For Quick Alerts
  ALLOW NOTIFICATIONS  
  For Daily Alerts

  ವರನಟ ರಾಜ್ ಕುಮಾರ್ ರನ್ನು ನೆನೆದ ಸಿದ್ಧರಾಮಯ್ಯ

  |
  Dr Rajkumar : ರಾಜ್ ಕುಮಾರ್ ನನಗೆ ನದಾ ಸ್ಫೂರ್ತಿ ಅಂದ್ರೂ ಸಿದ್ದರಾಮಯ್ಯ. | FILMIBEAT KANNADA

  ನಟ ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಸಾಕಷ್ಟು ಕಾರ್ಯಕ್ರಮಗಳು ಇಂದು ನಡೆಯುತ್ತಿದೆ. ಈ ಸುದಿನ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ ಕುಮಾರ್ ರನ್ನು ನೆನೆದಿದ್ದಾರೆ.

  ಟ್ವಿಟ್ಟರ್ ಖಾತೆಯಲ್ಲಿ ರಾಜ್ ಕುಮಾರ್ ಬಗ್ಗೆ ಬರೆದುಕೊಂಡಿರುವ ಅವರು ''ನಟಸಾರ್ವಭೌಮ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಕನ್ನಡದ ಅನರ್ಘ್ಯ ರತ್ನ ಎಲ್ಲವೂ ಆಗಿರುವ ಡಾ.ರಾಜಕುಮಾರ್ ಅವರು ನನ್ನ ಪಾಲಿಗೆ 'ನನ್ನ ಕಾಡಿನವರು'. ಅವರ ನಾಡು ನುಡಿಯ ಬಗೆಗಿನ ಪ್ರೀತಿ- ಬದ್ಧತೆ ನನಗೆ ಸದಾ ಸ್ಪೂರ್ತಿ. ರಾಜ್ ಕುಮಾರ್ ಜನ್ಮದಿನದ ಸಂದರ್ಭದಲ್ಲಿ ಅವರನ್ನು ಗೌರವದಿಂದ ಸ್ಮರಿಸುತ್ತೇನೆ.'' ಎಂದಿದ್ದಾರೆ.

  ''ನಮ್ಮ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್'' ಅಣ್ಣಾವ್ರ ಬಗ್ಗೆ ಅಭಿಷೇಕ್ ಮಾತು ಕೇಳಿ! ''ನಮ್ಮ ತಂದೆ ರಾಜ್ ಕುಮಾರ್ ಅವರ ದೊಡ್ಡ ಫ್ಯಾನ್'' ಅಣ್ಣಾವ್ರ ಬಗ್ಗೆ ಅಭಿಷೇಕ್ ಮಾತು ಕೇಳಿ!

  ಸಿನಿಮಾಗಳ ಮೇಲೆ ಪ್ರೀತಿ ಹೊಂದಿರುವ ಸಿದ್ಧರಾಮಯ್ಯರಿಗೆ ರಾಜ್ ಅಂದರೆ ಅಭಿಮಾನ ಜಾಸ್ತಿ. ರಾಜ್ ಹಾಗೂ ಸಿದ್ಧರಾಮಯ್ಯ ಒಂದೇ ಭಾಗದವರು. ಅದೇ ಕಾರಣಕ್ಕೆ ಸಿದ್ಧರಾಮಯ್ಯರನ್ನು ಯಾವಾಗ ಭೇಟಿ ಮಾಡಿದರೂ ರಾಜ್ 'ನನ್ನ ಕಾಡಿನವರು' ಎನ್ನುತ್ತಿದ್ದರು. ಈಗ ಅದೇ ಮಾತನ್ನು ಸಿದ್ಧರಾಮಯ್ಯ ನೆನೆದಿದ್ದಾರೆ.

  ಈ ಹಿಂದೆಯೂ ಅನೇಕ ಕಾರ್ಯಕ್ರಮಗಳಲ್ಲಿ ಹಾಗೂ 'ವಿಕೇಂಡ್ ವಿತ್ ರಮೇಶ್' ಸಂಚಿಕೆಯಲ್ಲಿಯೂ ರಾಜ್ ಕುಮಾರ್ ಜೊತೆಗಿನ ಸ್ನೇಹವನ್ನು ಸಿದ್ಧರಾಮಯ್ಯ ಹೇಳಿಕೊಂಡಿದ್ದರು. ಅವರ ಸಿನಿಮಾಗಳು ಅಂದರೆ ಸಿದ್ಧರಾಮಯ್ಯರಿಗೆ ಬಹಳ ಇಷ್ಟ ಅಂತೆ.

  ಮುತ್ತುರಾಜನ ಮುತ್ತಿನಂಥ ಮಾತುಗಳನ್ನು ಅವರ ಧ್ವನಿಯಲ್ಲೇ ಕೇಳಿ ಮುತ್ತುರಾಜನ ಮುತ್ತಿನಂಥ ಮಾತುಗಳನ್ನು ಅವರ ಧ್ವನಿಯಲ್ಲೇ ಕೇಳಿ

  ಮತ್ತೊಂದು ವಿಷಯ ಏನೆಂದರೆ, ಈ ರೀತಿ ರಾಜಕೀಯ ವ್ಯಕ್ತಿಗಳ ಜೊತೆಗೆ ಒಳ್ಳೆಯ ಸ್ನೇಹ ಹೊಂದಿದ್ದರು ರಾಜ್ ಕುಮಾರ್ ಎಂದಿಗೂ ರಾಜಕೀಯ ರಂಗಕ್ಕೆ ಹೋಗಲು ಇಷ್ಟ ಪಡಲಿಲ್ಲ.

  English summary
  DR Rajkumar Birthday special : Karnataka ex chief minister Siddaramaiah tweets about DR Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X