twitter
    For Quick Alerts
    ALLOW NOTIFICATIONS  
    For Daily Alerts

    ಸೈಮಾ 2019: 'ಯಜಮಾನ'ಗೆ ಪ್ರಶಸ್ತಿಗಳ ಸುರಿಮಳೆ

    |

    ಸೈಮಾ 2019 ಪ್ರಶಸ್ತಿಗಳ ವಿತರಣೆ ನಿನ್ನೆಯಷ್ಟೆ ನಡೆದಿದ್ದು, ದರ್ಶನ್ ನಟನೆಯ 'ಯಜಮಾನ' ಸಿನಿಮಾಕ್ಕೆ ಕನ್ನಡ ವಿಭಾಗದಲ್ಲಿ ಹೆಚ್ಚು ಪ್ರಶಸ್ತಿಗಳು ಲಭ್ಯವಾಗಿವೆ.

    Recommended Video

    8 ಪ್ರಶಸ್ತಿ ಬಾಚಿಕೊಂಡ ಯಜಮಾನ, ಹೊಸ ದಾಖಲೆ ಸೃಷ್ಟಿಸಿದ ಡಿ ಬಾಸ್

    'ಯಜಮಾನ' ಸಿನಿಮಾದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಟ ದರ್ಶನ್‌ಗೆ ನೀಡಲಾಗಿದೆ. ಅತ್ಯುತ್ತಮ ನಟಿ ಪ್ರಶಸ್ತಿಯನ್ನು 'ಆಯುಶ್‌ಮಾನ್ ಭವ' ಸಿನಿಮಾದ ನಟನೆಗೆ ರಚಿತಾ ರಾಮ್ ಪಡೆದುಕೊಂಡಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ನಟನೆಗೆ ರಕ್ಷಿತ್ ಶೆಟ್ಟಿಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ದರ್ಶನ್‌ ಕಾರ್ಯಕ್ರಮಕ್ಕೆ ಗೈರಾಗಿದ್ದ ಕಾರಣ ನಿರ್ಮಾಪಕಿ ಶೈಲನಾ ನಾಗ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣಗೆ ಎರಡೆರಡು ಸೈಮಾ 2019 ಪ್ರಶಸ್ತಿಗಳು ದೊರಕಿವೆ. 'ಯಜಮಾನ' ಸಿನಿಮಾಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ, ತೆಲುಗಿನ 'ಡಿಯರ್ ಕಾಮ್ರೇಡ್' ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.

    SIIMA 2019 Awards: Darshan, Rakshit Shetty, Rashmika And Many Won Awards

    ಕನ್ನಡ ವಿಭಾಗದಲ್ಲಿ ಅತಿ ಹೆಚ್ಚು ಪ್ರಶಸ್ತಿಗಳು 'ಯಜಮಾನ' ಸಿನಿಮಾಕ್ಕೆ ಲಭ್ಯವಾಗಿವೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು 'ಯಜಮಾನ' ಸಿನಿಮಾಕ್ಕಾಗಿ ಹರಿಕೃಷ್ಣ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು 'ಯಜಮಾನ' ಸಿನಿಮಾಕ್ಕಾಗಿ ಸಾಧುಕೋಕಿಲ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಿನಿಮಾ ಪ್ರಶಸ್ತಿಯು 'ಯಜಮಾನ' ಪಾಲಾಗಿದೆ.

    ನಟ ಸಾಯಿ ಕುಮಾರ್ ಅತ್ಯುತ್ತಮ ವಿಲನ್ ಪ್ರಶಸ್ತಿಯನ್ನು 'ಭರಾಟೆ' ಸಿನಿಮಾದ ನಟನೆಗೆ ಪಡೆದುಕೊಂಡಿದ್ದಾರೆ. ನಟ ದೇವರಾಜ್‌ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು 'ಯಜಮಾನ' ಸಿನಿಮಾಕ್ಕಾಗಿ ದೊರಕಿದೆ. ನಟಿ ಕಾರುಣ್ಯ ರಾಮ್‌ಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯು 'ಮನೆ ಮಾರಾಟಕ್ಕಿದೆ' ಸಿನಿಮಾಕ್ಕಾಗಿ ದೊರಕಿದೆ.

