SIIMA 2023: ನಾಮಿನೇಶನ್ ಪಟ್ಟಿಯಲ್ಲಿ ಕನ್ನಡದ ಈ ಹಿಟ್ ಚಿತ್ರವೇ ಇಲ್ಲ; ನೆಟ್ಟಿಗರ ಬೇಸರ!

ಕಳೆದ ವರ್ಷ ತೆರೆಗೆ ಬಂದ ದಕ್ಷಿಣ ಭಾರತದ ಚಿತ್ರರಂಗಗಳ ಸಿನಿಮಾಗಳ ಉತ್ತಮ ಕಾರ್ಯಗಳನ್ನು ಗುರುತಿಸಿ ಪ್ರಶಸ್ತಿ ನೀಡಲು ಸೈಮಾ ತೀರ್ಮಾನಿಸಿದ್ದು, ಈ ಬಾರಿ ಸಾಗರದಾಚೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿದೆ. ಹೌದು, ಈ ಬಾರಿ ದುಬೈನಲ್ಲಿ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

2022ರಲ್ಲಿ ಬಿಡುಗಡೆಗೊಂಡ ಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗಲಿದ್ದು, ಕಳೆದ ವರ್ಷ ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೇರಿಸಿದ ಸಿನಿಮಾಗಳಾದ ಕಾಂತಾರ ಹಾಗೂ ಕೆಜಿಎಫ್ ಚಾಪ್ಟರ್ 2 ಚಿತ್ರಗಳೂ ಸಹ ಈ ಬಾರಿ ನಾಮಿನೇಟ್ ಆಗಿವೆ. ಅತ್ತ ತೆಲುಗಿನಲ್ಲಿ ದೈತ್ಯ ಆರ್ ಆರ್ ಆರ್, ತಮಿಳಿನಲ್ಲಿ ಪೊನ್ನಿಯಿನ್ ಸೆಲ್ವನ್, ವಿಕ್ರಮ್, ಮಲಯಾಳಂನಲ್ಲಿ ತಲ್ಲುಮಾಲ ಸೇರಿದಂತೆ ಹಲವಾರು ಹಿಟ್ ಚಿತ್ರಗಳು ಈ ಬಾರಿ ನಾಮಿನೇಟ್ ಆಗಿವೆ. ಇನ್ನು ಕನ್ನಡ ಚಿತ್ರರಂಗ ಕಳೆದ ವರ್ಷ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದು ಈ ಪೈಕಿ ಬಹುತೇಕ ಎಲ್ಲಾ ಚಿತ್ರಗಳು ನಾಮಿನೇಟ್ ಆಗಿವೆ.

siima-2023-

ಕಳೆದ ವರ್ಷ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 2, ಕಾಂತಾರ, ಜೇಮ್ಸ್, ವಿಕ್ರಾಂತ್ ರೋಣ ಹಾಗೂ 777 ಚಾರ್ಲಿ ಸೇರಿದಂತೆ ಇನ್ನೂ ಹಲವಾರು ಚಿತ್ರಗಳು ಈ ಬಾರಿ ನಾಮಿನೇಟ್ ಆಗಿದ್ದು, ಸದ್ಯ ಸೈಮಾ ಯಾವ ಕೆಟಗರಿಗಳಲ್ಲಿ ಯಾವ ಚಿತ್ರಗಳು ಹಾಗೂ ಕಲಾವಿದರು ನಾಮಿನೇಟ್ ಆಗಿದ್ದಾರೆ ಎಂಬುದನ್ನು ಪ್ರಕಟಿಸಿದೆ. ಇದಕ್ಕಾಗಿ ವೋಟ್ ಪೋಲ್ ಅನ್ನೂ ಸಹ ಸೈಮಾ ತೆರೆದಿದ್ದು, ಸಿನಿ ರಸಿಕರು siiima.in ವೆಬ್ ತಾಣಕ್ಕೆ ಭೇಟಿ ನೀಡಿ 'Votings 2023' ಆಯ್ಕೆಯಡಿಯಲ್ಲಿ ವೋಟ್ ಮಾಡಬಹುದಾಗಿದೆ.

