For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ನಡೆಯುತ್ತಿರುವ ಸೈಮಾ ಅವಾರ್ಡ್ಸ್‌ನ ಮೊದಲ ದಿನದ ಅತಿಥಿಗಳ ಪಟ್ಟಿ

  |

  ಇಂದು ( ಸೆಪ್ಟೆಂಬರ್ 10 ) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ( ಸೈಮಾ ) ಜರುಗಲಿದೆ.

  ಇಂದು ಮತ್ತೆ ನಾಳೆ 2 ದಿನಗಳ ಕಾಲ ಈ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ಜರುಗಲಿದ್ದು ಹಲವು ದಿನಗಳ ಹಿಂದೆಯೇ ವಿವಿಧ ವಿಭಾಗಗಳಿಗೆ ನಾಮಿನೇಷನ್ ಪ್ರಕಟಿಸಲಾಗಿತ್ತು. ಅದರಂತೆ ಸೈಮಾದ ವೆಬ್ ತಾಣದಲ್ಲಿ ಸಹ ವಿವಿಧ ವಿಭಾಗಗಳ ಭಾಷಾವಾರು ವೋಟಿಂಗ್ ಪೋಲ್ ತೆರೆಯಲಾಗಿತ್ತು. ಹಾಗೂ ದಕ್ಷಿಣ ಭಾರತದ ಸಿನಿ ಪ್ರೇಮಿಗಳು ಈ ಪೋಲ್ ಗಳಲ್ಲಿ ತಮ್ಮ ಪ್ರಕಾರ ಯಾರು ಬೆಸ್ಟ್ ಎಂಬುದನ್ನು ಆಯ್ಕೆ ಮಾಡಿ ವೋಟ್ ಹಾಕಿದ್ದಾರೆ.

  ಇನ್ನು ಈ ಬಾರಿಯ ಕಾರ್ಯಕ್ರಮದಲ್ಲಿ ಕಳೆದ ವರ್ಷ ನಮ್ಮನೆಲ್ಲ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ವಿಶೇಷವಾದ ನಮನವನ್ನು ಸಲ್ಲಿಸಲಿದ್ದು, ಕಾರ್ಯಕ್ರಮವನ್ನು ವೀಕ್ಷಿಸಲು ಹಾಗೂ ಯಾವ ಕಲಾವಿದರಿಗೆ ಪ್ರಶಸ್ತಿಗಳು ಲಭಿಸಲಿವೆ ಎಂಬುದನ್ನು ತಿಳಿಯಲು ಸಿನಿ ರಸಿಕರು ಕಾತರರಾಗಿದ್ದಾರೆ.

  ಇನ್ನು ಈ ಸೈಮಾ ಅವಾರ್ಡ್ಸ್ ಕಾರ್ಯಕ್ರಮದ ಮೊದಲ ದಿನದಂದು ಯಾವ ಯಾವ ಚಿತ್ರರಂಗದಿಂದ ಯಾವ ಸ್ಟಾರ್ ನಟರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂಬುದನ್ನು ಬಾಕ್ಸ್ ಆಫೀಸ್ ಪರಿಣಿತ ತರಣ್ ಆದರ್ಶ್ ಅವರು ಟ್ವೀಟ್ ಮಾಡುವುದರ ಮೂಲಕ ತಿಳಿಸಿದ್ದಾರೆ.

  ಮೊದಲ ದಿನದಂದು ಮುಖ್ಯಅತಿಥಿಗಳಾಗಿ ಚಂದನವನದ ರಾಕಿಂಗ್ ಸ್ಟಾರ್ ಯಶ್, ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ ದೇವರಕೊಂಡ, ತಮಿಳು ಚಿತ್ರರಂಗದ ಉಳಗನಾಯಗನ್ ಕಮಲ್ ಹಾಸನ್ ಮತ್ತು ಹಿಂದಿ ಚಿತ್ರರಂಗದ ನಟ ರಣವೀರ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

  2012ರಲ್ಲಿ ಆರಂಭಗೊಂಡ ಈ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ದಶಕ ಪೂರೈಸಿದ್ದು, ಈ ಬಾರಿ ಹತ್ತು ವರ್ಷಗಳ ಸಂಭ್ರಮಾಚರಣೆ ಇರಲಿದೆ. ಹಾಗೂ ಕನ್ನಡ ಚಿತ್ರರಂಗದಿಂದ ಈ ಬಾರಿ ರಾಬರ್ಟ್, ಗರುಡಗಮನ ವೃಷಭ ವಾಹನ ಹಾಗೂ ಯುವರತ್ನ ಚಿತ್ರಗಳು ಹೆಚ್ಚು ಕೆಟಗರಿಯಲ್ಲಿ ನಾಮಿನೇಟ್ ಆಗಿವೆ.

