For Quick Alerts
  ALLOW NOTIFICATIONS  
  For Daily Alerts

  ಸೈಮಾ 2022: ಪ್ರಶಸ್ತಿ ಬೇಟೆಯಲ್ಲಿ ಖಾತೆ ತೆರೆದ ದರ್ಶನ್ ಚಿತ್ರ ರಾಬರ್ಟ್; ಕನ್ನಡದ ಮೊದಲ ಅವಾರ್ಡ್!

  |

  ಸದ್ಯ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಅದ್ದೂರಿಯಾಗಿ ಜರುಗುತ್ತಿದೆ. ಇಂದು ( ಸೆಪ್ಟೆಂಬರ್‌ 10 ) ಆರಂಭವಾಗಿರುವ ಸೈಮಾ ಅವಾರ್ಡ್ಸ್ ನಾಳೆಯೂ ಸಹ ಜರುಗಲಿದೆ.

  ಪವನ್ ಕಲ್ಯಾಣ್ ಸಿನಿಮಾದ 3 ಕೋಟಿ ಕಲೆಕ್ಷನ್ ಮುರಿದು ಹಾಕಲು ರೆಡಿಯಾಗ್ತಿದೆ ಪ್ರಭಾಸ್ ಸಿನಿಮಾ!ಪವನ್ ಕಲ್ಯಾಣ್ ಸಿನಿಮಾದ 3 ಕೋಟಿ ಕಲೆಕ್ಷನ್ ಮುರಿದು ಹಾಕಲು ರೆಡಿಯಾಗ್ತಿದೆ ಪ್ರಭಾಸ್ ಸಿನಿಮಾ!

  ಈ ಕಾರ್ಯಕ್ರಮಕ್ಕೆ ಚಂದನವನದ ರಾಕಿಂಗ್ ಸ್ಟಾರ್ ಯಶ್, ತೆಲುಗು ಚಿತ್ರರಂಗದ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ವಿಜಯ ದೇವರಕೊಂಡ, ತಮಿಳು ಚಿತ್ರರಂಗದ ಉಳಗನಾಯಗನ್ ಕಮಲ್ ಹಾಸನ್ ಮತ್ತು ಹಿಂದಿ ಚಿತ್ರರಂಗದ ನಟ ರಣವೀರ್ ಸಿಂಗ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.

  ಬಾಯ್‌ಕಾಟ್ ಮಂದಿಯನ್ನೇ ಸೋಲಿಸಿತಾ ಬ್ರಹ್ಮಾಸ್ತ್ರ? ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು?ಬಾಯ್‌ಕಾಟ್ ಮಂದಿಯನ್ನೇ ಸೋಲಿಸಿತಾ ಬ್ರಹ್ಮಾಸ್ತ್ರ? ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು?

  ಇನ್ನು ಈ ಬಾರಿಯ ಸೈಮಾ ಪ್ರಶಸ್ತಿಯಲ್ಲಿ ಕನ್ನಡದ ಪರ ರಾಬರ್ಟ್ 10 ವಿಭಾಗಗಳಲ್ಲಿ ನಾಮಿನೇಟ್ ಆಗಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ಸ್ಯಾಂಡಲ್ ವುಡ್ ಸಿನಿಮಾ ಎನಿಸಿಕೊಂಡಿತ್ತು. ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ಗರುಡಗಮನ ವೃಷಭವಾಹನ 8 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ 7 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಹೀಗೆ ಈ 3 ಚಿತ್ರಗಳ ನಡುವೆ ಈ ಬಾರಿಯ ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಜಿದ್ದಾಜಿದ್ದಿ ಏರ್ಪಡಲಿದ್ದು, ಯಾವ ಚಿತ್ರ ಹೆಚ್ಚು ಪ್ರಶಸ್ತಿಗಳನ್ನು ತನ್ನ ಚೀಲಕ್ಕೆ ಹಾಕಿಕೊಳ್ಳಲಿದೆ ಎಂಬ ಕುತೂಹಲ ಮೂಡಿತ್ತು. ಇನ್ನು ಸದ್ಯ ಪ್ರಶಸ್ತಿ ವಿತರಣೆ ಆರಂಭವಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಈ ಬಾರಿಯ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕನ್ನಡದ ಪರ ಮೊದಲನೇ ಪ್ರಶಸ್ತಿಯನ್ನು ಬಾಚಿಕೊಳ್ಳುವುದರ ಮೂಲಕ ಖಾತೆಯನ್ನು ತೆರೆದಿದೆ.