ಹೀಗೆ ಕನ್ನಡ ವಿಭಾಗದಲ್ಲಿ ಹಲವಾರು ಚಿತ್ರಗಳು ನಾಮಿನೇಟ್ ಆಗಿದ್ದು, ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಶನ್‌ನ ಗಾಳಿಪಟ 2 ಚಿತ್ರ ಮಾತ್ರ ಯಾವುದೇ ಕೆಟಗರಿ ಅಡಿಯಲ್ಲಿಯೂ ನಾಮಿನೇಟ್ ಆಗಿಲ್ಲ. ಈ ಕುರಿತು ಕನ್ನಡ ಸಿನಿ ರಸಿಕರು ಬೇಸರ ವ್ಯಕ್ತಪಡಿಸಿದ್ದು, ಅತ್ಯುತ್ತಮ ಗೀತ ರಚನೆಕಾರ ಕೆಟಗರಿ ಅಡಿಯಲ್ಲಾದರೂ ಈ ಚಿತ್ರ ನಾಮಿನೇಟ್ ಆಗಬೇಕಿತ್ತು. ನಾನಾಡದ ಮಾತೆಲ್ಲವ ಹಾಗೂ ನೀನು ಬಗೆಹರಿಯದ ಹಾಡು ಈ ಹಾಡುಗಳನ್ನು ಬರೆದ ಜಯಂತ್ ಕಾಯ್ಕಿಣಿ ಅಥವಾ ಇನ್ನುಳಿದ ಹಾಡುಗಳನ್ನು ಬರೆದ ಯೋಗರಾಜ್ ಭಟ್‌ಗೆ ಖಂಡಿತವಾಗಿ ಪ್ರಶಸ್ತಿ ಲಭಿಸುತ್ತಿತ್ತು ಎಂದು ಟ್ವೀಟ್ ಮಾಡುತ್ತಿದ್ದಾರೆ.

ಇನ್ನು ಕನ್ನಡದಲ್ಲಿ ಯಾವ ಕೆಟಗರಿಯಲ್ಲಿ ಯಾವೆಲ್ಲಾ ಚಿತ್ರಗಳು ಹಾಗೂ ಯಾರೆಲ್ಲಾ ಕಲಾವಿದರು ನಾಮಿನೇಟ್ ಆಗಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಅತ್ಯುತ್ತಮ ಚಿತ್ರ:

ಪರಂವಾ ಸ್ಟುಡಿಯೋಸ್ - 777 ಚಾರ್ಲಿ

ಹೊಂಬಾಳೆ ಫಿಲ್ಮ್ಸ್ - ಕಾಂತಾರ

ಹೊಂಬಾಳೆ ಫಿಲ್ಮ್ಸ್ - ಕೆಜಿಎಫ್ ಚಾಪ್ಟರ್ 2

ಕೃಷ್ಣ ಟಾಕೀಸ್ - ಲವ್ ಮಾಕ್‌ಟೇಲ್ 2

ಕಿಚ್ಚ ಕ್ರಿಯೇಷನ್ಸ್, ಶಾಲಿನಿ ಆರ್ಟ್ಸ್, ಇನ್ವೇನಿಯೋ ಒರಿಜಿನ್ - ವಿಕ್ರಾಂತ್ ರೋಣ


ಅತ್ಯುತ್ತಮ ನಿರ್ದೇಶಕ:

ಅನುಪ್ ಭಂಡಾರಿ - ವಿಕ್ರಾಂತ್ ರೋಣ

ಡಾರ್ಲಿಂಗ್ ಕೃಷ್ಣ - ಲವ್ ಮಾಕ್‌ಟೇಲ್ 2

ಕಿರಣರಾಜ್ ಕೆ - 777 ಚಾರ್ಲಿ

ಪ್ರಶಾಂತ್ ನೀಲ್ - ಕೆಜಿಎಫ್ ಚಾಪ್ಟರ್ 2

ರಿಷಬ್ ಶೆಟ್ಟಿ - ಕಾಂತಾರ


ಅತ್ಯುತ್ತಮ ನಟ:

ಪುನೀತ್ ರಾಜ್‌ಕುಮಾರ್ - ಜೇಮ್ಸ್

ರಕ್ಷಿತ್ ಶೆಟ್ಟಿ - 777 ಚಾರ್ಲಿ

ರಿಷಬ್ ಶೆಟ್ಟಿ - ಕಾಂತಾರ

ಶಿವರಾಜಕುಮಾರ್ - ವೇದ

ಸುದೀಪ್ - ವಿಕ್ರಾಂತ್ ರೋಣ

ಯಶ್ - ಕೆಜಿಎಫ್ ಚಾಪ್ಟರ್ 2


ಅತ್ಯುತ್ತಮ ನಟಿ:

ಆಶಿಕಾ ರಂಗನಾಥ್ - ರೇಮೋ

ಚೈತ್ರ ಆಚಾರ್ - ಗಿಲ್ಕಿ

ರಚಿತಾ ರಾಮ್ - ಮಾನ್ಸೂನ್ ರಾಗ

ಸಪ್ತಮಿ ಗೌಡ - ಕಾಂತಾರ

ಶರ್ಮಿಳಾ ಮಾಂಡ್ರೆ - ಗಾಳಿಪಟ ೨

ಶ್ರೀನಿಧಿ ಶೆಟ್ಟಿ - ಕೆಜಿಎಫ್ ಚಾಪ್ಟರ್ 2


ಅತ್ಯುತ್ತಮ ಪೋಷಕ ನಟ:

ಕಿಶೋರ್ - ಕಾಂತಾರ

ದಿಗಂತ್ ಮಂಚಾಲೆ - ಗಾಳಿಪಟ ೨

ಅಚ್ಯುತ್ ಕುಮಾರ್ - ಕೆಜಿಎಫ್ ಚಾಪ್ಟರ್ 2

ರಂಗಾಯಣ ರಘು - ಜೇಮ್ಸ್

ರಾಜ್ ಬಿ ಶೆಟ್ಟಿ - 777 ಚಾರ್ಲಿ


ಅತ್ಯುತ್ತಮ ಪೋಷಕ ನಟಿ:

ಅದಿತಿ ಸಾಗರ್ - ವೇದ

ಕಾರುಣ್ಯ ರಾಮ್ - ಪೆಟ್ರೋಮ್ಯಾಕ್ಸ್

ಸಾಕ್ಷಿ ಮೇಘನಾ - ಲಿಸಾ

ಶರ್ಮಿತಾ ಗೌಡ - ಫ್ಯಾಮಿಲಿ ಪ್ಯಾಕ್

ಶುಭರಕ್ಷಾ - ಹೋಮ್ ಮಿನಿಸ್ಟರ್


ಅತ್ಯುತ್ತಮ ಸಂಗೀತ ನಿರ್ದೇಶಕ:

ಅಜನೀಶ್ ಲೋಕನಾಥ್ - ಕಾಂತಾರ

ಅರ್ಜುನ್ ಜನ್ಯ - ಏಕ್ ಲವ್ ಯಾ

ನಕುಲ್ ಅಭಯಂಕರ್ - ಲವ್ ಮಾಕ್‌ಟೇಲ್ 2

ನೋಬಿನ್ ಪಾಲ್ - 777 ಚಾರ್ಲಿ

ರವಿ ಬಸ್ರೂರ್ - ಕೆಜಿಎಫ್ ಚಾಪ್ಟರ್ 2


ಅತ್ಯುತ್ತಮ ಗೀತರಚನೆಕಾರ:

ಪ್ರಮೋದ್ ಮರವಂತೆ - ಸಿಂಗಾರ ಸಿರಿಯೆ (ಕಾಂತಾರ)

ರಾಘವೇಂದ್ರ ಕಾಮತ್ - ಇದೇ ಸ್ವರ್ಗ (ಲವ್ ಮಾಕ್‌ಟೇಲ್ 2)

