ಪುನೀತ್ 'ಮೈತ್ರಿ' ನೋಡಲು ಸಿದ್ಧರಾದ ಸಿದ್ದರಾಮಯ್ಯ

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಮೈತ್ರಿ' ಚಿತ್ರ ಕೇವಲ ಅಭಿಮಾನಿಗಳನ್ನಷ್ಟೇ ಅಲ್ಲ ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸನ್ನೂ ಗೆದ್ದ ಚಿತ್ರ. ಈ ಚಿತ್ರದ ಬಗ್ಗೆ ವಿಮರ್ಶಕರ ಒಕ್ಕೊರಲ ಮೆಚ್ಚುಗೆ ವ್ಯಕ್ತವಾಗಿರುವುದು ಗೊತ್ತೇ ಇದೆ.

ಇತ್ತೀಚೆಗೆ ಕುಣಿಗಲ್ ನಲ್ಲಿ ನಡೆದ ಆರ್ಯ ಈಡಿಗ ಸಂಸ್ಥಾನ ಕಟ್ಟಡ ಉದ್ಘಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪುನೀತ್ ರಾಜ್ ಕುಮಾರ್ ಆಗಮಿಸಿದ್ದರು. [ಮೈತ್ರಿ ಚಿತ್ರ ವಿಮರ್ಶೆ]

Siddaramaiah expressed desire to watch Mythri

ಈ ಸಂದರ್ಭದಲ್ಲಿ ಇಬ್ಬರ ನಡುವೆ ಔಪಚಾರಿಕ ಮಾತುಕತೆ ನಡೆಯಿತು. ಮುಖ್ಯಮಂತ್ರಿಗಳು ತಮ್ಮ ನೂರೆಂಟು ಒತ್ತಡಗಳನ್ನು ಮರೆತು ಪುನೀತ್ ಜೊತೆ ಸ್ವಲ್ಪ ಸಮಯ ಹರಟಿದರು. ತಮ್ಮ ಮೈತ್ರಿ ಚಿತ್ರದ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಎಲ್ಲರೂ ಚಿತ್ರ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಇನ್ನೂ ಚಿತ್ರ ನೋಡಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ಮೈತ್ರಿ ವೀಕ್ಷಿಸುತ್ತೇನೆ ಎಂದರು. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ]

ಮುಖ್ಯಮಂತ್ರಿಗಳ ಈ ಮಾತಿಗೆ ಪುನೀತ್ ರಾಜ್ ಕುಮಾರ್ ಥ್ರಿಲ್ಲಾಗಿದ್ದಾರೆ. ಒಬ್ಬ ನಟನಿಗೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು. ನವಿಲಾದವರು, ಜಟ್ಟದಂತಹ ಭಿನ್ನ ಚಿತ್ರಗಳನ್ನು ನಿರ್ದೇಶಿಸಿದ ಬಿ.ಎಂ. ಗಿರಿರಾಜ್ ಅವರ 'ಮೈತ್ರಿ' ಚಿತ್ರ ಪುನೀತ್ ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದೆ.

ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಚಿತ್ರಗಳ ನಡುವೆ ಬಂದಂತಹ ಈ ಪ್ಯಾರಲಲ್ ಸಿನಿಮಾ ಪ್ರೇಕ್ಷಕರಿಗೆ ಭಿನ್ನ ಅನುಭವ ಕೊಟ್ಟಿದೆ. ಈ ಚಿತ್ರವನ್ನು ಮಲಯಾಳಂ ಮತ್ತು ತೆಲುಗಿನಲ್ಲಿ ರೀಮೇಕ್ ಮಾಡುವ ಸಿದ್ಧತೆಗಳು ಭರದಿಂದ ಸಾಗುತ್ತಿವೆ. (ಏಜೆನ್ಸೀಸ್)

More from Filmibeat

English summary
Karnataka chief minister Siddaramaiah praises Kannada movie Mythri in a function held at Kunigal recently, at which Puneeth was the chief guest. CM also expressed his desire to watch the film soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X