    ಅತ್ಯುತ್ತಮ ಹೊಸ ನಿರ್ದೇಶಕ ಪ್ರಶಸ್ತಿಯನ್ನು 'ಕನ್ನಡ್ ಗೊತ್ತಿಲ್ಲ' ಸಿನಿಮಾಕ್ಕಾಗಿ ನಿರ್ದೇಶಕ ಮಯೂರ ರಾಘವೇಂದ್ರ ಪಡೆದುಕೊಂಡಿದ್ದಾರೆ. 'ಅಮರ್' ಸಿನಿಮಾಕ್ಕಾಗಿ ಅಭಿಷೇಕ್ ಅಂಬರೀಶ್ ಅತ್ಯುತ್ತಮ ಹೊಸ ನಟ ಪ್ರಶಸ್ತಿ ಬಾಚಿಕೊಂಡಿದ್ದಾರೆ. 'ಕಿಸ್' ಸಿನಿಮಾದ ನಟನೆಗೆ ಶ್ರೀಲೀಲಾಗೆ ಅತ್ಯುತ್ತಮ ಹೊಸ ನಟಿ ಪ್ರಶಸ್ತಿ ದೊರಕಿದೆ.

    ಅವನೇ 'ಶ್ರೀ ಮನ್ನಾರಾಯಣ' ಸಿನಿಮಾಕ್ಕಾಗಿ ಅತ್ಯುತ್ತಮ ಕೋರಿಯೋಗ್ರಾಫರ್ ಪ್ರಶಸ್ತಿಯನ್ನು ಇಮ್ರಾನ್ ಸರ್ದಾರಿಯಾ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಅನನ್ಯಾ ಭಟ್ ಪಡೆದುಕೊಂಡಿದ್ದು 'ಗೀತಾ' ಸಿನಿಮಾದ 'ಹೇಳದೆ ಕೇಳದೆ' ಹಾಡಿಗೆ. 'ನಟಸಾರ್ವಭೌಮ' ಸಿನಿಮಾದ ಟೈಟಲ್ ಹಾಡು ರಚಿಸಿದ್ದಕ್ಕೆ ಪವನ್ ಒಡೆಯರ್‌ ಅತ್ಯುತ್ತಮ ಬರಹಗಾರ ಪ್ರಶಸ್ತಿ ಲಭಿಸಿದೆ.

    'ಯಜಮಾನ', 'ನಟಸಾರ್ವಭೌಮ', 'ಬೆಲ್ ಬಾಟಮ್', 'ಅವನೇ ಶ್ರೀಮನ್ನಾರಾಯಣ', 'ಭರಾಟೆ', 'ಆಯುಷ್ಮಾನ್ ಭವ', 'ಕವಲು ದಾರಿ', 'ಮುಂದಿನ ನಿಲ್ದಾಣ', 'ಮನೆ ಮಾರಾಟಕ್ಕಿದೆ', 'ಐ ಲವ್ ಯೂ', 'ಅಮರ್', 'ಕಿಸ್' ಇನ್ನೂ ಕೆಲವು ಸಿನಿಮಾಗಳು ಹಲವು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸೆಣೆಸಿದ್ದವು.

    ಪ್ರಶಸ್ತಿಗಳನ್ನು ಪ್ರೇಕ್ಷಕರು ಕಳಿಸುವ ಮತಗಳ ಆಧಾರದ ಮೇಲೆ ವಿತರಣೆ ಮಾಡಲಾಗಿದೆ. ಹೀಗಾಗಿ ಜನಪ್ರಿಯ ಸಿನಿಮಾಗಳಿಗೆ, ಜನಪ್ರಿಯ ನಟರ ಸಿನಿಮಾಗಳಿಗೆ ಹೆಚ್ಚು ಪ್ರಶಸ್ತಿ ಲಭ್ಯವಾಗಿದೆ.

    English summary
    SIIMA 2019 awards function Many Kannada stars took awards for their best performance. Darshan awarded as best actor, Rachita Ram as best actress.
    Monday, September 20, 2021, 10:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X