ರವಿ ಬಸ್ರೂರ್ - ತೂಫಾನ್ (ಕೆಜಿಎಫ್ ಚಾಪ್ಟರ್ 2)

ಶಶಾಂಕ್ - ಜಗವೇ ನೀನು ಗೆಳತಿಯೇ (ಲವ್ 360)

ವಿ ನಾಗೇಂದ್ರ ಪ್ರಸಾದ್ - ಬೆಳಕಿನ ಕವಿತೆ (ಬನಾರಸ್)

ಅತ್ಯುತ್ತಮ ಹಿನ್ನೆಲೆ ಗಾಯಕ:

ಕೆ ಎಸ್ ಹರಿಶಂಕರ್ - ದ ಹಿಮ್ ಆಫ್ ಧರ್ಮ (777 ಚಾರ್ಲಿ)

ಸಂಜಿತ್ ಹೆಗ್ಡೆ - ಬೆಳಕಿನ ಕವಿತೆ (ಬನಾರಸ್)

ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರ್, ರವಿ ಬಸ್ರೂರ್, ಪುನೀತ್ ರುದ್ರನಾಗ್, ಮನೀಶ್ ದಿನಕರ್ - ಸುಲ್ತಾನ (ಕೆಜಿಎಫ್ ಚಾಪ್ಟರ್ 2)

ಸಿದ್ ಶ್ರೀರಾಮ್ - ಜಗವೇ ನೀನು ಗೆಳತಿಯೇ (ಲವ್ 360)

ವಿಜಯ್ ಪ್ರಕಾಶ್ - ಸಿಂಗಾರ ಸಿರಿಯೆ (ಕಾಂತಾರ)


ಅತ್ಯುತ್ತಮ ಹಿನ್ನೆಲೆ ಗಾಯಕಿ:

ಐಶ್ವರ್ಯಾ ರಂಗರಾಜನ್ - ಮೀಟ್ ಮಾಡಣ (ಏಕ್ ಲವ್ ಯಾ)

ಚೈತ್ರ ಆಚಾರ್ - ಸೋಲ್ ಆಫ್ ಬೆಂಕಿ (ಬೆಂಕಿ)

ಮಂಗ್ಲಿ - ಗಿಲಕ್ಕೊ ಶಿವ (ವೇದ)

ಸುಚೇತಾ ಬಸ್ರೂರು - ಗಗನ ನೀ (ಕೆಜಿಎಫ್ ಚಾಪ್ಟರ್ 2)

ಸುನಿಧಿ ಚೌಹಾಣ್ - ರಾ ರಾ ರಕ್ಕಮ್ಮ (ವಿಕ್ರಾಂತ್ ರೋಣ)


ಅತ್ಯುತ್ತಮ ಖಳ ನಟ

ಅಚ್ಯುತ್ ಕುಮಾರ್ - ಕಾಂತಾರ

ಅಪೂರ್ವ ಕಾಸರವಳ್ಳಿ - ಗುರು ಶಿಷ್ಯರು

ಮೇಕಾ ಶ್ರೀಕಾಂತ್ - ಜೇಮ್ಸ್

ನಿರೂಪ್ ಭಂಡಾರಿ - ವಿಕ್ರಾಂತ್ ರೋಣ

ಸಂಜಯ್ ದತ್ - ಕೆಜಿಎಫ್ ಚಾಪ್ಟರ್ 2


ಅತ್ಯುತ್ತಮ ಉದಯೋನ್ಮುಖ ನಟ:

ಧೀರೆನ್ ರಾಮ್‌ಕುಮಾರ್ - ಶಿವ 143

ಕಾರ್ತಿಕ್ ಮಹೇಶ್ - ಡೊಳ್ಳು

ಮಧುಸೂಧನ್ ಗೋವಿಂದ್ - ಮೇಡ್ ಇನ್ ಬೆಂಗಳೂರು

ವಿಕ್ರಮ್ ರವಿಚಂದ್ರನ್ - ತ್ರಿವಿಕ್ರಮ

ಜೈದ್ ಖಾನ್ - ಬನಾರಸ್

ಪೃಥ್ವಿ ಶಾಮನೂರು - ಪದವಿ ಪೂರ್ವ


ಅತ್ಯುತ್ತಮ ಉದಯೋನ್ಮುಖ ನಟಿ:

