SIIMA 2023: ಅತ್ಯುತ್ತಮ ನಟ ಪ್ರಶಸ್ತಿಗೆ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ನಾಮಿನೇಟ್ ಆದವರು ಯಾರು?
ಕಳೆದ ವರ್ಷ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಈ ಬಾರಿ ದುಬೈನಲ್ಲಿ ಆಯೋಜನೆಯಾಗಿದೆ. ಇನ್ನು ಸೈಮಾ 2023ರ ಕಾರ್ಯಕ್ರಮದಲ್ಲಿ 2022ರಲ್ಲಿ ಬಿಡುಗಡೆಗೊಂಡ ಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗಲಿದ್ದು, ಕಳೆದ ವರ್ಷ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಸಿನಿಮಾಗಳಾದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳೂ ಸಹ ಈ ಬಾರಿ ನಾಮಿನೇಟ್ ಆಗಿವೆ.
ಅತ್ತ ತೆಲುಗಿನಲ್ಲಿ ದೈತ್ಯ ಆರ್ ಆರ್ ಆರ್, ತಮಿಳಿನಲ್ಲಿ ಪೊನ್ನಿಯಿನ್ ಸೆಲ್ವನ್, ವಿಕ್ರಮ್, ಮಲಯಾಳಂನಲ್ಲಿ ತಲ್ಲುಮಾಲ ಸೇರಿದಂತೆ ಹಲವಾರು ಹಿಟ್ ಚಿತ್ರಗಳು ಈ ಬಾರಿ ನಾಮಿನೇಟ್ ಆಗಿವೆ. ಇನ್ನು ಕನ್ನಡ ಚಿತ್ರರಂಗ ಕಳೆದ ವರ್ಷ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದು ಈ ಪೈಕಿ ಬಹುತೇಕ ಎಲ್ಲಾ ಚಿತ್ರಗಳು ನಾಮಿನೇಟ್ ಆಗಿವೆ. ಇನ್ನು ಅತ್ಯುತ್ತಮ ನಾಯಕ ವಿಭಾಗದ ಅಡಿಯಲ್ಲಿ ಕನ್ನಡದ ಪರ ಜೇಮ್ಸ್ ಚಿತ್ರಕ್ಕಾಗಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಒಟ್ಟು ಆರು ನಟರು ನಾಮ ನಿರ್ದೇಶನಗೊಂಡಿದ್ದು, ತೆಲುಗಿನಲ್ಲಿ, ತಮಿಳಿನಲ್ಲಿ ಹಾಗೂ ಮಲಯಾಳಂನಲ್ಲಿ ಯಾವ ನಟರು ಯಾವ ಚಿತ್ರಗಳಿಗಾಗಿ ನಾಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮಿನೇಟ್ ಆದ ಕನ್ನಡದ ನಟರು:
ಪುನೀತ್ ರಾಜ್‌ಕುಮಾರ್ - ಜೇಮ್ಸ್
ಶಿವರಾಜ್‌ಕುಮಾರ್ - ವೇದ
ರಕ್ಷಿತ್ ಶೆಟ್ಟಿ - ಚಾರ್ಲಿ 777
ರಿಷಬ್ ಶೆಟ್ಟಿ - ಕಾಂತಾರ
ಯಶ್ - ಕೆಜಿಎಫ್ ಚಾಪ್ಟರ್ 2
ಸುದೀಪ್ - ವಿಕ್ರಾಂತ್ ರೋಣ
ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮಿನೇಟ್ ಆದ ತೆಲುಗು ನಟರು:
ಅಡಿವಿ ಶೇಷ್ - ಮೇಜರ್
ದುಲ್ಕರ್ ಸಲ್ಮಾನ್ - ಸೀತಾ ರಾಮಮ್
ಜೂನಿಯರ್ ಎನ್ ಟಿ ಆರ್ - ಆರ್ ಆರ್ ಆರ್
ನಿಖಿಲ್ ಸಿದ್ಧಾರ್ಥ - ಕಾರ್ತಿಕೇಯ 2
ರಾಮ್ ಚರಣ್ - ಆರ್ ಆರ್ ಆರ್
ಸಿದ್ದು ಜೊನ್ನಾಲಗಡ್ಡ - ಡಿಜೆ ಟಿಲ್ಲು
ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮಿನೇಟ್ ಆದ ತಮಿಳು ನಟರು:
ಧನುಷ್ - ತಿರುಚಿತ್ರಾಂಬಲಂ
ಕಮಲ್ ಹಾಸನ್ - ವಿಕ್ರಮ್
ಮಾಧವನ್ - ರಾಕೆಟ್ರಿ ದ ನಂಬಿ ಎಫೆಕ್ಟ್
ಸಿಳಂಬರಸನ್ - ವೆಂದು ತನಿಂದಂದು ಕಾಡು
ವಿಕ್ರಮ್ - ಮಹಾನ್ & ಪೊನ್ನಿಯಿನ್ ಸೆಲ್ವನ್ 1
ಅತ್ಯುತ್ತಮ ನಟ ಪ್ರಶಸ್ತಿಗಾಗಿ ನಾಮಿನೇಟ್ ಆದ ಮಲಯಾಳಂ ನಟರು:
ಬಸಿಲ್ ಜೋಸೆಫ್ - ಜಯ ಜಯ ಜಯ ಜಯ ಹೇ
ಕುಂಚಕೊ ಬೊಬನ್ - ನಾ ದಾನ್ ಕೇಸ್ ಕುಡು
ಮಮ್ಮೂಟ್ಟಿ - ಭೀಷ್ಮ ಪರ್ವಂ ಹಾಗೂ ರೋರ್ಷಾಕ್
ನಿವಿನ್ ಪೌಲಿ - ಪದವೆಟ್ಟು
ಪೃಥ್ವಿರಾಜ್ ಸುಕುಮಾರನ್ - ಜನ ಗಣ ಮನ
ಟೊವಿನೊ ಥಾಮಸ್ - ತಲ್ಲುಮಾಲ


Click it and Unblock the Notifications











