Siima 2023: ಸೈಮಾ ಸಂಭ್ರಮದಲ್ಲಿ ಗಮನ ಸೆಳೆದ ಕನ್ನಡತಿ ಶ್ರೀಲೀಲಾ, ಫೋಟೋಗಳು ವೈರಲ್

ಸೈಮಾ (ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು) ಪ್ರಶದ್ತಿ ಪ್ರದಾನ ಸಮಾರಂಭಕ್ಕೆ ನಟಿ ಶ್ರೀಲೀಲಾ ದುಬೈ ತಲುಪಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾಗಿನಿಂಎ ಎಲ್ಲರ ಗಮನ ಸೆಳೆದಿದ್ದಾರೆ. ಕಿತ್ತಳೆ ಬಣ್ಣದ ಡ್ರೆಸ್‌ನಲ್ಲಿ ಬೊಂಬಾಟ್ ಆಗಿ ಕಾಣುತ್ತಿದ್ದ ಅವರ ಮೇಲೆ ಎಲ್ಲರ ಕಣ್ಣು!.

ನಟಿ ಶ್ರೀಲೀಲಾಗೆ ಇದು ಮೊದಲ ಸೈಮಾ ಕಾರ್ಯಕ್ರಮ ಎಂಬುದು ಗಮನಾರ್ಹ. ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಭರವಸೆಯ ನಟಿಯಾಗಿ ಕಾಣಿಸಿಕೊಂಡಿರುವ ಶ್ರೀಲೀಲಾ 2019 ರಲ್ಲಿ ತೆರೆಕಂಡ ಕನ್ನಡದ ಕಿಸ್ ಸಿನಿಮಾ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಾದ ನಂತರ 2021 ರಲ್ಲಿ ಬಿಡುಗಡೆಯಾದ 'ಭರಾಟೆ' ಸಿನಿಮಾದಲ್ಲಿ ಶ್ರೀಮುರುಳಿ ಜೊತೆಗೆ ಕಾಣಿಸಿಕೊಂಡ ನಂತರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದರು.

Siima 2023: Sreeleelas Boss Lady Vibes In Siima Awards Celebrations

ಇನ್ನು, ತೆಲುಗಿನಲ್ಲಿ ಬಹುಬೇಡಿಕೆಯ ನಟಿಯಾಗಿರುವ ಶ್ರೀಲೀಲಾ ಸೆಪ್ಟೆಂಬರ್ 15 ಮತ್ತು 16 ರಂದು ಎರಡು ದಿನ ನಡೆಯಲಿರುವ ಸೈಮಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ನಟಿ ಶ್ರೀಲೀಲಾ ಕಿತ್ತಳೆ ಬಣ್ಣದ ಪ್ಯಾಂಟ್‌ಸೂಟ್‌ ಧರಿಸಿದ್ದರು. ಇದಕ್ಕೆ ಮ್ಯಾಚಿಂಗ್ ಆಗಿ ಒಂದು ಜೋಡಿ ಗೋಲ್ಡನ್ ಸ್ಕ್ವೇರ್ ಆಕಾರದ ಒಲೆಗಳು ಮತ್ತು ಡಬಲ್ ಲೇಯರ್ಡ್ ಚೈನ್‌ಗಳನ್ನು ಧರಿಸಿದ್ದರು.

ಕೂದಲನ್ನು ಎತ್ತಿ ಪೋನಿಟೇಲ್ ಕಟ್ಟಿದ್ದ ಅವರು, ಹೈ ಹೀಲ್ಸ್ ಶೂಗಳಿ ಧರಿಸಿ ಸಕತ್ ಬಾಸ್ ಲೇಡಿ ಲುಕ್‌ನಲ್ಲಿ ಇದ್ದರು. ಜೊತೆಗೆ ಸ್ಮಾರ್ಟ್ ವಾಚ್ ಕೂಡ ಧರಿಸಿದ್ದಳು. ಇದಾದ ನಂತರ ಮತ್ತೆ ಶುಕ್ರವಾರ ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.

