twitter
    For Quick Alerts
    ALLOW NOTIFICATIONS  
    For Daily Alerts

    ಟಗರು ಕಣ್ಣಿಗೇಕೆ ಬೀಳಲಿಲ್ಲ 'ಪೊಗರು' ಅಪಸವ್ಯಗಳು?

    By ಫಿಲ್ಮಿಬೀಟ್ ಡೆಸ್ಕ್
    |

    ಎಲ್ಲ ಜಾತಿ, ಸಮುದಾಯಗಳಿಗೂ ಸಮಾನತೆ ಸಿಗಬೇಕು, ಎಲ್ಲ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂದೆಲ್ಲ ಉದ್ದುದ್ದ ಭಾಷಣ ಮಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಟೀಕೆಗೆ ಗುರಿಯಾಗಿದೆ.

    Recommended Video

    ಟಗರು ಕಣ್ಣಿಗೆ ಬೀಳಲಿಲ್ಲವೇ ಪೊಗರು ಅಸಹ್ಯಗಳು | Filmibeat Kannada

    ಮಹಿಳೆಯರಿಗೆ ಸಮಾನತೆ, ಮಹಿಳೆಯರಿಗೆ ಸೂಕ್ತ ಗೌರವ, ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಿದ್ದರಾಮಯ್ಯ ಅವರು ಖಂಡಿಸಿರುವ ಅನೇಕ ಉದಾಹರಣೆಗಳಿವೆ. ಆದ್ರೀಗ, ಮಹಿಳಾ ವರ್ಗಕ್ಕೆ ಅಪಮಾನ ಮಾಡಿರುವಂತಹ ಚಿತ್ರದ ಬೆಂಬಲಕ್ಕೆ, ಪ್ರಚಾರಕ್ಕೆ ಸಿದ್ದರಾಮಯ್ಯ ಸಾಥ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

    ದಾವಣಗೆರೆಯಲ್ಲಿ ಫೆಬ್ರವರಿ 14 ರಂದು ನಟ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನೆರವೇರಿದೆ. ಬಹಳ ಅದ್ದೂರಿಯಾಗಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

    Siddaramaiah Faces Heat from Some People for Attending Pogaru Movie Audio Launch

    ವೇದಿಕೆ ಮೇಲೆ ಮಾತನಾಡಿದ ಅವರು ''ನಟ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್ ಅವರು ಪ್ರೀತಿಯಿಂದ ಆಹ್ವಾನ ನೀಡಿದರು. ಬರಲೇಬೇಕೆಂದು ಮನವಿ ಮಾಡಿದರು. ಹಾಗಾಗಿ, ನಾನು ಪೊಗರು ಕಾರ್ಯಕ್ರಮಕ್ಕೆ ಬಂದೆ, ಈ ಚಿತ್ರ ಯಶಸ್ವಿಯಾಗಲಿ, ಬಹಳ ದೊಡ್ಡ ಮಟ್ಟದಲ್ಲಿ ಗಳಿಕೆ ಕಾಣಲಿ'' ಎಂದು ಹಾರೈಸಿದರು. ಆದರೆ, ಈ ಚಿತ್ರದ ಹಾಡಿನಿಂದ ಸಮಾಜಕ್ಕೆ ತಲುಪುತ್ತಿರುವ ತಪ್ಪು ಸಂದೇಶ ಮಾತ್ರ ಸಿದ್ದರಾಮಯ್ಯ ಅವರು ಕಣ್ಣಿಗೆ ಬಿದ್ದಿಲ್ಲ.

    ಖರಾಬು ಹಾಡಿನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರನ್ನು ನಡೆಸಿಕೊಂಡಿರುವ ರೀತಿಯನ್ನು ಮಹಿಳೆ ಸಂಘಟನೆ ಹಾಗೂ ಸಮಾಜಪರ ಹೋರಾಟಗಾರರು ಖಂಡಿಸಿದ್ದರು. ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಅವರು ಖುದ್ದು ಈ ಹಾಡನ್ನು ವಿರೋಧಿಸಿದ್ದರು.

