For Quick Alerts
  ALLOW NOTIFICATIONS  
  For Daily Alerts

  ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಮಿಂಚಲಿದ್ದಾರೆ ಸಿ.ಎಂ ಸಿದ್ದರಾಮಯ್ಯ

  By Harshitha
  |

  ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂಬ ಸಮಾಚಾರವನ್ನ ನೀವು ಇದೇ 'ಫಿಲ್ಮಿಬೀಟ್ ಕನ್ನಡ' ಪುಟದಲ್ಲಿ ಓದಿದ್ರಿ. ಈಗ ಇದೇ ಸುದ್ದಿಯ ಜೊತೆಗೆ ಮತ್ತೊಂದು ಸುದ್ದಿ ಕೂಡ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಬೆಳ್ಳಿತೆರೆಯಲ್ಲಿಯೂ ಸಿ.ಎಂ ಸಿದ್ದರಾಮಯ್ಯ ಮಿಂಚಲಿದ್ದಾರಂತೆ.

  ಕವಿತಾ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ಸಿ.ಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಯಾವ ಚಿತ್ರ.? ಯಾವ ಪಾತ್ರದಲ್ಲಿ ಮುಖ್ಯಮಂತ್ರಿಗಳು ಕಾಣಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ, ಸಂಪೂರ್ಣ ವರದಿ ಓದಿರಿ...

  ಬಣ್ಣ ಹಚ್ಚಲಿದ್ದಾರೆ ಸಿ.ಎಂ ಸಿದ್ದರಾಮಯ್ಯ

  ಬಣ್ಣ ಹಚ್ಚಲಿದ್ದಾರೆ ಸಿ.ಎಂ ಸಿದ್ದರಾಮಯ್ಯ

  ಬಿಡುವಿಲ್ಲದ ರಾಜಕಾರಣದ ನಡುವೆಯೂ ಸಿದ್ದರಾಮಯ್ಯ ಬಣ್ಣ ಹಚ್ಚಲು ಮನಸ್ಸು ಮಾಡಿದ್ದಾರೆ. ಅದು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ನಿರ್ಮಾಣ ಆಗುತ್ತಿರುವ ಕವಿತಾ ಲಂಕೇಶ್ ನಿರ್ದೇಶನದ 'ಸಮ್ಮರ್ ಹಾಲಿಡೇಸ್' ಚಿತ್ರಕ್ಕಾಗಿ.

  ಸಿನಿಮಾಗಾಗಿ ಬಣ್ಣ ಹಚ್ಚಲಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ

  'ಮುಖ್ಯಮಂತ್ರಿ'ಯಾಗಿ ಸಿದ್ದರಾಮಯ್ಯ

  'ಮುಖ್ಯಮಂತ್ರಿ'ಯಾಗಿ ಸಿದ್ದರಾಮಯ್ಯ

  'ಸಮ್ಮರ್ ಹಾಲಿಡೇಸ್' ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿಯೇ ಸಿದ್ದರಾಮಯ್ಯ ಕಾಣಿಸಿಕೊಳ್ಳಲಿದ್ದಾರೆ. ಮಕ್ಕಳಿಗೆ ಸಹಾಯ ಮಾಡುವ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮಿಂಚಲಿದ್ದಾರೆ.

  ಅಂತೆ-ಕಂತೆ ಅಂತೇನಿಲ್ಲ.. ಸಾಧಕರ ಸೀಟ್ ಮೇಲೆ ಸಿ.ಎಂ ಸಿದ್ದರಾಮಯ್ಯ ಕೂರೋದು ಪಕ್ಕಾ.! ಅಂತೆ-ಕಂತೆ ಅಂತೇನಿಲ್ಲ.. ಸಾಧಕರ ಸೀಟ್ ಮೇಲೆ ಸಿ.ಎಂ ಸಿದ್ದರಾಮಯ್ಯ ಕೂರೋದು ಪಕ್ಕಾ.!

