SIIMA 2023 Telugu winners: ಸೈಮಾ 2023 ತೆಲುಗು ವಿಜೇತರ ಪಟ್ಟಿ: 'RRR' ಚಿತ್ರಕ್ಕೆ ಸಿಂಹಪಾಲು

ರಾಜಮೌಳಿ ನಿರ್ದೇಶನದ 'RRR' ಚಿತ್ರಕ್ಕೆ ಈ ಬಾರಿ ಸೈಮಾ ರತ್ನಗಂಬಳಿ ಹಾಸಿದೆ. ಸೌತ್‌ ಇಂಡಿಯನ್ ಇಂಟರ್‌ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ 2023 ಈವೆಂಟ್ ದುಬೈನಲ್ಲಿ ನಡೀತಿದೆ. ನಿನ್ನೆ(ಸೆಪ್ಟೆಂಬರ್ 15) ಕನ್ನಡ ಜೊತೆಗೆ ತೆಲುಗಿನ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿ ವಿತರಿಸಲಾಗಿದೆ.

ಪ್ರೇಕ್ಷಕರ ನಿರೀಕ್ಷೆಯಂತೆ 'RRR' ಚಿತ್ರದ ನಟನೆಗಾಗಿ ಜ್ಯೂ. ಎನ್‌ಟಿಆರ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ನಿರ್ದೇಶಕ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ, ಗೀತರಚನೆಕಾರ ಚಂದ್ರಬೋಸ್ ಮತ್ತು ಛಾಯಾಗ್ರಾಹಕ ಸೆಂಥಿಲ್ ಕುಮಾರ್ ಕೂಡ ಪ್ರಶಸ್ತಿ ಸ್ವೀಕರಿಸಿದರು. ಸೈಮಾ 2023 ರ ಅತಿ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ 'RRR' ಎಂದು ಹೇಳಬಹುದು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ರಾಜಮೌಳಿ ಕುಟುಂಬ ಆಗಮಿಸಿರಲಿಲ್ಲ. ರಾಜಮೌಳಿ ಪ್ರಶಸ್ತಿಯನ್ನು ತಾರಕ್, ಕೀರವಾಣಿ ಪ್ರಶಸ್ತಿಯನ್ನು ಚಂದ್ರ ಬೋಸ್ ಪಡೆದರು. ಇನ್ನು ಎನ್‌ಟಿಆರ್‌ ಭಾವುಕ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

SIIMA 2023 Telugu Winners List: Check out Which tollywood Actors/Actress Win SIIMA Awards

ಸೈಮಾ 2023 ತೆಲುಗು ವಿಜೇತ ಕಂಪ್ಲೀಟ್ ಲಿಸ್ಟ್.

ಅತ್ಯುತ್ತಮ ನಟ - NTR (RRR)
ಅತ್ಯುತ್ತಮ ನಟಿ - ಶ್ರೀ ಲೀಲಾ (ಧಮಾಕಾ)
ಅತ್ಯುತ್ತಮ ನಿರ್ದೇಶಕ - ಎಸ್‌ಎಸ್ ರಾಜಮೌಳಿ (RRR)
ಅತ್ಯುತ್ತಮ ಚಿತ್ರ - ಸೀತಾ ರಾಮ್ (ವೈಜಯಂತಿ ಮೂವೀಸ್ ಅಶ್ವಿನಿದತ್, ಸ್ವಪ್ನಾ ಸಿನಿಮಾ)
ಅತ್ಯುತ್ತಮ ಸಂಗೀತ ನಿರ್ದೇಶಕ - ಎಂಎಂ ಕೀರವಾಣಿ (RRR)
ಅತ್ಯುತ್ತಮ ಛಾಯಾಗ್ರಹಣ - ಕೆ. ಸೆಂಥಿಲ್ ಕುಮಾರ್ (RRR)
ಅತ್ಯುತ್ತಮ ಸಾಹಿತ್ಯ - ಚಂದ್ರ ಬೋಸ್ (RRR)

ಅತ್ಯುತ್ತಮ ನಟ (ವಿಮರ್ಶಕರು) - ಅಡಿವಿ ಶೇಶ್ (ಮೇಜರ್)
ಅತ್ಯುತ್ತಮ ನಟಿ (ವಿಮರ್ಶಕರು) - ಮೃಣಾಲ್ ಠಾಕೂರ್ (ಸೀತಾರಾಮಂ)

