ಮೇಘನಾ ರಾಜ್ ಮನೆಗೆ ತೆರಳಿ ಧೈರ್ಯ ತುಂಬಿದ ಸಿದ್ಧರಾಮಯ್ಯ ಸೊಸೆ

By ಫಿಲ್ಮ್ ಡೆಸ್ಕ್

ನಟ ಚಿರಂಜೀವಿ ಸರ್ಜಾ ಇನ್ನೂ ನೆನಪು ಮಾತ್ರ. ಚಿರು ಕಳೆದುಕೊಂಡ ನೋವು ಅವರ ಕುಟುಂಬ ಮತ್ತು ಅಭಿಮಾನಿಗಳಲ್ಲಿ ಇನ್ನೂ ಮಾಸಿಲ್ಲ. ಚಿರು ಅಗಲಿಕೆಯ ಆಘಾತದಿಂದ ಹೊರಬರಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ. ಚಿರು ನೆನಪು ಅವರನ್ನು ಸದಾ ಕಾಡುತ್ತಿದೆ. ಅದೆ ನೆನಪಿನಲ್ಲೆ ದಿನಕಳೆಯುತ್ತಿದೆ ಸರ್ಜಾ ಕುಟುಂಬ.

Recommended Video

ಸಿದ್ದರಾಮಯ್ಯನ ಸೊಸೆ ಮೇಘನಾರಾಜ್ ಮನೆಗೆ ಬಂದ್ರು | Smitha Rakesh meets Meghana Raj & Family

ಚಿರು ಪತ್ನಿ ಮೇಘನಾ ರಾಜ್ ನೋಡಿದ್ರೆ ನಿಜಕ್ಕು ಕರಳು ಹಿಂಡುತ್ತೆ. ಪತಿ ಚಿರು ನೆನಪಲ್ಲೆ ದಿನ ದೂಡುತ್ತಿರುವ ಮೆಘನಾಗೆ ಅನೇಕರು ಧೈರ್ಯ ತುಂಬುತ್ತಿದ್ದಾರೆ. ಚಿತ್ರರಂಗದ ಗಣ್ಯರು, ಸ್ನೇಹಿತರು ಮನೆಗೆ ಭೇಟಿ ಸಾಂತ್ವನ ಹೇಳುತ್ತಿದ್ದಾರೆ. ಇದೀಗ ಮಾಡಿ ಸಿಎಂ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಮೇಘನಾ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಮುಂದೆ ಓದಿ..

ಮೇಘನಾ ರಾಜ್ ಭೇಟಿಯಾದ ಸ್ಮಿತಾ ರಾಕೇಶ್

ಮೇಘನಾ ರಾಜ್ ಭೇಟಿಯಾದ ಸ್ಮಿತಾ ರಾಕೇಶ್

ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಮೊದಲ ಬಾರಿಗೆ ಮೇಘನಾ ಮನೆಯಲ್ಲಿ ಕಾಣಿಸಿಕೊಂಡು, ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಮೇಘನಾ ರಾಜ್ ಕುಟುಂಬ ಮತ್ತು ಸಿದ್ದರಾಮಯ್ಯನವರ ಕುಟುಂಬದ ನಡುವೆ ಉತ್ತಮ ಒಡನಾಟವಿದೆ. ಇದೆ ಸ್ನೇಹದ ಕಾರಣ ಸ್ಮಿತಾ, ಮೇಘನಾ ಮನೆಗೆ ಭೇಟಿ ನೀಡಿ ಮೇಘನಾ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕೆಲ ಹೊತ್ತು ಮೇಘನಾ ಜೊತೆ ಸಮಯಕಳೆದಿದ್ದಾರೆ.

