SIIMA Awards 2025 ; ಸೈಮಾದಲ್ಲಿ ಮಿಂಚಿದ ಉಪೇಂದ್ರ-ಸುದೀಪ್ ; ಯಾರಿಗೆಲ್ಲಾ ಒಲಿಯಿತು ಈ ಬಾರಿಯ ಪ್ರಶಸ್ತಿ ?

ಚಿತ್ರರಂಗದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತೆ. ಆ ಪೈಕಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುವ ಪ್ರಶಸ್ತಿಗಳಲ್ಲಿ ಸೈಮಾ {ಸೌತ್ ಇಂಡಿಯನ್ ಇಂಟರ್‌ ನ್ಯಾಷನಲ್ ಅವಾರ್ಡ್‌} ಕೂಡ ಒಂದು.ಇಂಥಾ ಸೈಮಾ ಪ್ರಶಸ್ತಿ ಸಮಾರಂಭ ನಿನ್ನೆ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಕನ್ನಡ.. ತೆಲುಗು.. ಮಲಯಾಳಂ ಮತ್ತು ತಮಿಳು ಚಿತ್ರರಂಗದ ಪೈಕಿ ನಿನ್ನೆ ಕನ್ನಡ ಹಾಗೂ ತೆಲುಗು ಚಿತ್ರರಂಗಕ್ಕೆ ಪ್ರಶಸ್ತಿಗಳನ್ನು ನೀಡಲಾಗಿದೆ.

2024ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ಪ್ರಶಸ್ತಿಯನ್ನು ನೀಡಲಾಗಿದ್ದು ಸಲಗ ವಿಜಯ್ ಕುಮಾರ್ ನಿರ್ದೇಶನದ ಭೀಮಾ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಒಂಬತ್ತು ವಿಭಾಗಗಳಲ್ಲಿ ಸ್ಫರ್ಧೆಯಲ್ಲಿದ್ದವು. ಇನ್ನೂ ರಕ್ಷಿತ್ ಶೆಟ್ಟಿ ನಿರ್ಮಾಣದ ಇಬ್ಬನಿ ತಬ್ಬಿದ ಇಳೆಯಲಿ 7 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು. ಹಾಗಿದ್ದರೆ ಯಾರಿಗೆಲ್ಲಾ ಈ ಬಾರಿಯ ಸೈಮಾ ಪ್ರಶಸ್ತಿ ಸಿಕ್ಕಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿ

SIIMA 2025 Kannada Winners Sudeep and Upendra Take Home Top Honours Full List From Dubai

ಅತ್ಯುತ್ತಮ ನಾಯಕ ಯಾರು ?

ಕಳೆದ ವರ್ಷದ ಅಂತ್ಯದಲ್ಲಿ ತೆರೆಗೆ ಬಂದು ಧೂಳೆಬ್ಬಿಸಿದ ಚಿತ್ರ ''ಮ್ಯಾಕ್ಸ್''. ಸುದೀಪ್ ಅಭಿನಯದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಹಣದ ಹೊಳೆ ಹರಿಸಿತ್ತು. ಅಭಿಮಾನಿಗಳ ಹೃದಯವನ್ನು ಕೂಡ ಗೆದ್ದಿತ್ತು. ಇದೇ ಚಿತ್ರದ ಅಭಿನಯದ ಕಿಚ್ಚ ಸುದೀಪ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಲಾಗಿದೆ.

ಇನ್ನೂ ''ಮ್ಯಾಕ್ಸ್'' ಚಿತ್ರ ತೆರೆಗೆ ಬರುವ ಮುನ್ನ, ಸಲಗ ವಿಜಯ್ ಕುಮಾರ್ ನಿರ್ದೇಶನದ ''ಭೀಮ'' ಚಿತ್ರ ತೆರೆಗೆ ಬಂದಿತ್ತು. ಸದ್ದು ಮಾಡಿತ್ತು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಜಯ್ ಅವರಿಗೆ ವಿಮರ್ಷಕರ ವಲಯದಿಂದ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ. ತಮ್ಮ ಪ್ರಶಸ್ತಿಯನ್ನು ದುನಿಯಾ ವಿಜಯ್ ಖುದ್ದು ಸೈಮಾ ವೇದಿಕೆಯಲ್ಲಿ ಪಡೆದರೆ ಸುದೀಪ್ ಪರವಾಗಿ ಡಾ.ವಿ.ನಾಗೇಂದ್ರ ಪ್ರಸಾದ್ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ

ಇನ್ನೂ ಕಳೆದ ವರ್ಷ ''ಮ್ಯಾಕ್ಸ್'' ಚಿತ್ರದ ಎದುರು ಬಿಡುಗಡೆಯಾದ ''ಯುಐ'' ಚಿತ್ರಕ್ಕೆ ನಿರಾಸೆಯಾಗಿತ್ತು. ಬಾಕ್ಸಾಫೀಸ್‌ನಲ್ಲಿ ಹಿನ್ನೆಡೆಯಾಗಿತ್ತು. ಆದರೆ ಸೈಮಾ ವೇದಿಕೆಯಲ್ಲಿ ''ಯುಐ'' ಚಿತ್ರಕ್ಕೆ ನಿರಾಸೆಯಾಗಿಲ್ಲ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಉಪೇಂದ್ರ ತಮ್ಮ ''ಯುಐ'' ಚಿತ್ರಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ''O2'' ಚಿತ್ರದಲ್ಲಿನ ಅಭಿನಯಕ್ಕೆ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ.

ಯಾರಿಗೆಲ್ಲ ಒಲಿಯಿತು ಪ್ರಶಸ್ತಿ ? ಇಲ್ಲಿದೆ ಸಂಪೂರ್ಣ ಪಟ್ಟಿ

ಅತ್ಯುತ್ತಮ ನಿರ್ದೇಶಕ ( ವಿಮರ್ಷಕರ ವಿಭಾಗ) - ವಿಜಯ್ ಕಾರ್ತಿಕೇಯನ್ (ಮ್ಯಾಕ್ಸ್)

ಅತ್ಯುತ್ತಮ ಸಂಗೀತ ನಿರ್ದೇಶಕ - ಬಿ ಅಜನೀಶ್ ಲೋಕನಾಥ್ (ಮ್ಯಾಕ್ಸ್)

ಅತ್ಯುತ್ತಮ ಹಾಸ್ಯ ನಟ - ಜಾಕ್ ಸಿಂಗಮ್ (ಭೀಮ)

ಅತ್ಯುತ್ತಮ ನಿರ್ದೇಶಕ(ಚೊಚ್ಚಲ ನಿರ್ದೇಶನ)-ಸಂದೀಪ್ ಸುಂಕದ್ (ಶಾಖಾಹಾರಿ)

ಅತ್ಯುತ್ತಮ ನಟ (ಚೊಚ್ಚಲ ಚಿತ್ರ) - ಸಮರ್ಜಿತ್ ಲಂಕೇಶ್ (ಗೌರಿ)

ಅತ್ಯುತ್ತಮ ನಟಿ (ಚೊಚ್ಚಲ ಚಿತ್ರ) - ಅಂಕಿತಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)

ಭರವಸೆ ಮೂಡಿಸಿದ ಹೊಸ ನಟಿ - ಸಾನ್ಯಾ ಅಯ್ಯರ್ (ಗೌರಿ)

ಅತ್ಯುತ್ತಮ ಕೊರಿಯೋಗ್ರಾಫರ್ - ಇಮ್ರಾನ್ ಸರ್ದಾರಿಯಾ

ಅತ್ಯುತ್ತಮ ಛಾಯಾಗ್ರಹಣ - ಶ್ರೀವತ್ಸನ್ ಸೆಲ್ವರಾಜನ್ (ಇಬ್ಬನಿ ತಬ್ಬಿದ ಇಳೆಯಲಿ)

SIIMA 2025ರ ವಿಶೇಷ ಪ್ರಶಸ್ತಿ- ವಿ ಹರಿಕೃಷ್ಣ

ಅತ್ಯುತ್ತಮ ಹಿನ್ನೆಲೆ ಗಾಯಕಿ - ಐಶ್ವರ್ಯ ರಂಗರಾಜನ್

ಅತ್ಯುತ್ತಮ ಹಿನ್ನೆಲೆ ಗಾಯಕ - ಜಸ್ಕರನ್

ಅತ್ಯುತ್ತಮ ಚಿತ್ರ ಸಾಹಿತಿ - ಡಾ. ವಿ. ನಾಗೇಂದ್ರ ಪ್ರಸಾದ್

ಇಂದು (ಸೆಪ್ಟೆಂಬರ್ 6) ತಮಿಳು ಮತ್ತು ಮಲಯಾಳಂ ಚಿತ್ರರಂಗಕ್ಕೆ ಸೈಮಾ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪೃಥ್ವಿರಾಜ್ ಸುಕುಮಾರನ್ ಅಭಿನಯದ ''ಆಡುಜೀವಿತಂ'' ಚಿತ್ರಕ್ಕೆ ಹೆಚ್ಚಿನ ಪ್ರಶಸ್ತಿಗಳು ಸಿಗುವ ನಿರೀಕ್ಷೆ ಇದೆ.

More from Filmibeat

English summary
The Sandalwood industry shined at SIIMA 2025 in Dubai. Discover the surprising winners, the full list of top films, and the actors who took home trophies this year.
Read more about: siima awards filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X