twitter
    For Quick Alerts
    ALLOW NOTIFICATIONS  
    For Daily Alerts

    ನಟ ಪವನ್ ಕುಮಾರ್ ಹೃದಯವಿದ್ರಾವಕ ಮಾತು ಕೇಳಿ ಸಿದ್ದರಾಮಯ್ಯ ಪ್ರತಿಕ್ರಿಯೆ

    |

    ಕನ್ನಡ ಕಿರುತೆರೆಯ ಖ್ಯಾತ ನಟ ಪವನ್ ಕುಮಾರ್ ಕೋವಿಡ್ ನಿಂದಾಗಿ ತಮ್ಮ ಭಾವ ಹಾಗೂ ಅವರ ತಂದೆಯನ್ನು ಕಳೆದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ಆಸ್ಪತ್ರೆ, ಬೆಡ್, ಆಮ್ಲಜನಕ ಸಿಗದೆ ಕೇವಲ ಎರಡು ದಿನಗಳ ಅಂತರದಲ್ಲಿ ಇಬ್ಬರನ್ನು ಕಳೆದುಕೊಂಡಿದ್ದಾರೆ.

    Recommended Video

    ಕೊರೋನಾ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಕಿರುತೆರೆ ನಟ| Filmibeat Kannada

    ಎಷ್ಟು ಪರದಾಡಿದರೂ ಆಸ್ಪತ್ರೆ, ಚಿಕಿತ್ಸೆ ಸಿಗದೆ ನರಳಾಡಿದ ಭಯಾನಕ ಸನ್ನಿವೇಶವನ್ನು ಪವನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಸರ್ಕಾರ ಜನಗಳನ್ನು ಸಾಮೂಹಿಕವಾಗಿ ಕೊಲೆ ಮಾಡುತ್ತಿದೆ' ಎಂದು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.

    ಕೋವಿಡ್‌ನಿಂದ ಕುಟುಂಬದವರನ್ನು ಕಳೆದುಕೊಂಡ ನಟ ಪವನ್, ಸರ್ಕಾರಕ್ಕೆ ಹಾಕಿದರು ಶಾಪಕೋವಿಡ್‌ನಿಂದ ಕುಟುಂಬದವರನ್ನು ಕಳೆದುಕೊಂಡ ನಟ ಪವನ್, ಸರ್ಕಾರಕ್ಕೆ ಹಾಕಿದರು ಶಾಪ

    ಈ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪವನ್ ವಿಡಿಯೋವನ್ನು ಶೇರ್ ಮಾಡಿ, ಹೃದಯವಿದ್ರಾವಕ ಮಾತುಗಳನ್ನು ಕೇಳಿ ಎಂದು ಹೇಳಿದ್ದಾರೆ. ಮುಂದೆ ಓದಿ..

    ಸಿದ್ದರಾಮಯ್ಯ ಪ್ರತಿಕ್ರಿಯೆ

    ಸಿದ್ದರಾಮಯ್ಯ ಪ್ರತಿಕ್ರಿಯೆ

    'ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ BJP4Karnataka ಸರ್ಕಾರದ ಭ್ರಷ್ಟಾಚಾರ, ಅಕ್ರಮ ಮತ್ತು ನಿಷ್ಕ್ರಿಯತೆಯಿಂದ ತನ್ನವರನ್ನು ಕಳೆದುಕೊಂಡ ಈ ದುಃಖತಪ್ತ ಯುವನಟನ ಹೃದಯವಿದ್ರಾವಕ ಮಾತುಗಳನ್ನೊಮ್ಮೆ ಕೇಳಿ' ಎಂದು ಟ್ವೀಟ್ ಮಾಡಿದ್ದಾರೆ.

