಲ್ಲಿ ನಾವು ಎಡವಿದ್ದೇವೆ, ಅವನ ಸಂಸ್ಕಾರ ಅವನ ಸ್ನೇಹಿತನ ಭೂಮಿಯಲ್ಲಿ ಮಾಡಿದ್ರು, ಈ ಮಾತು ಕೇಳಿ ನನಗೆ ತುಂಬಾ ನೋವಾಗಿತ್ತು'' ಎಂದು ಮಾಧುಸ್ವಾಮಿ ಅವರು ವಿಜಯ್ ಅನ್ನು ನೆನಪು ಮಾಡಿಕೊಂಡರು.

    ಜೂನ್ 12 ರಂದು ಆದ ಅಪಘಾತ

    ಜೂನ್ 12 ರಂದು ಆದ ಅಪಘಾತ

    ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಜೂನ್ 12ರಂದು ರಾತ್ರಿ ಗೆಳೆಯನೊಟ್ಟಿಗೆ ಬೈಕ್‌ನಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಸಂಚಾರಿ ವಿಜಯ್ ತಲೆ ಲೈಟ್ ಕಂಬಕ್ಕೆ ಒಡೆದು ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕತ್ಸೆ ನೀಡಲಾಯಿತು. ಆದರೆ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎರಡು ದಿನಗಳ ಬಳಿಕ ವಿಜಯ್‌ರನ್ನು ಮೃತ ಎಂದು ಘೋಷಿಸಲಾಯಿತು. ಸಂಚಾರಿ ವಿಜಯ್‌ರ ನಿಧನಕ್ಕೆ ಅಂದಿನ ಸಿಎಂ ಯಡಿಯೂರಪ್ಪ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಸೇರಿ ಹಲವರು ಸಂತಾಪ ಸೂಚಿಸಿದ್ದರು. ಸಿಎಂ ಯಡಿಯೂರಪ್ಪ ಸೇರಿ ಹಲವರು ಅಂತಿಮ ದರ್ಶನ ಪಡೆದರು.

    English summary
    Condolence expressed to Sanchari Vijay is assembly today. former CM Siddaramaiah and minister Maduswamy talked about Sanchari Vijay.
    Tuesday, September 14, 2021, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X