  ಸಿದ್ದರಾಮಯ್ಯ ಕಂಡೀಷನ್ ಹಾಕಿದ್ದರು

  ಸಿದ್ದರಾಮಯ್ಯ ಕಂಡೀಷನ್ ಹಾಕಿದ್ದರು

  'ಸಮ್ಮರ್ ಹಾಲಿಡೇಸ್' ಚಿತ್ರದಲ್ಲಿ ಕಾಣಿಸಿಕೊಳ್ಳುವಂತೆ ಅನೇಕ ಬಾರಿ ಸಿದ್ದರಾಮಯ್ಯ ರವರನ್ನ ಕವಿತಾ ಲಂಕೇಶ್ ಮನವಿ ಮಾಡಿದ್ದರು. ಚಿತ್ರದಲ್ಲಿ ಯಾವುದೇ ರೀತಿಯ ಅಶ್ಲೀಲ ಹಾಗೂ ಹಿಂಸಾತ್ಮಕ ಸನ್ನಿವೇಶಗಳು ಇರಬಾರದು ಎಂದು ಸಿದ್ದರಾಮಯ್ಯ ಕಂಡೀಷನ್ ಹಾಕಿದ್ದರಂತೆ. ನಂತರ ಸಿನಿಮಾದ ಕಥೆಯನ್ನು ವಿವರಿಸಿದ ಮೇಲೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದರಂತೆ.

  ಮೊದಲ 'ಮುಖ್ಯಮಂತ್ರಿ'

  ಮೊದಲ 'ಮುಖ್ಯಮಂತ್ರಿ'

  ಅಧಿಕಾರದಲ್ಲಿ ಇರುವಾಗಲೇ, ಸಿನಿಮಾದಲ್ಲಿ ನಟಿಸಿದ ಮೊದಲ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಸಿ.ಎಂ. ಸಿದ್ದರಾಮಯ್ಯ ಪಾತ್ರರಾಗಿದ್ದಾರೆ.

  ಶೂಟಿಂಗ್ ಯಾವಾಗ.?

  ಶೂಟಿಂಗ್ ಯಾವಾಗ.?

  'ಸಮ್ಮರ್ ಹಾಲಿಡೇಸ್' ಚಿತ್ರದಲ್ಲಿ ಸಿದ್ದರಾಮಯ್ಯ ನಟಿಸುವ ಕುರಿತು ನಿನ್ನೆಯಷ್ಟೇ ಖಚಿತ ಮಾಹಿತಿ ಸಿಕ್ಕಿದೆ. ಮುಖ್ಯಮಂತ್ರಿಗಳು ಯಾವಾಗ ಸಮಯ ನೀಡುತ್ತಾರೋ ಆಗ ಚಿತ್ರೀಕರಣ ನಡೆಸುವುದಾಗಿ ಕವಿತಾ ಲಂಕೇಶ್ ಹೇಳುತ್ತಾರೆ.

  ಅಭಿನಯ ಹೊಸದೇನಲ್ಲ.!

  ಅಭಿನಯ ಹೊಸದೇನಲ್ಲ.!

  ಸಿದ್ದರಾಮಯ್ಯ ರವರಿಗೆ ನಟನೆ ಹೊಸದೇನೂ ಅಲ್ಲ. ಕಾಲೇಜು ದಿನಗಳಲ್ಲಿಯೇ ಅನೇಕ ನಾಟಕಗಳಲ್ಲಿ ಸಿದ್ದರಾಮಯ್ಯ ಅಭಿನಯಿಸಿದ್ದಾರೆ.

  ಮಕ್ಕಳ ಸಿನಿಮಾ 'ಸಮ್ಮರ್ ಹಾಲಿಡೇಸ್'

  ಮಕ್ಕಳ ಸಿನಿಮಾ 'ಸಮ್ಮರ್ ಹಾಲಿಡೇಸ್'

  13 ರಿಂದ 16ರ ವಯೋಮಾನದ ಮಕ್ಕಳ ಮನಃಸ್ಥಿತಿ, ಅಭಿರುಚಿ, ಆಕಾಂಕ್ಷೆ, ಸಾಹಸ ಮನೋಭಾವವನ್ನು ಆಧರಿಸಿ 'ಸಮ್ಮರ್ ಹಾಲಿಡೇಸ್' ಚಿತ್ರಕಥೆ ಸಿದ್ಧಪಡಿಸಲಾಗಿದೆ. ಈ ಸಿನಿಮಾದಲ್ಲಿ ಕವಿತಾ ಪುತ್ರಿ ಇಶಾ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಕೂಡ ನಟಿಸಿದ್ದಾರೆ.

  English summary
  The English-Kannada movie, 'Summer Holidays' directed by Kavitha Lankesh would see the Karnataka Chief Minister Siddaramaiah play himself. Incidentally he would become the first Chief Minister to act in a movie while in office.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X