ಸೈಮಾ 2020: ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ಲವ್ ಮಾಕ್ಟೈಲ್-ಮಂಕಿ ಟೈಗರ್

ಸೌತ್‌ನಲ್ಲಿ ಸೈಮಾ ಸಂಭ್ರಮ ಶುರುವಾಗಿದೆ. ಕಳೆದ ಎರಡು ವರ್ಷದಿಂದ ಸೈಮಾ ಸಮಾರಂಭ ನಡೆದಿಲ್ಲ. ಕೋವಿಡ್ ಕಾರಣದಿಂದ ಎರಡು ವರ್ಷದ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ, ಎರಡು ವರ್ಷದ ಸೈಮಾ ಪ್ರಶಸ್ತಿಯನ್ನು ಒಟ್ಟಿಗೆ ನೀಡುವ ಯೋಜನೆಯಾಗಿದೆ. ಸೆಪ್ಟೆಂಬರ್ 11, 12ರಂದು ಸೈಮಾ ಪ್ರಶಸ್ತಿ ಸಮಾರಂಭ ಹೈದರಾಬಾದ್‌ನಲ್ಲಿ ಆಯೋಜನೆಯಾಗಿದೆ. ಇದೀಗ, 2020ನೇ ಸಾಲಿನಲ್ಲಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನವಾದ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ.

ತೆಲುಗಿನಲ್ಲಿ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಚಿತ್ರಗಳ ನಡುವೆ ನೇರ ಪೈಪೋಟಿ ಇದೆ. ತಮಿಳಿನಲ್ಲಿ 'ಸೂರರೈ ಪೊಟ್ರು' ಸಿನಿಮಾದ ಮುಂಚೂಣಿಯಲ್ಲಿದೆ. ಮಲಯಾಳಂ ಭಾಷೆಯಲ್ಲಿ 'ಅಯ್ಯಪ್ಪನಂ ಕೋಶಿಯುಂ' ಚಿತ್ರ ಎಲ್ಲರಿಗಿಂತ ಮುಂದಿದೆ. ಇನ್ನು ಕನ್ನಡದಲ್ಲಿ ಮೂರು ಸಿನಿಮಾಗಳ ಸೈಮಾ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ಮಾಡ್ತಿದೆ.

ಡಾರ್ಲಿಂಗ್ ಕೃಷ್ಣ ಚೊಚ್ಚಲ ಬಾರಿಗೆ ನಿರ್ದೇಶಿಸಿದ್ದ 'ಲವ್ ಮಾಕ್ಟೈಲ್', ಧನಂಜಯ್ ನಟಿಸಿದ್ದ 'ಪಾಪ್‌ಕಾರ್ನ್ ಮಂಕಿ ಟೈಗರ್' ಹಾಗೂ 'ಫ್ರೆಂಚ್ ಬಿರಿಯಾನಿ' ಚಿತ್ರಗಳು ತಲಾ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿದೆ. ಯಾವ ಯಾವ ವಿಭಾಗದಲ್ಲಿ ಮುಂದೆ ಓದಿ...

ಲವ್ ಮಾಕ್ಟೈಲ್ ಸಿನಿಮಾ

ಲವ್ ಮಾಕ್ಟೈಲ್ ಸಿನಿಮಾ

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಅಮೃತಾ ಅಯ್ಯಂಗರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಲವ್ ಮಾಕ್ಟೈಲ್ ಸಿನಿಮಾ ಸೈಮಾ ಪ್ರಶಸ್ತಿಯ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿದೆ. 2020ರ ಹಿಟ್ ಸಿನಿಮಾ ಎನಿಸಿಕೊಂಡಿದೆ.

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ನಟ

ಅತ್ಯುತ್ತಮ ನಟಿ

ಅತ್ಯುತ್ತಮ ಪೋಷಕ ನಟಿ

ಅತ್ಯುತ್ತಮ ಸಂಗೀತ ನಿರ್ದೇಶಕ

ಅತ್ಯುತ್ತಮ ಗೀತೆರಚನೆಕಾರ

ಅತ್ಯುತ್ತಮ ಹಿನ್ನೆಲೆ ಗಾಯಕ

ಅತ್ಯುತ್ತಮ ಹಿನ್ನೆಲೆ ಗಾಯಕಿ

ಅತ್ಯುತ್ತಮ ಛಾಯಾಗ್ರಾಹಕ

ಪಾಪ್‌ಕಾರ್ನ್ ಮಂಕಿ ಟೈಗರ್

ಪಾಪ್‌ಕಾರ್ನ್ ಮಂಕಿ ಟೈಗರ್

2020ರಲ್ಲಿ ತೆರೆಕಂಡ 'ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾ ಸೈಮಾ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ದುನಿಯಾ ಸೂರಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಧನಂಜಯ್, ನಿವೇದಿತಾ, ಅಮೃತಾ ಅಯ್ಯಂಗರ್ ಸೇರಿದಂತೆ ಹಲವರು ನಟಿಸಿದ್ದರು.

