For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಕ್ಕೆ ತೆರಳಿ ಕನ್ನಡ ಸಿನಿಮಾ ವೀಕ್ಷಿಸಲಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ

  |

  ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜಕಾರಣದಿಂದ ಬಿಡುವು ಪಡೆದು ಸಿನಿಮಾ ವೀಕ್ಷಿಸಲು ತೆರಳಲಿದ್ದಾರೆ. ನಾಳೆ (ನವೆಂಬರ್ 20) ರಂದು ಕನ್ನಡ ಸಿನಿಮಾವನ್ನು ಚಿತ್ರಮಂದಿರದಲ್ಲಿ ಕುಳಿತು ವೀಕ್ಷಿಸಲಿದ್ದಾರೆ ಸಿದ್ದರಾಮಯ್ಯ.

  ನವೆಂಬರ್ 20 ರಂದು ಬಿಡುಗಡೆ ಆಗುತ್ತಿರುವ ಕನ್ನಡದ 'ಆಕ್ಟ್-1978' ಸಿನಿಮಾವನ್ನು ಸಿದ್ದರಾಮಯ್ಯ ಚಿತ್ರಮಂದಿರದಲ್ಲಿ ಕುಳಿತು ವೀಕ್ಷಿಸಲಿದ್ದಾರೆ. ಆ ಮೂಲಕ ಕೊವಿಡ್ ಅನ್‌ಲಾಕ್ ಆದ ಬಳಿಕ ಜನರು ಚಿತ್ರಮಂದಿರಗಳಿಗೆ ಬರುವಂತೆ ಪರೋಕ್ಷವಾಗಿ ಪ್ರೇರಣೆ ಸಹ ನೀಡಲಿದ್ದಾರೆ.

  ಸಿನಿಮಾವು ಸಾಮಾನ್ಯ ಜನರ ಬದುಕಿನ ಮೇಲೆ ಬೆಳಕು ಚೆಲ್ಲಲಿದ್ದು, ಸಾಮಾನ್ಯ ಜನರು ಹೇಗೆ ಕಾನೂನಿನಿಂದ ವಂಚಿತರಾಗಿದ್ದಾರೆ ಎಂಬುದನ್ನು ತೋರ್ಗೊಡಲಿದೆ. ತಮ್ಮ ಹಕ್ಕಿಗಾಗಿ ಸಶಸ್ತ್ರ ಹೋರಾಟಕ್ಕೆ ಇಳಿಯುವ ಇಬ್ಬರು ಸಾಮಾನ್ಯರ ಕತೆಯನ್ನು 'ಆಕ್ಟ್-1978' ಸಿನಿಮಾ ಹೊಂದಿದೆ.

  ಸಿದ್ದರಾಮಯ್ಯ ಅವರಿಗಿದೆ ಸಿನಿಮಾ ನೋಡುವ ಹವ್ಯಾಸ

  ಸಿದ್ದರಾಮಯ್ಯ ಅವರಿಗಿದೆ ಸಿನಿಮಾ ನೋಡುವ ಹವ್ಯಾಸ

  ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿನಿಮಾ ನೋಡುವ ಹವ್ಯಾಸ ಸಾಕಷ್ಟಿದೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಬಾಹುಬಲಿ, ಪುನೀತ್ ಅಭಿನಯದ ರಾಜಕುಮಾರ, ಮೈತ್ರಿ ಸರ್ಕಾರದ ಸಮಯದಲ್ಲಿ ನಿಖಿಲ್ ಅಭಿನಯದ 'ಸೀತಾರಾಮಕಲ್ಯಾಣ' ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ವೀಕ್ಷಿಸಿದ್ದರು.

  ಸಲಗ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ

  ಸಲಗ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ

  ಹಲವು ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಸಹ ಸಿದ್ದರಾಮಯ್ಯ ಅವರು ಪಾಲ್ಗೊಳ್ಳುತ್ತಿರುತ್ತಾರೆ. ಈ ಹಿಂದೆ ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಮೊದಲಿನಿಂದಲೂ ಸಿದ್ದರಾಮಯ್ಯ ಅವರಿಗೆ ಚಿತ್ರರಂಗದಲ್ಲಿ ಹಲವಾರು ಮಂದಿ ಗೆಳೆಯರಿದ್ದಾರೆ.

  ರಾಜ್‌ಕುಮಾರ್ ಅಭಿಮಾನಿ ಸಿದ್ದರಾಮಯ್ಯ

  ರಾಜ್‌ಕುಮಾರ್ ಅಭಿಮಾನಿ ಸಿದ್ದರಾಮಯ್ಯ

  ಸಿದ್ದರಾಮಯ್ಯ ಅವರು ಕಾಲೇಜು ದಿನಗಳಲ್ಲಿ ರಾಜ್‌ಕುಮಾರ್ ಅವರ ಬಹುದೊಡ್ಡ ಅಭಿಮಾನಿಯಾಗಿದ್ದರು. ಈ ಬಗ್ಗೆ ಅವರು ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಸಿನಿಮಾ ಒಂದರಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿರುವುದಾಗಿ ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಹೇಳಿಕೊಂಡಿದ್ದರು..

  Act1978 : ಅಲೆದು ಅಲೆದು ಸಾಕಾಗಿ ಸರ್ಕಾರಿ ಕಛೇರಿಗೆ ಹಾವು ತಂದು ಬಿಟ್ಟಿದ್ರು | Filmibeat Kannada
  ಆಕ್ಟ್-1978 ಗೆ ಶುಭ ಹಾರೈಕೆ

  ಆಕ್ಟ್-1978 ಗೆ ಶುಭ ಹಾರೈಕೆ

  ಕೊರೊನಾ ಲಾಕ್‌ಡೌನ್ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಎರಡನೇಯ ಕನ್ನಡ ಸಿನಿಮಾ 'ಆಕ್ಟ್-1978' ಆಗಿದೆ. ಸಿನಿಮಾಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ನಾಳೆ ಹಲವು ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್‌ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  English summary
  Former CM Siddaramaiah will watch Act 1978 movie in theater on November 20.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X