    ಆಸ್ಪತ್ರೆಯ ಭಯಾನಕ ಸ್ಥಿತಿ ಬಿಚ್ಚಿಟ್ಟ ಪವನ್

    ಆಸ್ಪತ್ರೆಯ ಭಯಾನಕ ಸ್ಥಿತಿ ಬಿಚ್ಚಿಟ್ಟ ಪವನ್

    ನಟ ಪವನ್ ವಿಡಿಯೋ ಮೂಲಕ ಮಾತನಾಡಿ, 'ನಾನು ಕಣ್ಣಾರೆ ನೋಡಿದ್ದೇನೆ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ಆಮ್ಲಜನಕವಿಲ್ಲ. ಆಂಬುಲೆನ್ಸ್ ಗಳಲ್ಲಿ ರೋಗಿಗಳನ್ನು ಇಟ್ಟುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗುತ್ತಿದ್ದಾರೆ. ಸ್ವತಃ ನಾನೇ ಭಾವನಿಗೆ ಆಮ್ಲಜನಕ ಅರೆಂಜ್ ಮಾಡಲು ರಾತ್ರಿಯೆಲ್ಲ ಬೀದಿಗಳಲ್ಲಿ ಅಲೆದಿದ್ದೇನೆ' ಎಂದು ಅಳಲು ತೋಡಿಕೊಂಡಿದ್ದಾರೆ.

    ಸರ್ಕಾರ ರೆಮ್ಡಿಸಿವರ್ ಅನ್ನು ರಫ್ತು ಮಾಡುತ್ತಿದೆ

    ಸರ್ಕಾರ ರೆಮ್ಡಿಸಿವರ್ ಅನ್ನು ರಫ್ತು ಮಾಡುತ್ತಿದೆ

    'ಜನರ ಜೀವ ಉಳಿಸುವ ರೆಮ್ಡಿಸಿವರ್ ಅನ್ನು ಬೇರೆ ದೇಶಕ್ಕೆ ರಫ್ತು ಮಾಡುತ್ತಾ ಕೂತಿದ್ದಾನೆ. ಹೌದು ಈಗ ನಿಲ್ಲಿಸಿದ್ದಾರೆ. ಆದರೂ ನಮಗೆ ಸಿಗುತ್ತಾ ಇಲ್ಲ. ಇನ್ನೂ ಎಷ್ಟು ದಿನ ಒದ್ದಾಡಬೇಕು, ಎಷ್ಟು ಜನ ಸಾಯಬೇಕು. ಈ ಹಿಂದೆ ಕೊರೊನಾ ಬಂದಾಗ ನಾವು ತಯಾರಾಗಿರಲಿಲ್ಲ, ಓಕೆ ಆದರೆ ಈಗ ಏನಾಗಿದೆ ಸರ್ಕಾರಕ್ಕೆ' ಎಂದು ಪ್ರಶ್ನಿಸಿದ್ದಾರೆ.

    ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಹೀಗೆ ಆಗುತ್ತಿರಲಿಲ್ಲ

    ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಹೀಗೆ ಆಗುತ್ತಿರಲಿಲ್ಲ

    'ಈ ಹಿಂದೆ 10,000 ಬೆಡ್‌ಗಳನ್ನು ಹಾಕಿದ್ದರಲ್ಲ ಎಲ್ಲಿ ಹೋಯಿತು ಅದು. ಸರ್ಕಾರ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿದ್ದಿದ್ದರೆ ಈಗ ಹೀಗೆ ಆಗುತ್ತಿರಲಿಲ್ಲ. ನಮ್ಮ ಭಾವ ಬದುಕಿರುತ್ತಿದ್ದರು. ಒಂದೇ ದಿನ ಆರು ಸಾವುಗಳನ್ನು ನಾನು ನೋಡಿದೆ. ಮಾನಸಿಕವಾಗಿ ಜರ್ಜರಿತವಾಗಿ ಹೋಗಿದ್ದೇನೆ' ಎಂದಿದ್ದಾರೆ.

    English summary
    Politician Siddaramaiah reaction to Actor Pawan Kumar viral video about coronavirus. Read on.
    Saturday, April 24, 2021, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X