SIIMA 2023: ಈ ಬಾರಿ ರಾಕಿಗೆ ಪ್ರಶಸ್ತಿ ಕಷ್ಟ ಕಷ್ಟ.. ಹೇಗಿದೆ ಗೊತ್ತಾ ಪೈಪೋಟಿ?
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಪ್ರಶಸ್ತಿಗಾಗಿ ನಾಮಿನೇಷನ್ ಲಿಸ್ಟ್ ಹೊರ ಬಿದ್ದಿದೆ. ಆಯಾ ಚಿತ್ರರಂಗದಲ್ಲಿ ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಿನಿಮಾಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಸಿಗಲಿದೆ. ಕನ್ನಡದಲ್ಲಿ ಈ ಬಾರಿ ಪ್ರಶಸ್ತಿಗಾಗಿ ಭಾರೀ ಪೈಪೋಟಿಯೇ ನಡೀತಿದೆ. ಸೂಪರ್ ಹಿಟ್ ಚಿತ್ರಗಳು ಕಣದಲ್ಲಿವೆ.
ಕಳೆದ ಬಾರಿ ಬೆಂಗಳೂರಿನಲ್ಲಿ ಸೈಮಾ ಈವೆಂಟ್ ಸೂಪರ್ ಸಕ್ಸಸ್ ಕಂಡಿತ್ತು. ಈ ಬಾರಿ ದುಬೈನ ದಿ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಸೈಮಾ 2023 ಸಡಗರ ಕಳೆ ಕಟ್ಟಲಿದೆ. ಸೆಪ್ಟೆಂಬರ್ 15 ಮತ್ತು 16ರಂದು ಕಾರ್ಯಕ್ರಮ ನಿಗದಿಯಾಗಿದೆ. ಕನ್ನಡ ತಾರೆಯರು ಕೂಡ ಅದ್ಧೂರಿ ಕಾರ್ಯಕ್ರಮಕ್ಕಾಗಿ ಈ ಬಾರಿ ದುಬೈ ಫ್ಲೈಟ್ ಏರಲಿದ್ದಾರೆ. ಇನ್ನು ತೆಲುಗು, ತಮಿಳು ಚಿತ್ರರಂಗದಲ್ಲೂ ಪ್ರಶಸ್ತಿಗಾಗಿ ಜಿದ್ದಾ ಜಿದ್ದಿನ ಪೈಪೋಟಿ ನಡೀತಿದೆ.

