ನಟರ ಮೇಲೆ ಐಟಿ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಸಿನಿಮಾ ನಟ ಮತ್ತು ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ ಹಿಂದಿನ ಕಾರಣ ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇದನ್ನ ವಿಶ್ಲೇಷಿಸುತ್ತಿದ್ದಾರೆ.

ಸ್ಟಾರ್ ನಟರ ಮನೆ ಮೇಲೆ ನಡೆದಿರುವ ದಾಳಿ ಬಗ್ಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ ಅವರು, ''ಈ ದಾಳಿಯ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ'' ಎಂದಿದ್ದಾರೆ.

''ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿದ್ದರೆ ಸಂಬಂಧಿತ ಲೆಕ್ಕಪತ್ರಗಳ ಪರಿಶೀಲನೆ ನಡೆಸುವ ಅಧಿಕಾರ ಐಟಿ ಇಲಾಖೆಗೆ ಇದೆ.‌ ಅದನ್ನು ಗೌರವಿಸೋಣ. ಆದರೆ ಮೋದಿ ಸರ್ಕಾರದಲ್ಲಿ ಐಟಿ ಇಲಾಖೆಯ ಕಾರ್ಯಶೈಲಿಯನ್ನು ಗಮನಿಸಿದರೆ ಅದು ನಡೆಸುತ್ತಿರುವ ದಾಳಿಯ ಹಿಂದೆ ದುರುದ್ದೇಶ ಇರಬಹುದೆಂಬ ಅನುಮಾನ ಮೂಡುತ್ತಿದೆ'' ಎಂದು ಟ್ವೀಟ್ ಮಾಡಿದ್ದಾರೆ.

Siddaramaiah react on IT attack of Film actors

ಮೇಲ್ನೋಟಕ್ಕೆ ಇದು ಬಿಗ್ ಬಜೆಟ್ ಸಿನಿಮಾಗಳ ಕಾರಣದಿಂದ ಆಗಿರುವ ದಾಳಿ ಎನ್ನಲಾಗುತ್ತಿದೆ. ಮತ್ತೊಂದೆಡೆ ನಟ ಮತ್ತು ನಿರ್ಮಾಪಕರು ತೆರಿಗೆ ಮತ್ತು ಆದಾಯದ ಬಗ್ಗೆ ಅನುಮಾನ ಬಂದಿರುವ ಕಾರಣ ಮಾಡಿರುವ ಸಾಮಾನ್ಯವಾದ ರೇಡ್ ಇದು ಎಂದು ಕೂಡ ಹೇಳಲಾಗ್ತಿದೆ.

ಬಟ್, ಸ್ಯಾಂಡಲ್ ವುಡ್ ಮಂದಿಯ ಮೇಲೆ ರೇಡ್ ಮಾಡಿದ್ದಕ್ಕೆ ಅಸಲಿ ಕಾರಣ ಮಾತ್ರ ಸಿಕ್ಕಿಲ್ಲ. ಸದ್ಯ, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ಯಶ್, ವಿಜಯ್ ಕಿರಗಂದೂರ್ ಅವರ ಮನೆ ಮೇಲೆ ಮಾಡಿದ್ದ ಐಟಿ ದಾಳಿ ಅಂತ್ಯವಾಗಿದೆ.

More from Filmibeat

English summary
Congress Leader Siddaramaiah has taken his twitter account to react on IT attack of cinema actors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X