ಸೈಮಾ 2018: ಪ್ರಶಸ್ತಿ ಮುಡಿಗೇರಿಸಿಕೊಂಡ ಮಲಯಾಳಂ ತಾರೆಯರ ಪಟ್ಟಿ
ಪ್ರತಿ ವರ್ಷದಂತೆ ಈ ವರ್ಷವೂ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ದಕ್ಷಿಣ ಭಾರತ ಚಿತ್ರರಂಗದ ತಾರೆಯರು ಸೈಮಾ 2018 ಗಾಗಿ ದುಬೈನಲ್ಲಿ ನೆರೆದಿದ್ದಾರೆ.
ನಿನ್ನೆ ಸಂಜೆ (ಸೆಪ್ಟೆಂಬರ್ 14) ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾ ತಾರೆಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಗಳನ್ನೇ ನೀಡುತ್ತಾ ಬಂದಿರುವ ನಿವಿಲ್ ಪೌಲಿ ಸೈಮಾ 2018 ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ಇನ್ನೂ ಅತ್ಯುತ್ತಮ ನಟಿ ಪ್ರಶಸ್ತಿಯನ್ನ ಐಶ್ವರ್ಯ ಲಕ್ಷ್ಮಿ ಸ್ವೀಕರಿಸಿದರು.
ಸೈಮಾ ಪ್ರಶಸ್ತಿ 2018 ಸ್ವೀಕರಿಸಿದ ಮಲಯಾಳಂ ತಾರೆಯರ ಪಟ್ಟಿ ಇಲ್ಲಿದೆ ನೋಡಿರಿ...
ಚಿತ್ರ ಕೃಪೆ: ಸೈಮಾ

ಮಲಯಾಳಂನ ಬೆಸ್ಟ್ ನಟ ಯಾರು.?
ಅತ್ಯುತ್ತಮ ನಟ - ನಿವಿನ್ ಪೌಲಿ
ಅತ್ಯುತ್ತಮ ನಟಿ - ಐಶ್ವರ್ಯ ಲಕ್ಷ್ಮಿ
ಅತ್ಯುತ್ತಮ ನಿರ್ದೇಶಕ - Lijo Jose Pellissery

ಬೆಸ್ಟ್ ವಿಲನ್ ಪ್ರಶಸ್ತಿ ಯಾರಿಗೆ.?
ಅತ್ಯುತ್ತಮ ಹಾಸ್ಯ ನಟ - ಅಜು ವರ್ಗೀಸ್
ಅತ್ಯುತ್ತಮ ಖಳ ನಟ - ಅಪ್ಪಣಿ ಸರತ್
ಅತ್ಯುತ್ತಮ ಪೋಷಕ ನಟ - ಶೇನ್ ನಿಗಮ್
ಅತ್ಯುತ್ತಮ ಪೋಷಕ ನಟಿ - ಆಶಾ ಸರತ್

ಯುವ ಪ್ರತಿಭೆಗಳಿಗೆ ಪ್ರಶಸ್ತಿಯ ಗರಿ
ಅತ್ಯುತ್ತಮ ಉದಯೋನ್ಮುಖ ನಟ - ಆಂಟನಿ
ಅತ್ಯುತ್ತಮ ಉದಯೋನ್ಮುಖ ನಟಿ - ನಿಮಿಷ ಸಜಯನ್
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಮಹೇಶ್ ನಾರಾಯಣನ್
ಅತ್ಯುತ್ತಮ ಛಾಯಾಗ್ರಾಹಕ : ಸನು ಜಾನ್ ವರ್ಗೀಸ್

ಬೆಸ್ಟ್ ಸಿಂಗರ್ ಯಾರು.?
ಅತ್ಯುತ್ತಮ ಸಂಗೀತ ನಿರ್ದೇಶಕ: ಶಾನ್ ರೆಹಮಾನ್
ಅತ್ಯುತ್ತಮ ಹಿನ್ನಲೆ ಗಾಯಕಿ: ಕೆ.ಎಸ್.ಚಿತ್ರಾ
ಅತ್ಯುತ್ತಮ ಹಿನ್ನಲೆ ಗಾಯಕ: ವಿನೀತ್ ಶ್ರೀನಿವಾಸನ್


Click it and Unblock the Notifications