ಕನ್ನಡದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಯಾರಿಗೆ ಸಿಗಬಹುದು? ಎನ್ನುವ ಚರ್ಚೆ ಜೋರಾಗಿದೆ. ಯಾಕೆಂದರೆ ಪೈಪೋಟಿ ಸಿಕ್ಕಾಪಟ್ಟೆ ಜಾಸ್ತಿಯಿದೆ. ಅತ್ಯುತ್ತಮ ನಟ ಪ್ರಶಸ್ತಿಗಾಗಿ 'ಜೇಮ್ಸ್' ಚಿತ್ರದಿಂದ ಪುನೀತ್ ರಾಜ್‌ಕುಮಾರ್, '777 ಚಾರ್ಲಿ' ಚಿತ್ರದ ರಕ್ಷಿತ್ ಶೆಟ್ಟಿ, 'ವೇದ' ಚಿತ್ರದಿಂದ ಶಿವಣ್ಣ, 'ವಿಕ್ರಾಂತ್ ರೋಣ' ಚಿತ್ರದಿಂದ ಸುದೀಪ್, 'KGF ಚಾಪ್ಟರ್-2' ಚಿತ್ರಕ್ಕಾಗಿ ಯಶ್ ಹಾಗೂ 'ಕಾಂತಾರ' ಚಿತ್ರದ ನಟನೆಗಾಗಿ ರಿಷಬ್ ಶೆಟ್ಟಿ ಹೆಸರು ನಾಮಿನೇಟ್ ಆಗಿದೆ. ಹಿಂದೆಂದಿಗಿಂತ ಈ ಬಾರಿ ಅತ್ಯುತ್ತಮ ನಟ ವಿಭಾಗದಲ್ಲಿ ಹೆಚ್ಚು ಪೈಪೋಟಿ ಕಂಡು ಬರುತ್ತಿದೆ.
ಈಗಾಗಲೇ ವೋಟ್ ಪೋಲ್ ಅನ್ನೂ ಸೈಮಾ ತೆರೆದಿದ್ದು, ಸಿನಿ ರಸಿಕರು siiima.in ವೆಬ್ ತಾಣಕ್ಕೆ ಭೇಟಿ ನೀಡಿ 'Votings 2023' ಆಯ್ಕೆಯಡಿಯಲ್ಲಿ ನಿಮ್ಮ ನೆಚ್ಚಿನ ನಟ, ಸಿನಿಮಾ ಹೀಗೆ ಹಲವು ವಿಭಾಗಗಳಲ್ಲಿ ವೋಟ್ ಮಾಡುವ ಅವಕಾಶ ಇದೆ. 'KGF' ಚಾಪ್ಟರ್-2 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ರಾಕಿ ಭಾಯ್ ಆರ್ಭಟಕ್ಕೆ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಆಗಿತ್ತು. ಮತ್ತೊಮ್ಮೆ ರಾಕಿಭಾಯ್ ಆಗಿ ಯಶ್ ಅಬ್ಬರಿಸಿದ್ದರು.
ಅತ್ಯುತ್ತಮ ನಟ ವಿಭಾಗದಲ್ಲಿ ಸೈಮಾ ಪ್ರಶಸ್ತಿಗೆ ಈ ಬಾರಿ ಯಶ್‌ಗೆ ರಿಷಬ್ ಶೆಟ್ಟಿ ಟಫ್ ಕಾಂಪಿಟೇಷನ್ ಕೊಡಲಿದ್ದಾರೆ. 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ಅಭಿನಯ ಯಾವ ಮಟ್ಟಿಗೆ ಸದ್ದು ಮಾಡಿತ್ತು ಅನ್ನೋದು ಗೊತ್ತೇಯಿದೆ. ದೇಶ ವಿದೇಶದಲ್ಲೂ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ನಟನೆ ನೋಡಿ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದರು. ಹಾಗಾಗಿ ಯಶ್ ಹಾಗೂ ರಿಷಬ್ ನಡುವೆ ನೆಟ್ ಟು ನೆಕ್ ಫೈಟ್ ಇದೆ.

ರಿಷಬ್ ಶೆಟ್ಟಿ ಮಾತ್ರವಲ್ಲ 'ವಿಕ್ರಾಂತ್ ರೋಣ' ಚಿತ್ರದಲ್ಲಿ ಸುದೀಪ್, 'ವೇದ' ಚಿತ್ರದಲ್ಲಿ ಶಿವಣ್ಣ ಹಾಗೂ '777 ಚಾರ್ಲಿ' ಕೂಡ ಅತ್ಯುತ್ತಮ ನಟನ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಹಾಗಾಗಿ ಈ ಬಾರಿ ಭರ್ಜರಿ ಪೈಪೋಟಿಯೇ ಏರ್ಪಟ್ಟಿದೆ. ಅಂದಹಾಗೆ 2018ರಲ್ಲಿ 'KGF' ಚಿತ್ರದ ನಟನೆಗಾಗಿ ಯಶ್‌ಗೆ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತ್ತು. ಕತಾರ್‌ನಲ್ಲಿ ಆ ವರ್ಷ ಈವೆಂಟ್ ನಡೆದಿತ್ತು.
ಇನ್ನು ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ವಿಭಾಗದಲ್ಲಿ 'KGF ಚಾಪ್ಟರ್- 2', 'ಕಾಂತಾರ', 'ಲವ್ ಮಾಕ್ಟೆಲ್- 2', 'ವಿಕ್ರಾಂತ್ ರೋಣ', '777 ಚಾರ್ಲಿ' ಸಿನಿಮಾಗಳು ಪ್ರಶಸ್ತಿಗಾಗಿ ನಾಮಿನೇಟ್ ಆಗಿವೆ. ಈ ಬಾರಿ ಯಾರೆಲ್ಲಾ ಸೈಮಾ ಪ್ರಶಸ್ತಿ ಎತ್ತಿ ಹಿಡಿಯುತ್ತಾರೆ ಕಾದು ನೋಡಬೇಕಿದೆ.


Click it and Unblock the Notifications











