For Quick Alerts
  ALLOW NOTIFICATIONS  
  For Daily Alerts

  ಯಾವ ನಟನಿಗೆ ಒಲಿಯಲಿದೆ 'ಸೈಮಾ ಅತ್ಯುತ್ತಮ ವಿಲನ್' ಪಟ್ಟ?

  |

  ಪ್ರತಿಯೊಬ್ಬ ಕಲಾವಿದನಿಗೆ ತಾನು ಮಾಡಿದ ಅಭಿನಯಕ್ಕೆ ಪ್ರಶಂಸೆ, ಮೆಚ್ಚುಗೆ ಸಿಕ್ಕಾಗ ಆಗುವಷ್ಟು ಖುಷಿ ಇನ್ಯಾವುದರಲ್ಲು ಸಿಗಲ್ಲ. ಒಂದು ವೇಳೆ ತನ್ನ ಅಭಿನಯಕ್ಕೆ ಯಾವುದಾದರೂ ಪ್ರಶಸ್ತಿ ಸಿಕ್ಕರೇ ಅದು ಆ ಕಲಾವಿದನ ಜೀವನದಲ್ಲಿ ಅತ್ಯಮೂಲ್ಯವಾದ ಕ್ಷಣ ಆಗುತ್ತೆ.

  ಈಗ ಸೈಮಾ ಪ್ರಶಸ್ತಿ ಸಮಯ. 2018ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತ್ಯುತ್ತಮ ಸಿನಿಮಾ, ನಟ, ನಟಿ, ಖಳನಟ, ಪೋಷಕ ನಟ, ಪೋಷಕ ನಟಿ, ಗಾಯಕ, ಗಾಯಕಿ ಹೀಗೆ ಹಲವು ವಿಭಾಗಗಳಲ್ಲಿ ದಿ ಬೆಸ್ಟ್ ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಂಳ ಇಂಡಸ್ಟ್ರಿಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತೆ.

  ಸೈಮಾ ಪ್ರಶಸ್ತಿಗಾಗಿ ಯಶ್ 'ಕೆಜಿಎಫ್' ಶಿವಣ್ಣನ 'ಟಗರು' ನಡುವೆ ಹಣಾಹಣಿಸೈಮಾ ಪ್ರಶಸ್ತಿಗಾಗಿ ಯಶ್ 'ಕೆಜಿಎಫ್' ಶಿವಣ್ಣನ 'ಟಗರು' ನಡುವೆ ಹಣಾಹಣಿ

  ಕನ್ನಡ ವಿಭಾಗದಲ್ಲಿ ನಿರೀಕ್ಷೆಯಂತೆ ಶಿವರಾಜ್ ಕುಮಾರ್ ಅಭಿನಯದ 'ಟಗರು' ಮತ್ತು ಯಶ್ ಅಭಿನಯದ 'ಕೆಜಿಎಫ್' ನಡುವೆ ಹೆಚ್ಚು ವಿಭಾಗಳಲ್ಲಿ ಪೈಪೋಟಿ ಇದೆ. ಈ ಮಧ್ಯೆ ಅತ್ಯುತ್ತಮ ಖಳನಾಯಕನ ಪಟ್ಟಕ್ಕಾಗಿ ಯುವ ಕಲಾವಿದರು ರೇಸ್ ನಲ್ಲಿದ್ದಾರೆ. ವಿಲನ್ ವಿಭಾಗದಲ್ಲಿ ಯಾರೆಲ್ಲಾ ಇದ್ದಾರೆ? ಮುಂದೆ ಓದಿ...

  ಬಾಲಕೃಷ್ಣ ಪಣಿಕ್ಕರ್

  ಬಾಲಕೃಷ್ಣ ಪಣಿಕ್ಕರ್

  ರಿಷಬ್ ಶೆಟ್ಟಿ ನಿರ್ದೇಶನದ ಸ.ಹಿ.ಪ್ರಾ.ಶಾಲೆ ಕಾಸರಗೂಡು ಚಿತ್ರದಲ್ಲಿ ಗಮನ ಸೆಳೆದ ನಟ ಬಾಲಕೃಷ್ಣ ಪಣಿಕ್ಕರ್. ಈ ಚಿತ್ರದಲ್ಲಿ ಅಸಿಸ್ಟಂಟ್ ಎಜುಕೇಶನಲ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದ ಬಾಲಕೃಷ್ಣ ಅತ್ಯುತ್ತಮ ಖಳನಾಯಕ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

