ಸೈಮಾ ಪ್ರಶಸ್ತಿ 2018: ಅವಾರ್ಡ್ ಪಡೆದ ತಮಿಳು ತಾರೆಯರ ಪಟ್ಟಿ
ಪ್ರತಿಷ್ಟಿತ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈನಲ್ಲಿ ವೈಭವೋಪೇತವಾಗಿ ನಡೆಯುತ್ತಿದೆ. ದಕ್ಷಿಣ ಭಾರತ ಚಿತ್ರರಂಗದ ಗಣ್ಯರು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮೆರುಗು ನೀಡಿದ್ದಾರೆ.
ನಿನ್ನೆ ಸಂಜೆ ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾ ತಾರೆಯರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ತಮಿಳು ಚಲನಚಿತ್ರ ಪ್ರಶಸ್ತಿ ಸೂಪರ್ ಹಿಟ್ ಸಿನಿಮಾ 'ವಿಕ್ರಂ ವೇದ' ಪಾಲಾಯಿತು.
ಅತ್ಯುತ್ತಮ ನಟಿ ಪ್ರಶಸ್ತಿಯ ಗರಿ ನಟಿ ನಯನತಾರಾ ಮುಡಿಗೇರಿತು. ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿಯನ್ನ ಮಾಧವನ್ ಸ್ವೀಕರಿಸಿದರು.
ಸೈಮಾ ಪ್ರಶಸ್ತಿ-2018 ಸ್ವೀಕರಿಸಿದ ತಮಿಳು ತಾರೆಯರ ಪಟ್ಟಿ ಇಲ್ಲಿದೆ ನೋಡಿರಿ...
ಚಿತ್ರಕೃಪೆ: ಸೈಮಾ

ತಮಿಳಿನಲ್ಲಿ ಅತ್ಯುತ್ತಮ ನಟ-ನಟಿ ಯಾರು.?
ಅತ್ಯುತ್ತಮ ಚಲನಚಿತ್ರ - ವಿಕ್ರಂ ವೇದ
ಅತ್ಯುತ್ತಮ ನಟಿ (ಕ್ರಿಟಿಕ್ಸ್) - ಅದಿತಿ ಬಾಲನ್
ಅತ್ಯುತ್ತಮ ನಟ (ಕ್ರಿಟಿಕ್ಸ್) - ಮಾಧವನ್
ಅತ್ಯುತ್ತಮ ನಟಿ - ನಯನತಾರಾ
ಅತ್ಯುತ್ತಮ ನಟ - ಶಿವ ಕಾರ್ತಿಕೇಯನ್
ಅತ್ಯುತ್ತಮ ಪೋಷಕ ನಟಿ (ಕ್ರಿಟಿಕ್ಸ್) - ಶಿವಧಾ

ಯುವ ಪ್ರತಿಭೆಗಳಿಗೆ ಪ್ರಶಸ್ತಿಯ ಗರಿ
ಅತ್ಯುತ್ತಮ ಉದಯೋನ್ಮುಖ ನಟ - ವಸಂತ್ ರವಿ
ಅತ್ಯುತ್ತಮ ಉದಯೋನ್ಮುಖ ನಟಿ - ಅದಿತಿ ರಾವ್ ಹೈದರಿ
ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಅರುಣ್ ಪ್ರಭು ಪರುಶೋತ್ತಮ್

ಬೆಸ್ಟ್ ಕಾಮಿಡಿಯನ್ ಪ್ರಶಸ್ತಿ ಯಾರಿಗೆ.?
ಅತ್ಯುತ್ತಮ ಹಾಸ್ಯ ನಟ - ಸೂರಿ
ಅತ್ಯುತ್ತಮ ಖಳನಟ (ಕ್ರಿಟಿಕ್ಸ್) - ಎಸ್.ಜೆ.ಸೂರ್ಯ

ಸ್ಟೈಲ್ ಐಕಾನ್ ಪ್ರಶಸ್ತಿ ಪಡೆದ ತಾರೆಯರು
ಸ್ಟೈಲ್ ಐಕಾನ್ - ಹನ್ಸಿಕಾ ಮೋಟ್ವಾನಿ
ಸ್ಟೈಲ್ ಐಕಾನ್ - ಮಾಧವನ್
ಅತ್ಯುತ್ತಮ ಸಂಗೀತ ನಿರ್ದೇಶಕ - ಎ.ಆರ್.ರೆಹಮಾನ್
ಅತ್ಯುತ್ತಮ ಸಾಹಿತ್ಯ - ವಿವೇಕ್
ಅತ್ಯುತ್ತಮ ಹಿನ್ನಲೆ ಗಾಯಕಿ - ಲುಕ್ಸಿಮಿ ಸಿವನೇಸ್ವರಿಲಿಂಗಮ್
ಅತ್ಯುತ್ತಮ ಹಿನ್ನಲೆ ಗಾಯಕ - ಸಿದ್ಧ್ ಶ್ರೀರಾಮ್

ಜೀವಮಾನದ ಶ್ರೇಷ್ಠ ಸಾಧನೆ
ದಕ್ಷಿಣ ಭಾರತದ ಪ್ರಖ್ಯಾತ ಗಾಯಕಿ ಪಿ.ಸುಶೀಲಾ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.


Click it and Unblock the Notifications