  ಖಾತೆ ತೆರೆದ ರಾಬರ್ಟ್

  ಖಾತೆ ತೆರೆದ ರಾಬರ್ಟ್

  ಈ ಬಾರಿಯ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್‌ನಲ್ಲಿ 10 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ ರಾಬರ್ಟ್ ಚಿತ್ರದ ಛಾಯಾಗ್ರಾಹಕ ಸುಧಾಕರ್ ರಾಜ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ರಾಬರ್ಟ್ ಚಿತ್ರದಲ್ಲಿನ ತನ್ನ ಅದ್ಭುತ ಕ್ಯಾಮೆರಾ ಕೈಚಳಕಕ್ಕೆ ಸುಧಾಕರ್ ರಾಜ್ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

  ಉತ್ತಮ ಗೀತರಚನೆಕಾರ ವಾಸುಕಿ ವೈಭವ್

  ಉತ್ತಮ ಗೀತರಚನೆಕಾರ ವಾಸುಕಿ ವೈಭವ್

  ಇನ್ನು ಈ ಸೈಮಾ ಕಾರ್ಯಕ್ರಮದಲ್ಲಿ ಕನ್ನಡದ ಎರಡನೇ ಪ್ರಶಸ್ತಿ ಕೂಡ ಘೋಷಣೆಗೊಂಡಿದ್ದು, ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್‌ಕುಮಾರ್ ಅಭಿನಯಿಸಿದ್ದ ನಿನ್ನ ಸನಿಹಕೆ ಚಿತ್ರದ ನೀ ಪರಿಚಯ ಹಾಡನ್ನು ಬರೆದಿದ್ದ ಗಾಯಕ ವಾಸುಕಿ ವೈಭವ್ ಕನ್ನಡ ವಿಭಾಗದ ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಸದ್ಯ ಈ ಎರಡು ಪ್ರಶಸ್ತಿಗಳು ಮಾತ್ರ ಘೋಷಣೆಯಾಗಿದ್ದು, ಮುಂದೆ ಯಾರಿಗೆ ಪ್ರಶಸ್ತಿ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.

  ಸೈಮಾ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ, ತರುಣ್ ಸುಧೀರ್

  ಸೈಮಾ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ, ತರುಣ್ ಸುಧೀರ್

  ಇನ್ನು ಈ ಸೈಮಾ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಹಾಗೂ ತರುಣ್ ಸುಧೀರ್ ಆಗಮಿಸಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಶಿವಣ್ಣ ಭಜರಂಗಿ 2 ಚಿತ್ರದ ಮೂಲಕ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಿನೇಟ್ ಆಗಿದ್ದು, ತರುಣ್ ಸುಧೀರ್ ರಾಬರ್ಟ್ ಚಿತ್ರದ ಮೂಲಕ ಅತ್ಯುತ್ತಮ ನಿರ್ದೇಶಕ ಕೆಟಗರಿಯಲ್ಲಿ ನಾಮಿನೇಟ್ ಆಗಿದ್ದಾರೆ. ಹೀಗಾಗಿ ಈ ಇಬ್ಬರ ಆಗಮನ ಸದ್ಯ ಪ್ರೇಕ್ಷಕರಲ್ಲಿ ಈ ಇಬ್ಬರಿಗೂ ಈ ಪ್ರಶಸ್ತಿಗಳು ಲಭಿಸಲಿವೆಯಾ ಎಂಬ ಕುತೂಹಲವನ್ನು ಹುಟ್ಟು ಹಾಕಿವೆ.

  English summary
  SIIMA 2022 Winners: Roberrt cinematographer Sudhakar Raj bags the first award from sandalwood
  Sunday, September 11, 2022, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X