SIIMA 2023: ಸೈಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಯಾವ ಭಾಷೆಗಳಿಂದ ಯಾವ ಚಿತ್ರಗಳು ನಾಮಿನೇಟ್?

ಕಳೆದ ವರ್ಷ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದ್ದ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮ ಈ ಬಾರಿ ದುಬೈನಲ್ಲಿ ಆಯೋಜನೆಯಾಗಿದೆ. ಇನ್ನು ಸೈಮಾ 2023ರ ಕಾರ್ಯಕ್ರಮದಲ್ಲಿ 2022ರಲ್ಲಿ ಬಿಡುಗಡೆಗೊಂಡ ಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗಲಿದ್ದು, ಕಳೆದ ವರ್ಷ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಸಿನಿಮಾಗಳಾದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳೂ ಸಹ ಈ ಬಾರಿ ನಾಮಿನೇಟ್ ಆಗಿವೆ.

ಅತ್ತ ತೆಲುಗಿನಲ್ಲಿ ದೈತ್ಯ ಆರ್ ಆರ್ ಆರ್, ತಮಿಳಿನಲ್ಲಿ ಪೊನ್ನಿಯಿನ್ ಸೆಲ್ವನ್, ವಿಕ್ರಮ್, ಮಲಯಾಳಂನಲ್ಲಿ ತಲ್ಲುಮಾಲ ಸೇರಿದಂತೆ ಹಲವಾರು ಹಿಟ್ ಚಿತ್ರಗಳು ಈ ಬಾರಿ ನಾಮಿನೇಟ್ ಆಗಿವೆ. ಸದ್ಯ ಯಾವ ಚಿತ್ರಗಳು ಎಷ್ಟೆಷ್ಟು ಕೆಟಗರಿಗಳಲ್ಲಿ ನಾಮಿನೇಟ್ ಆಗಿವೆ ಎಂಬುದನ್ನು ಮಾತ್ರ ಸೈಮಾ ಅಧಿಕೃತವಾಗಿ ತಿಳಿಸಿದ್ದು, ಇನ್ನೂ ಸಹ ಕೆಟಗರಿವಾರು ನಾಮಿನೇಶನ್ ಪಟ್ಟಿ ಬಿಡುಗಡೆಯಾಗಬೇಕಿದೆ.

SIIMA 2023: List of all language films nominated for best movie award

ಸದ್ಯ ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಪೈಕಿ ಯಾವ ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಯಡಿಯಲ್ಲಿ ನಾಮಿನೇಟ್ ಆಗಿವೆ ಎಂಬ ಮಾಹಿತಿ ಲಭಿಸಿದ್ದು, ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಚಿತ್ರರಂಗಗಳಿಂದ ಯಾವೆಲ್ಲಾ ಚಿತ್ರಗಳು ನಾಮಿನೇಟ್ ಆಗಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಕನ್ನಡದಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಿನೇಟ್ ಆದ ಚಿತ್ರಗಳು:

* ಚಾರ್ಲಿ 777

* ವಿಕ್ರಾಂತ್ ರೋಣ

* ಲವ್ ಮಾಕ್ಟೇಲ್ 2

* ಕೆಜಿಎಫ್ ಚಾಪ್ಟರ್ 2

* ಕಾಂತಾರ

ತೆಲುಗಿನಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಿನೇಟ್ ಆದ ಚಿತ್ರಗಳು:

* ಡಿಜೆ ಟಿಲ್ಲು

* ಕಾರ್ತಿಕೇಯ 2

* ಮೇಜರ್

* ಆರ್ ಆರ್ ಆರ್

* ಸೀತಾ ರಾಮಮ್


ತಮಿಳಿನಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಿನೇಟ್ ಆದ ಚಿತ್ರಗಳು:

* ಲವ್ ಟುಡೇ

* ಪೊನ್ನಿಯನ್ ಸೆಲ್ವನ್ 1

* ರಾಕೆಟ್ರಿ; ದ ನಂಬಿ ಎಫೆಕ್ಟ್

* ತಿರುಚಿತ್ರಾಂಬಲಂ

* ವಿಕ್ರಮ್

ಮಲಯಾಳಂನಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮಿನೇಟ್ ಆದ ಚಿತ್ರಗಳು:

* ಭೀಷ್ಮ ಪರ್ವಂ

* ಹೃದಯಂ

* ಜಯ ಜಯ ಜಯ ಜಯ ಹೇ

* ನಾನ್ ದಾನ್ ಕೇಸು ಕುಡು

* ಜನ ಗಣ ಮನ

* ತಲ್ಲುಮಾಲ

More from Filmibeat

English summary
SIIMA 2023: List of all language films nominated for best movie award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X