twitter
    For Quick Alerts
    ALLOW NOTIFICATIONS  
    For Daily Alerts

    ಟಿಎನ್ ಸೀತಾರಾಮ್ ಮಹಾಪರ್ವ ಸಂವಾದದಲ್ಲಿ ಸಿದ್ದು

    By Rajendra
    |

    ಗೌರಿಬಿದನೂರು ಸೀತಾರಾಮ್ ಅವರ ಹೊಸ ಧಾರಾವಾಹಿ 'ಮಹಾಪರ್ವ' ಶೀಘ್ರದಲ್ಲೇ ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ. ಈ ಹಿನ್ನೆಲೆಯಲ್ಲಿ ಧಾರಾವಾಹಿ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

    ಶನಿವಾರ (ಜೂ.15) ಸಂಜೆ 6ಗಂಟೆಗೆ ಸಂವಾದ ಕಾರ್ಯಕ್ರಮ ಆರಂಭ. ಈ ಸಂವಾದದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪಾಲ್ಗೊಳ್ಳುತ್ತಿರುವುದು. ಸೀತಾರಾಮ್ ಧಾರಾವಾಹಿಗಳಲ್ಲಿ ಮುಖ್ಯಮಂತ್ರಿ ಪಾತ್ರಗಳನ್ನು ಪೋಷಿಸಿರುವ ಕಲಾವಿದರು ಸಿದ್ದರಾಮಯ್ಯ ಅವರಿಗೆ ಪ್ರಶ್ನೆಗಳನ್ನು ಕೇಳಲಿದ್ದಾರೆ.

    Siddaramaiah
    ಅಂದರೆ ರೀಲ್ ಸಿಎಂಗಳು ರಿಯಲ್ ಸಿಎಂ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಹಿಂದೆ ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ಹುಲಿವಾನ್ ಗಂಗಾಧರಯ್ಯ, ಟಿ.ಎನ್.ಶ್ರೀನಿವಾಸಮೂರ್ತಿ ಹಾಗೂ ಹನುಮಂತೇಗೌಡ ಸೀರಿಯಲ್ ಸಿಎಂಗಳಾಗಿ ಅಭಿನಯಿಸಿದ್ದಾರೆ.

    ಸೀತಾರಾಮ್ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂವಾದದ ಕಂತನ್ನು 'ಮಹಾಪರ್ವ' ಧಾರಾವಾಹಿ ಪ್ರಸಾರಕ್ಕೂ ಮುನ್ನ ಈಟಿವಿಯಲ್ಲಿ ಪ್ರಸಾರ ಮಾಡಲಾಗುತ್ತದೆ. ಜುಲೈ.1ರಿಂದ ರಾತ್ರಿ 9.30 ಕ್ಕೆ ಮಹಾಪರ್ವ ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರಲಿದೆ.

    ನಾಲ್ಕು ಯಶಸ್ವಿ ಧಾರಾವಾಹಿಗಳನ್ನು ಕೊಟ್ಟ ನಂತರ ಈ ಮಹಾಪರ್ವದ ಬಗ್ಗೆ ಜನರು ಅಪಾರ ನಂಬಿಕೆಯಿಟ್ಟುಕೊಂಡಿರುತ್ತಾರೆ. ಅವರ ನಿರೀಕ್ಷೆಯನ್ನು ಕಂಡು ಒಂದು ಕ್ಷಣ ಭಯವಾಗುತ್ತಿದೆ. ಹಿಂದಿನ ಧಾರಾವಾಹಿಗಳಲ್ಲಿ ನಟಿಸಿದ ಕಲಾವಿದರನ್ನು ಬಿಟ್ಟು ಹೊಸ ಪ್ರತಿಭೆಗಳಿಗೆ ಈ ಧಾರಾವಾಹಿಯಲ್ಲಿ ಅವಕಾಶ ನೀಡುತ್ತಿದ್ದೇನೆ. ವೈರುಧ್ಯಗಳ ನಡುವೆ ಬದುಕುತ್ತಿರುವ ಮನುಷ್ಯನ ಜೀವನ ಕುರಿತಾಗಿ ಈ ಧಾರಾವಾಹಿ ಮೂಡಿಬರಲಿದೆ ಎಂದು ನಿರ್ದೇಶಕ ಟಿ.ಎನ್.ಸೀತಾರಾಂ ತಿಳಿಸಿದರು. (ಒನ್ಇಂಡಿಯಾ ಕನ್ನಡ)

    English summary
    A prominent Kannada film and TV serial director, actor and writer T N Seetharam or Gouribidanur Seetharam organised a debate on his new serial 'Maha Parva' at Jnana Jyothi auditorium, Bangalore on 15th June at 6 pm IST, which will be aired on Etv Kannada soon. Chief minister Siddaramaiah participating in the programme. 
    Saturday, June 15, 2013, 16:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X