ಅಂಜಲಿ ಅನೀಶ್ - ಪದವಿ ಪೂರ್ವ

ನೀತಾ ಅಶೋಕ್ - ವಿಕ್ರಾಂತ್ ರೋಣ

ನಿಧಿ ಹೆಗಡೆ - ಡೊಳ್ಳು

ರಚನಾ ಇಂದರ್ - ಲವ್ 360

ರೀಷ್ಮಾ ನಾನಯ್ಯ - ಏಕ್ ಲವ್ ಯಾ

ಮೇಘಾ ಶೆಟ್ಟಿ - ದಿಲ್ಪಸಂದ್

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ:

ಹರಿಪ್ರಸಾದ್ ಜಯಣ್ಣ - ಪದವಿ ಪೂರ್ವ

ಇಸ್ಲಾಹುದ್ದೀನ್ ಎನ್ ಎಸ್ - ನೋಡಿ ಸ್ವಾಮಿ ಇವನು ಇರೋದೇ ಹೀಗೆ

ಪ್ರದೀಪ್ ಶಾಸ್ತ್ರಿ - ಮೇಡ್ ಇನ್ ಬೆಂಗಳೂರು

ಸಾಗರ್ ಪುರಾಣಿಕ್ - ಡೊಳ್ಳು

ಶೂನ್ಯಾ - ಹೆಡ್ ಬುಷ್


ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ:

ಅಪೇಕ್ಷಾ ಪುರೋಹಿತ್ ಮತ್ತು ಪವನ್ ಒಡೆಯರ್ - ಡೊಳ್ಳು

ಬಾಲಕೃಷ್ಣ ಬಿ ಎಸ್ - ಮೇಡ್ ಇನ್ ಬೆಂಗಳೂರು

ಜಿತೇಂದ್ರ ಮಂಜುನಾಥ್ - ಕಾಣೆಯಾದವರ ಬಗ್ಗೆ ಪ್ರಕಟಣೆ

ನಾಗರಾಜ್ ಪಿ ಅಜ್ಜಂಪುರ - ರಾಜಾ ರಾಣಿ ರೋರರ್ ರಾಕೆಟ್

ಪೂರ್ಣಚಂದ್ರ ನಾಯ್ಡು ಮತ್ತು ಶ್ರೀಕಾಂತ್ ವಿ - ಹೋಮ್ ಮಿನಿಸ್ಟರ್


ಅತ್ಯುತ್ತಮ ಛಾಯಾಗ್ರಾಹಕ:

ಅರವಿಂದ್ ಕಶ್ಯಪ್ - ಕಾಂತಾರ

ಭುವನ್ ಗೌಡ - ಕೆಜಿಎಫ್ ಚಾಪ್ಟರ್ 2

ಮಹೇನ್ ಸಿಂಹ - ಏಕ್ ಲವ್ ಯಾ

ಸಂತೋಷ್ ರೈ ಪಾತಾಜೆ - ಗಾಳಿಪಟ ೨

ವಿಲಿಯಂ ಡೇವಿಡ್ - ವಿಕ್ರಾಂತ್ ರೋಣ


ಅತ್ಯುತ್ತಮ ಹಾಸ್ಯ ನಟ:

ಚಿಕ್ಕಣ್ಣ - ತ್ರಿವಿಕ್ರಮ

ಕುರಿ ಪ್ರತಾಪ್ - ತ್ರಿಬಲ್ ರೈಡಿಂಗ್

ನಾಗಭೂಷಣ - ಕಾಂತಾರ

ಪ್ರಕಾಶ್ ತೂಮಿನಾಡ್ - ಲಕ್ಕಿಮ್ಯಾನ್

ಸಾಧು ಕೋಕಿಲ - ಅವತಾರ ಪುರುಷ

More from Filmibeat

English summary
SIIMA 2023: Netizens felt sad as Gaalipata 2 movie is not nominated in any category
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X