ವರನಟ ರಾಜ್ ಕುಮಾರ್ ರನ್ನು ನೆನೆದ ಸಿದ್ಧರಾಮಯ್ಯ
Recommended Video
ನಟ ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಸಾಕಷ್ಟು ಕಾರ್ಯಕ್ರಮಗಳು ಇಂದು ನಡೆಯುತ್ತಿದೆ. ಈ ಸುದಿನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ ಕುಮಾರ್ ರನ್ನು ನೆನೆದಿದ್ದಾರೆ.
ಟ್ವಿಟ್ಟರ್ ಖಾತೆಯಲ್ಲಿ ರಾಜ್ ಕುಮಾರ್ ಬಗ್ಗೆ ಬರೆದುಕೊಂಡಿರುವ ಅವರು ''ನಟಸಾರ್ವಭೌಮ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಕನ್ನಡದ ಅನರ್ಘ್ಯ ರತ್ನ ಎಲ್ಲವೂ ಆಗಿರುವ ಡಾ.ರಾಜಕುಮಾರ್ ಅವರು ನನ್ನ ಪಾಲಿಗೆ 'ನನ್ನ ಕಾಡಿನವರು'. ಅವರ ನಾಡು ನುಡಿಯ ಬಗೆಗಿನ ಪ್ರೀತಿ- ಬದ್ಧತೆ ನನಗೆ ಸದಾ ಸ್ಪೂರ್ತಿ. ರಾಜ್ ಕುಮಾರ್ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಗೌರವದಿಂದ ಸ್ಮರಿಸುತ್ತೇನೆ.'' ಎಂದಿದ್ದಾರೆ.
ಸಿನಿಮಾಗಳ ಮೇಲೆ ಪ್ರೀತಿ ಹೊಂದಿರುವ ಸಿದ್ಧರಾಮಯ್ಯರಿಗೆ ರಾಜ್ ಅಂದರೆ ಅಭಿಮಾನ ಜಾಸ್ತಿ. ರಾಜ್ ಹಾಗೂ ಸಿದ್ಧರಾಮಯ್ಯ ಒಂದೇ ಭಾಗದವರು. ಅದೇ ಕಾರಣಕ್ಕೆ ಸಿದ್ಧರಾಮಯ್ಯರನ್ನು ಯಾವಾಗ ಭೇಟಿ ಮಾಡಿದರೂ ರಾಜ್ 'ನನ್ನ ಕಾಡಿನವರು' ಎನ್ನುತ್ತಿದ್ದರು. ಈಗ ಅದೇ ಮಾತನ್ನು ಸಿದ್ಧರಾಮಯ್ಯ ನೆನೆದಿದ್ದಾರೆ.

ಈ ಹಿಂದೆಯೂ ಅನೇಕ ಕಾರ್ಯಕ್ರಮಗಳಲ್ಲಿ ಹಾಗೂ 'ವಿಕೇಂಡ್ ವಿತ್ ರಮೇಶ್' ಸಂಚಿಕೆಯಲ್ಲಿಯೂ ರಾಜ್ ಕುಮಾರ್ ಜೊತೆಗಿನ ಸ್ನೇಹವನ್ನು ಸಿದ್ಧರಾಮಯ್ಯ ಹೇಳಿಕೊಂಡಿದ್ದರು. ಅವರ ಸಿನಿಮಾಗಳು ಅಂದರೆ ಸಿದ್ಧರಾಮಯ್ಯರಿಗೆ ಬಹಳ ಇಷ್ಟ ಅಂತೆ.
ಮತ್ತೊಂದು ವಿಷಯ ಏನೆಂದರೆ, ಈ ರೀತಿ ರಾಜಕೀಯ ವ್ಯಕ್ತಿಗಳ ಜೊತೆಗೆ ಒಳ್ಳೆಯ ಸ್ನೇಹ ಹೊಂದಿದ್ದರು ರಾಜ್ ಕುಮಾರ್ ಎಂದಿಗೂ ರಾಜಕೀಯ ರಂಗಕ್ಕೆ ಹೋಗಲು ಇಷ್ಟ ಪಡಲಿಲ್ಲ.


Click it and Unblock the Notifications