ಸೈಮಾದಲ್ಲಿ ಶ್ರೀಲೀಲಾ

ಸೈಮಾ ಅವಾರ್ಡ್ಸ್ 2023 ರಲ್ಲಿ 'ಧಮಾಕಾ' ಚಿತ್ರದಲ್ಲಿನ ನಟನೆಗಾಗಿ ಶ್ರೀಲೀಲಾ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ನಟಿಯರಾದ ಸಮಂತಾ ರುತ್ ಪ್ರಭು, ಮೃಣಾಲ್ ಠಾಕೂರ್, ಮೀನಾಕ್ಷಿ ಚೌಧರಿ ಮತ್ತು ನಿತ್ಯಾ ಮೆನೆನ್ ಅವರೊಂದಿಗೆ ಈ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿದ್ದಾರೆ. ಸಮಂತಾ ತಮ್ಮ ಯಶೋಧ ಚಿತ್ರದಿಂದ ನಾಮಿನೇಟ್ ಆಗಿದ್ದಾರೆ. ಮೃಣಾಲ್ ಠಾಕೂರ್ ಹೆಚ್ಚು ಮೆಚ್ಚುಗೆ ಪಡೆದ ಸೀತಾ ರಾಮಂ ಚಿತ್ರದ ನಟನೆಗಾಗಿ ನಾಮಿನೇಟ್ ಆಗಿದ್ದಾರೆ.

Siima 2023: Sreeleelas Boss Lady Vibes In Siima Awards Celebrations

ಶ್ರೀಲೀಲಾ ಮುಂದಿನ ಸಿನಿಮಾಗಳು

ನಟಿ ಶ್ರೀಲೀಲಾ ಅವರ ಮುಂಬರುವ ಸಿನಿಮಾಗಳ ವಿಷಯಕ್ಕೆ ಬಂದರೆ, ನಟಿಗೆ ಕೆಲಸದ ಕೊರತೆಯಿಲ್ಲ. ಹಲವಾರು ಸಿನಿಮಾಗಳು ಅವರ ತೆಕ್ಕೆಯಲ್ಲಿವೆ. ದೊಡ್ಡ ದೊಡ್ಡ ಸ್ಟಾರ್ ನಟೆಒಂದಿಗೆ ಕೆಲಸ ಮಾಡುವ ಅವಕಾಶ ಅವರಿಗಿದೆ. ಶ್ರೀಲೀಲಾ ಅವರು ತಮ್ಮ ಮುಂಬರುವ ತೆಲುಗು ಭಾಷೆಯ ಆಕ್ಷನ್ ಕಾಮಿಡಿ ಚಿತ್ರ ಭಗವಂತ ಕೇಸರಿ ಬಿಡುಗಡೆಗೆ ಸಜ್ಜಾಗಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನದ ಈ ಚಿತ್ರವು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ. ಇದರಲ್ಲಿ ಕಾಜಲ್ ಅಗರ್ವಾಲ್ ಮತ್ತು ಅರ್ಜುನ್ ರಾಂಪಾಲ್ ಜೊತೆಗೆ ನಂದಮೂರಿ ಬಾಲಕೃಷ್ಣ ಕೂಡ ನಟಿಸಿದ್ದಾರೆ.

ಇದಲ್ಲದೆ, ರಾಮ್ ಪೋತಿನೇನಿ ಜೊತೆಗಿನ ಶ್ರೀಲೀಲಾ ಅವರ ಸ್ಕಂದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬೋಯಪತಿ ಶ್ರೀನು ಬರೆದು ನಿರ್ದೇಶಿಸಿರುವ ಈ ಚಿತ್ರವು ಆಕ್ಷನ್ ಥ್ರಿಲ್ಲರ್ ಆಗಿದೆ. ಸ್ಕಂದವನ್ನು ಹೊರತುಪಡಿಸಿ, ಶ್ರೀಲೀಲಾ ಅವರ ಬಳಿ ಆದಿಕೇಶವ, ಎಕ್ಸ್‌ಟ್ರಾ, ಗುಂಟೂರು ಕಾರಮ್ ಮತ್ತು ಉಸ್ತಾದ್ ಭಗತ್ ಸಿಂಗ್ ಸೇರಿದಂತೆ ಕೆಲವು ಇತರ ಸಿನಿಮಾಗಳು ಇವೆ.

More from Filmibeat

English summary
Siima 2023: Sreeleela's boss lady vibes in Siima awards celebrations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X