ಸಿದ್ದು ಮೂಲಿಮನಿ ನಟನೆಯ 'ಸೀಟ್ ಎಡ್ಜ್‌' ಸಿನಿಮಾ ಶೂಟಿಂಗ್ ಕಂಪ್ಲೀಟ್

ಕಿರುತೆರೆ ಕಲಾವಿದರು ಸಿನಿಮಾರಂಗಕ್ಕೆ ಬರುವುದು ಹೊಸದೇನು ಅಲ್ಲ. ಇವತ್ತಿನ ಕನ್ನಡದ ಸ್ಟಾರ್‌ ನಟರಲ್ಲಿ ಕೆಲವರು ಮೊದಲು ಕಿರುತೆರೆಯಲ್ಲೇ ಅದೃಷ್ಟ ಪರೀಕ್ಷಿಸಿಕೊಂಡಿದ್ದರು. ಇವತ್ತಿಗೂ ಹಲವರು ಸಣ್ಣ ಪರದೆಯಿಂದ ದೊಡ್ಡ ಪರದೆಗೆ ಬರ್ತಿದ್ದಾರೆ.

ನಟ ಸಿದ್ಧು ಮೂಲಿಮನಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸೀಟ್ ಎಡ್ಜ್‌' ಎನ್ನುವ ಮತ್ತೊಂದು ಚಿತ್ರದಲ್ಲಿ ಸಿದ್ಧು ಬಣ್ಣ ಹಚ್ಚಿದ್ದು ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಎನ್‌ ಆರ್ ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗಿರಿಧರ್ .ಟಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Siddu Moolimani starrer seat edge film shoot wrapped up

ಸದ್ದಿಲ್ಲದೇ 'ಸೀಟ್ ಎಡ್ಜ್‌' ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿದ್ದು ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ವರ್ಷಾಂತ್ಯಕ್ಕೆ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. 'ಪಾರು' ಧಾರಾವಾಹಿಯಲ್ಲಿ ಪ್ರೀತಮ್ ಪಾತ್ರದಲ್ಲಿ ನಟಿಸಿ ಸಿದ್ಧು ಗಮನ ಸೆಳೆದಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಈತ ಈಗ ಕಿರುತೆರೆ, ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

'ಸೀಟ್ ಎಡ್ಜ್' ಚಿತ್ರದಲ್ಲಿ ಸಿದ್ದು ಮೂಲಿಮನಿ ಜೊತೆಗೆ ರವೀಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್ ನಾಯಕರೇ, ಲಕ್ಷ್ಮಿ ಸಿದ್ದಯ್ಯ, ಕಮಲ್ ಆಂಟೋನಿ, ಪುನೀತ್ ಬಾಬು ಬಣ್ಣ ಹಚ್ಚಿದ್ದಾರೆ. ಚೇತನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು ಆಕಾಶ್ ಪರ್ವ ಸಂಗೀತ, ದೀಪಕ್ ಕುಮಾರ್ ಜೆಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಸಂಕಲನವಿದೆ.

ಮೊದಲಿಗೆ ಉದಯ ಟಿವಿಯಲ್ಲಿ ಬಂದ 'ಬಣ್ಣದ ಬುಗುರಿ' ಚಿತ್ರದಲ್ಲಿ ಸಿದ್ಧು ಮೂಲಿಮನಿ ನಟಿಸಿದ್ದರು. ಬಳಿಕ 'ಅನುರಾಗ ಸಂಗಮ', 'ಒಂದೂರಲ್ಲಿ ರಾಜ ರಾಣಿ', 'ಸಾಕ್ಷಿ' ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದರೂ 'ಪಾರು' ಧಾರಾವಾಹಿ ಪಾತ್ರ ಒಳ್ಳೆ ಹೆಸರು ತಂದು ಕೊಟ್ಟಿತ್ತು. 'ಕೃಷ್ಣ ರುಕ್ಕು', 'ಲಂಬೋದರ', 'ಬಸವನಗುಡಿ- ಬೆಂಗಳೂರು', 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ವಿಕ್ರಾಂತ್ ರೋಣ' ಚಿತ್ರದಲ್ಲೂ ಒಂದೊಳ್ಳೆ ಪಾತ್ರ ಸಿಕ್ಕಿತ್ತು.

ಇದೀಗ 'ಸೀಟ್ ಎಡ್ಜ್‌' ಚಿತ್ರದ ಲೀಡ್ ರೋಲ್‌ನಲ್ಲಿ ಸಿದ್ಧು ಮೂಲಿಮನಿ ನಟಿಸಿದ್ದರು ಒಂದೊಳ್ಳೆ ಬ್ರೇಕ್‌ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಪೋಸ್ಟರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಬೆಂಗಳೂರು ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು 40 ದಿನಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿದಿದೆ. ಶೀಘ್ರದಲ್ಲೇ ಟೀಸರ್, ಸಾಂಗ್ಸ್, ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದೆ.

More from Filmibeat

English summary
Kannada Comedy Horror suspense thriller seat edge shoot completed
Read more about: tv sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X