  ಹಾಲಿವುಡ್ ನಟ ಡ್ಯಾನಿ

  ಹಾಲಿವುಡ್ ನಟ ಡ್ಯಾನಿ

  ತಮಿಳಿನ 'ಸಿಂಗಂ-3' ಸೇರಿದಂತೆ ಹಲವು ಸೌತ್ ಇಂಡಿಯಾ ಸಿನಿಮಾದಲ್ಲಿ ನಟಿಸಿದ್ದ ಹಾಲಿವುಡ್ ಮೂಲದ ನಟ ಡ್ಯಾನಿ, ಇದೇ ಮೊದಲ ಸಲ ಕನ್ನಡದ ತಾರಕಾಸುರ ಚಿತ್ರದಲ್ಲಿ ನಟಿಸಿದ್ದರು. ಚೊಚ್ಚಲ ಚಿತ್ರದ ನಟನೆಗಾಗಿ ಸೈಮಾ ಖಳನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ.

  ಡಾಲಿ ಧನಂಜಯ್

  ಡಾಲಿ ಧನಂಜಯ್

  ದುನಿಯಾ ಸೂರಿ ನಿರ್ದೇಶಿಸಿ, ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿದ್ದ ಚಿತ್ರ ಟಗರು. ಈ ಸಿನಿಮಾದಲ್ಲಿ ಶಿವಣ್ಣ ಅವರಂತೆ ವಿಲನ್ ಪಾತ್ರ ಮಾಡಿದ್ದ ಧನಂಜಯ್ ಕೂಡ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದರು. ಈ ಡಾಲಿ ಪಾತ್ರ ಸ್ಯಾಂಡಲ್ ವುಡ್ ಅಭಿಮಾನಿಗಳ ಹಾಟ್ ಫೇವರೆಟ್ ಆಯ್ತು. ಈಗ ಸೈಮಾ ಅತ್ಯುತ್ತಮ ವಿಲನ್ ವಿಭಾಗದಲ್ಲೂ ನಾಮಿನೇಟ್ ಆಗಿ ಅವಾರ್ಡ್ ಪಕ್ಕಾ ಎನ್ನಲಾಗುತ್ತಿದೆ.

  ಕೆಜಿಎಫ್ ಗರುಡ

  ಕೆಜಿಎಫ್ ಗರುಡ

  ಕಳೆದ ವರ್ಷದ ಬಹುದೊಡ್ಡ ಯಶಸ್ವಿ ಚಿತ್ರ ಕೆಜಿಎಫ್. ಈ ಚಿತ್ರದಲ್ಲಿ ಯಶ್ ಅವರ ಜೊತೆ ಭಾರಿ ಗಮನ ಸೆಳೆದ ಇನ್ನೊಬ್ಬ ನಟ ಗರುಡ. ರಾಮಚಂದ್ರ ರಾಜು ಈ ಪಾತ್ರ ನಿರ್ವಹಿಸಿದ್ದು, ಸೈಮಾ ವಿಲನ್ ವಿಭಾಗದಲ್ಲಿ ನಾಮನಿರ್ದೇಶನವಾಗಿದ್ದಾರೆ.

  ಅಯೋಗ್ಯ ಬಚ್ಚೇಗೌಡ

  ಅಯೋಗ್ಯ ಬಚ್ಚೇಗೌಡ

  ಸತೀಶ್ ನೀನಾಸಂ ಅಭಿನಯಿಸಿದ್ದ ಅಯೋಗ್ಯದ ನಟನೆಗಾಗಿ ನಟ ರವಿಶಂಕರ್ ಸೈಮಾ ಖಳನಟ ವಿಭಾಗದಲ್ಲಿ ನಾಮಿನೇಟ್ ಆಗಿದ್ದಾರೆ. ಸದ್ಯ ಈ ಐದು ಜನರು ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸಿ ಗೆದ್ದಿದ್ದಾರೆ. ಆದ್ರೆ, ಈ ಐವರಲ್ಲಿ ಯಾರೊಬ್ಬರಿಗೆ ಸೈಮಾ ಪ್ರಶಸ್ತಿ ಮುಡಿಗೇರುತ್ತೆ ಎಂಬುದು ಸದ್ಯದ ಕುತೂಹಲ.

  English summary
  Kannada actor dhananjay (tagaru), ramachandra raju (kgf), p ravi shankar(ayogya), balakrishna panikkar (sa hi pra shaale kasaragodu) and danny (taaraksura) nominated in Siima best villain in kannada section.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X