  ಇನ್ನು ಈ ಬಾರಿಯ ಸೈಮಾ ಅವಾರ್ಡ್ಸ್‌ನಲ್ಲಿ ಕನ್ನಡ ಚಿತ್ರರಂಗದಿಂದ ನಾಮನಿರ್ದೇಶನ ಆಗಿರುವ ಅತ್ಯುತ್ತಮ ನಟ, ನಟಿ, ನಿರ್ದೇಶಕ ಹಾಗೂ ಚಿತ್ರಗಳ ಪಟ್ಟಿ ಕೆಳಕಂಡಂತಿದೆ

  ಅತ್ಯುತ್ತಮ ಚಿತ್ರ

  ಅತ್ಯುತ್ತಮ ಚಿತ್ರ

  ರಾಬರ್ಟ್ - ಉಮಾಪತಿ ಫಿಲ್ಮ್ಸ್, ಯುವರತ್ನ - ಹೊಂಬಾಳೆ ಫಿಲ್ಮ್ಸ್, ಗರುಡ ಗಮನ ವೃಷಭ ವಾಹನ - ಲೈಟರ್ ಬುದ್ಧ ಫಿಲ್ಮ್ಸ್, ಸಲಗ- ಕೆ.ಪಿ.ಶ್ರೀಕಾಂತ್ ( ವೀನಸ್ ಎಂಟರ್ ಟೈನ್ ಮೆಂಟ್ಸ್ ), ಭಜರಂಗಿ 2 - ಜಯಣ್ಣ ಕಂಬೈನ್ಸ್

  ಅತ್ಯುತ್ತಮ ನಟ

  ಅತ್ಯುತ್ತಮ ನಟ

  ಗಣೇಶ್ - ಸಕ್ಕತ್, ಶಿವರಾಜಕುಮಾರ್ - ಭಜರಂಗಿ ೨, ರಿಷಬ್ ಶೆಟ್ಟಿ - ಗರುಡ ಗಮನ ವೃಷಭ ವಾಹನ, ದರ್ಶನ್ - ರಾಬರ್ಟ್, ಪುನೀತ್ ರಾಜ್‌ಕುಮಾರ್ - ಯುವರತ್ನ, ಧನಂಜಯ ಕೆ ಎ - ಬಡವ ರಾಸ್ಕಲ್.

  ಅತ್ಯುತ್ತಮ ನಿರ್ದೇಶಕ

  ಅತ್ಯುತ್ತಮ ನಿರ್ದೇಶಕ

  ರೋಹಿತ್ ಪದಕಿ - ರತ್ನನ್ ಪ್ರಪಂಚ, ರಾಜ್ ಬಿ ಶೆಟ್ಟಿ - ಗರುಡ ಗಮನ ವೃಷಭ ವಾಹನ, ತರುಣ್ ಸುಧೀರ್ - ರಾಬರ್ಟ್, ಎಸ್ ಮಹೇಶ್ ಕುಮಾರ್ - ಮದಗಜ, ಎ ಹರ್ಷ - ಭಜರಂಗಿ ೨

  ಅತ್ಯುತ್ತಮ ನಟಿ

  ಅತ್ಯುತ್ತಮ ನಟಿ

  ರಶ್ಮಿಕಾ ಮಂದಣ್ಣ - ಪೊಗರು, ಅಮೃತ ಐಯ್ಯಂಗಾರ್ - ಬಡವ ರಾಸ್ಕಲ್, ನಿಶ್ವಿಕ ನಾಯ್ಡು - ಸಕ್ಕತ್, ರಚಿತಾ ರಾಮ್ - ಲವ್ ಯು ರಚ್ಚು ಮತ್ತು ಆಶಿಕಾ ರಂಗನಾಥ್ - ಮದಗಜ.

  English summary
  SIIMA 2022: Rocking Yash, Kamal Haasan and others stars to grace the event as chief guests
  Saturday, September 10, 2022, 21:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X