ಸ್ಮಿತಾ ಜೊತೆ ಮೇಘನಾ ಮನೆಗೆ ತೆರಳಿದ ಪ್ರಥಮ್

ಸ್ಮಿತಾ ಜೊತೆ ಮೇಘನಾ ಮನೆಗೆ ತೆರಳಿದ ಪ್ರಥಮ್

ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ಜೊತೆ ನಟ ಮತ್ತು ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಕೂಡ ಮೇಘನಾ ಮನೆಗೆ ತೆರಳಿದ್ದಾರೆ. ಮೇಘನಾ ಅವರಿಗೆ ಧೈರ್ಯ ತುಂಬಿ ಕುಟುಂಬದ ಜೊತೆ ಮಾತನಾಡಿ, ಆರೋಗ್ಯ ವಿಚಾರಿಸಿದ್ದಾರೆ. ಮೇಘನಾ ಮನೆಗೆ ಭೇಟಿ ನೀಡಿದ ಫೋಟೋವನ್ನು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಥಮ್ ಪೋಸ್ಟ್

ಪ್ರಥಮ್ ಪೋಸ್ಟ್

"ಭೇಟಿಯ ಬಗ್ಗೆ ಅನಾವಶ್ಯಕ ಕಲ್ಪನೆ ಬೇಡ. ಒಂದು ವಿಶೇಷ ಮನವಿ. ಸಂಬಂಧವೇ ಇರದ ಗಾಸಿಪ್ ಗಳು, ಇಲ್ಲಸಲ್ಲದ ವಿಚಾರ ಯೂಟ್ಯೂಬ್ ನಲ್ಲಿ ಹಾಕೋ ಮುಂಚೆ ಒಂದು ಸಲ ಮೇಘನಾ ರಾಜ್ ಬಗ್ಗೆ ಯೋಚಿಸಿ. ಮೇಘನಾ ಅವರ ಭಾವನೆಗಳನ್ನು ಗೌರವಿಸಿ. ಎಲ್ಲಿಯೂ ಮಾತನಾಡದ ಸ್ಮಿತಾ ಮೇಡಮ್ ಬಹಳಷ್ಟು ವಿಚಾರಗಳನ್ನು ಅಕ್ಕನ ಜಾಗದಲ್ಲಿ ನಿಂತು ಮೇಘನಾರ ಜೊತೆ ಮಾತನಾಡಿದ್ದಾರೆ. ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದಾರೆ. ಅವರ ಎಲ್ಲಾ ಆಸೆಗಳು ಈಡೇರಲೆಂದು ಸ್ವಚ್ಚ ಮನಸ್ಸಿನಿಂದ ಹಾರೈಸೋಣ" ಎಂದು ಪ್ರಥಮ್ ಫೋಟೋ ಶೇರ್ ದೀರ್ಘವಾಗಿ ಬರೆದುಕೊಂಡಿದ್ದಾರೆ.

ಮೇಘನಾ ಭೇಟಿಯಾಗಿ ಧೈರ್ಯ ತುಂಬಿದ್ದ ರಾಘಣ್ಣ

ಮೇಘನಾ ಭೇಟಿಯಾಗಿ ಧೈರ್ಯ ತುಂಬಿದ್ದ ರಾಘಣ್ಣ

ಇತ್ತೀಚಿಗೆ ರಾಜ್ ಕುಟುಂಬ ಸಹ ಸರ್ಜಾ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ರಾಘವೇಂದ್ರ ರಾಜ್ ಕುಮಾರ್ ಕುಟುಂಬ ಸರ್ಜಾ ಮನೆಗೆ ಮತ್ತು ಸುಂದರ್ ರಾಜ್ ಮನೆಗೂ ಭೇಟಿ ನೀಡಿದ್ದರು. ಸುಂದರ್ ರಾಜ್, ಪ್ರಮಿಳಾ ಜೋಷಾಯ್ ಮತ್ತು ಮಗಳು ಮೇಘನಾ ಅವರನ್ನು ಭೇಟಿಯಾಗಿ ಧೈರ್ಯ ತುಂಬಿದ್ದರು. ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದರು.

More from Filmibeat

English summary
Siddaramaiah's daughter in law Smitha Rakesh meets Meghna Raj And family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X