ಅತ್ಯುತ್ತಮ ಚೊಚ್ಚಲ ನಿರ್ದೇಶಕ - ವಸಿಷ್ಠ (ಬಿಂಬಿಸಾರ)
ಅತ್ಯುತ್ತಮ ಚೊಚ್ಚಲ (ನಾಯಕ) - ಅಶೋಕ್ ಗಲ್ಲಾ (ಹೀರೋ)
ಅತ್ಯುತ್ತಮ ಚೊಚ್ಚಲ (ನಾಯಕಿ) - ಮೃಣಾಲ್ ಠಾಕೂರ್ (ಸೀತಾ ರಾಮ್ ಚಲನಚಿತ್ರ)
ಅತ್ಯುತ್ತಮ ಚೊಚ್ಚಲ ನಿರ್ಮಾಪಕರು - ಶರತ್ ಮತ್ತು ಅನುರಾಗ್ (ಮೇಜರ್)
ಸೆನ್ಸೇಷನಲ್ ಆಫ್‌ ದಿ ಇಯರ್ - ಕಾರ್ತಿಕೇಯ 2

ಅತ್ಯುತ್ತಮ ಪೋಷಕ ನಟ - ರಾಣಾ ದಗ್ಗುಬಾಟಿ (ಭೀಮ್ಲಾ ನಾಯಕ್)
ಅತ್ಯುತ್ತಮ ಪೋಷಕ ನಟಿ - ಸಂಗೀತಾ (ಮಸೂದ)
ಅತ್ಯುತ್ತಮ ಖಳನಟ - ಸುಹಾಸ್ (ಹಿಟ್- 2)
ಅತ್ಯುತ್ತಮ ಹಾಸ್ಯನಟ - ಶ್ರೀನಿವಾಸ ರೆಡ್ಡಿ (ಕಾರ್ತಿಕೇಯ -2)
ಫ್ಯಾಷನ್ ಯೂತ್ ಐಕಾನ್ - ಶ್ರುತಿ ಹಾಸನ್
ಪ್ರಾಮಿಸಿಂಗ್ ಸ್ಟಾರ್ - ಬೆಲ್ಲಂಕೊಂಡ ಗಣೇಶ್‌

ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಾಹಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸಾಹಿತ್ಯ ಹೀಗೆ ಒಟ್ಟು 5 ಸೈಮಾ ಪ್ರಶಸ್ತಿಗಳು RRR ಚಿತ್ರಕ್ಕೆ ಲಭಿಸಿದೆ. ಕಳೆದ ವರ್ಷ ಮಾರ್ಚ್ 25ಕ್ಕೆ ತೆರೆಕಂಡಿದ್ದ 'RRR' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ರಾಮ್‌ಚರಣ್, ಜ್ಯೂ. ಎನ್‌ಟಿಆರ್‌ ನಾಯಕರಾಗಿ ನಟಿಸಿದ್ದ ಸಿನಿಮಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶಸ್ತಿ ಪಡೆದಿತ್ತು. 'ನಾಟು ನಾಟು' ಗೀತೆಗೆ ಆಸ್ಕರ್ ಸಿಕ್ಕಿತ್ತು.

ಕನ್ನಡ ನಟಿ ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಕಮಾಲ್ ಮಾಡುತ್ತಿದ್ದಾರೆ. ಸ್ಟಾರ್‌ ನಟರ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಕೈಯಲ್ಲಿ 8 ತೆಲುಗು ಸಿನಿಮಾಗಳಿವೆ. ಸದ್ಯ ಬೆಂಗಳೂರು ಬೆಡಗಿ 'ಧಮಾಕಾ' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದು ಹಿರಿಹಿರಿ ಹಿಗ್ಗಿದ್ದಾರೆ. ಸೈಮಾ ಪ್ರಶಸ್ತಿ 11 ನೇ ವರ್ಷಕ್ಕೆ ಕಾಲಿಟ್ಟಿದೆ. ಚಿತ್ರರಂಗದಲ್ಲಿ ರಾಷ್ಟ್ರಪ್ರಶಸ್ತಿ, ಫಿಲ್ಮ್‌ಫೇರ್ ಬಳಿಕ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

More from Filmibeat

English summary
Explore SIIMA 2023 Telugu Winners complete List
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X