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ನಟ

ಅತ್ಯುತ್ತಮ ನಟಿ

ಅತ್ಯುತ್ತಮ ಸಂಗೀತ ನಿರ್ದೇಶಕ

ಅತ್ಯುತ್ತಮ ಗೀತೆರಚನೆಕಾರ

ಅತ್ಯುತ್ತಮ ಹಿನ್ನೆಲೆ ಗಾಯಕ

ಅತ್ಯುತ್ತಮ ನವ ನಟಿ

ಅತ್ಯುತ್ತಮ ಛಾಯಾಗ್ರಾಹಕ

ಅತ್ಯುತ್ತಮ ಹಾಸ್ಯನಟ

ಫ್ರೆಂಚ್ ಬಿರಿಯಾನಿ

ಫ್ರೆಂಚ್ ಬಿರಿಯಾನಿ

ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡು ಗಮನ ಸೆಳೆದ ಸಿನಿಮಾ ಫ್ರೆಂಚ್ ಬಿರಿಯಾನಿ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಈ ಚಿತ್ರವೂ ಹತ್ತು ವಿಭಾಗದಲ್ಲಿ ನಾಮಿನೇಟ್ ಆಗಿದೆ.

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ನಟ

ಅತ್ಯುತ್ತಮ ಪೋಷಕ ನಟ

ಅತ್ಯುತ್ತಮ ಸಂಗೀತ ನಿರ್ದೇಶಕ

ಅತ್ಯುತ್ತಮ ಗೀತೆರಚನೆಕಾರ

ಅತ್ಯುತ್ತಮ ಹಿನ್ನೆಲೆ ಗಾಯಕ

ಅತ್ಯುತ್ತಮ ಹಿನ್ನೆಲೆ ಗಾಯಕಿ

ಅತ್ಯುತ್ತಮ ಛಾಯಾಗ್ರಾಹಕ

ಅತ್ಯುತ್ತಮ ಹಾಸ್ಯನಟ

2019ನೇ ಸಾಲಿನಲ್ಲಿ 'ಯಜಮಾನ' ಅಬ್ಬರ

2019ನೇ ಸಾಲಿನಲ್ಲಿ 'ಯಜಮಾನ' ಅಬ್ಬರ

2019ನೇ ಸಾಲಿನ ಸೈಮಾ ಪ್ರಶಸ್ತಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಯಜಮಾನ' ಸಿನಿಮಾ ಅತಿ ಹೆಚ್ಚು ವಿಭಾಗದಲ್ಲಿ ನಾಮನಿರ್ದೇಶನವಾಗಿದೆ. ಹರಿಕೃಷ್ಣ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್ ಸೇರಿದಂತೆ ಹಲವರು ನಟಿಸಿದ್ದರು. ಒಟ್ಟು 12 ವಿಭಾಗದಲ್ಲಿ ನಾಮಿನೇಟ್ ಆಗಿದೆ.

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ನಟ

ಅತ್ಯುತ್ತಮ ನಟಿ

ಅತ್ಯುತ್ತಮ ಪೋಷಕ ನಟ

ಅತ್ಯುತ್ತಮ ಪೋಷಕ ನಟಿ

ಅತ್ಯುತ್ತಮ ಸಂಗೀತ ನಿರ್ದೇಶಕ

ಅತ್ಯುತ್ತಮ ಹಿನ್ನೆಲೆ ಗಾಯಕ

ಅತ್ಯುತ್ತಮ ಹಿನ್ನೆಲೆ ಗಾಯಕಿ

ಅತ್ಯುತ್ತಮ ಖಳನಾಯಕ

ಅತ್ಯುತ್ತಮ ಛಾಯಾಗ್ರಾಹಕ

ಅತ್ಯುತ್ತಮ ಹಾಸ್ಯನಟ

ಇದಕ್ಕೂ ಮುಂಚೆ ಮಲೇಶಿಯಾ, ಶಾರ್ಜಾ, ಅಬುದುಬೈ, ದುಬೈ, ಸಿಂಗಾಪೂರ್ ಅಂತಹ ರಾಷ್ಟ್ರಗಳಲ್ಲಿ ಸೈಮಾ ಕಾರ್ಯಕ್ರಮ ನಡೆಯುತ್ತಿತ್ತು. ಇದೀಗ, ಈ ವರ್ಷ ಹೈದರಾಬಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

More from Filmibeat

English summary
SIIMA announced the nominees list for the Kannada film industry for 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X