    Siddaramaiah Faces Heat from Some People for Attending Pogaru Movie Audio Launch

    'ಸುಸಂಸ್ಕೃತರು ಯಾರು ಹೀಗೆ ಮಾಡಲ್ಲ. ಇದು ಮನರಂಜನೆ ಅಲ್ಲ. ಮಹಿಳೆಯರನ್ನು ಇಷ್ಟು ಕೆಳಮಟ್ಟದಲ್ಲಿ ತೋರಿಸಿ ಮನರಂಜನೆ ಪಡೆಯಬೇಕಿಲ್ಲ. ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ಇದನ್ನು ನೋಡಿದ್ರೆ ಅಸಹ್ಯವಾಗುತ್ತೆ' ಎಂದು ಎಂದು ಫಿಲ್ಮಿಬೀಟ್ ಕನ್ನಡದ ಜೊತೆ ಮಾತಾಡಿದ ವೇಳೆ ಕಿಡಿಕಾರಿದ್ದರು.

    ಈ ಹಾಡು ರಿಲೀಸ್ ಆದ ಸಂದರ್ಭದಲ್ಲಿ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಟ್ವಿಟ್ಟರ್‌ ಮೂಲಕ ಹರಿಹಾಯ್ದಿದ್ದರು. 'ಮಹಿಳೆಯೊಬ್ಬರನ್ನು ಪದೇ ಪದೇ 'ನಾಯಿ, ನರಿ, ಕ್ರಿಮಿ, ಕೀಟ' ಎಂದು ಕರೆಯುತ್ತಾರೆ. 'ನಂತರ ಅವರು ಹಾಡೊಂದರಲ್ಲಿ ನಟಿಸುವಾಗ ಅಲ್ಲಿ ಪ್ರಣಯದ ಹೆಸರಿನಲ್ಲಿ ನಾಯಕಿಯ ಕೂದಲನ್ನು ಎಳೆಯುತ್ತಾರೆ. ನಾಯಕಿಯನ್ನು ಕರೆಂಟ್ ಶಾಕ್ ಮತ್ತು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕುತ್ತಾರೆ. ಅಲ್ಲದೆ ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಾರೆ. ಒಪ್ಪಿಗೆ ಇಲ್ಲದಿದ್ದರೂ ಒತ್ತಾಯಿಸುವುದು 'ಕಿರುಕುಳ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    Siddaramaiah Faces Heat from Some People for Attending Pogaru Movie Audio Launch

    ಸಮಾಜದ ಮೇಲೆ ದುಷ್ಪರಿಣಾಮ ಬೀರಿರುವ ಈ ಹಾಡು ಹಾಗೂ ಅದಕ್ಕೆ ಎದುರಾಗಿರುವ ಟೀಕೆಗಳ ಬಗ್ಗೆ ಸಿದ್ದರಾಮಯ್ಯ ಏಕೆ ಯೋಚಿಸಲಿಲ್ಲ. ವೇದಿಕೆ ಮೇಲೆ ಮಾತನಾಡುವ ವೇಳೆಯಾದರೂ ''ಸಿನಿಮಾ ಬಹಳ ಬೇಗ ಜನರಿಗೆ ತಲುಪುತ್ತೆ, ಅಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಬೇಡಿ, ಒಬ್ಬ ಮಹಿಳೆಯನ್ನು ಈ ರೀತಿ ಬಿಂಬಿಸುವುದು ತಪ್ಪು'' ಎಂದು ಹೇಳಬಹುದಿತ್ತು ಅಲ್ಲವೇ?

    English summary
    Siddaramaiah under scanner for attending pogaru movie audio launch, pogaru movie story based on Atrocities on women. Know more.
    Monday, February 15, 2021, 17:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X