ಸೈಮಾ 2018 : 'ವಿಕ್ರಂ ವೇದ' ಅತ್ಯುತ್ತಮ ತಮಿಳು ಸಿನಿಮಾ
ಸೈಮಾ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿನ್ನೆ ನಡೆದಿದೆ. ದುಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ದಿಗ್ಗಜ ಕಲಾವಿದರು ಭಾಗಿಯಾಗಿದ್ದರು.
ನಿನ್ನೆ ತಮಿಳು ಹಾಗೂ ಮಲೆಯಾಳಂ ಭಾಷೆಯ ಸಿನಿಮಾಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾಲಿವುಡ್ ಚಿತ್ರಗಳ ಪೈಕಿ 'ವಿಕ್ರಂ ವೇದ' ಬೆಸ್ಟ್ ಸಿನಿಮಾ ಅಂತ ಕರೆಸಿಕೊಂಡಿದೆ. ಪ್ರೇಕ್ಷಕರ ಪ್ರೀತಿ ಪಡೆದಿದ್ದ ಈ ಸಿನಿಮಾಗೆ ಪ್ರಶಸ್ತಿ ಕೂಡ ಸಿಕ್ಕಿದೆ.

ಇಂದು ಕನ್ನಡ ಹಾಗೂ ತೆಲುಗು ಎರಡು ಭಾಷೆಯ ಸಿನಿಮಾಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕನ್ನಡ ಚಿತ್ರಗಳ ಪೈಕಿ ರಾಜಕುಮಾರ 9 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.
ಕನ್ನಡ ನಟಿಯರಾದ ಶೃತಿ ಹರಿಹರನ್, ಸಂಯುಕ್ತ ಹೆಗ್ಡೆ, ಪ್ರಣೀತಾ, ಸಂಜನಾ, ನಭಾ ನಟೇಶ್, ಶಾನ್ವಿ ಶ್ರೀವಾತ್ಸವ್, ಶುಭ್ರ ಅಯ್ಯಪ್ಪ, ಭಾವನ ರಾವ್ ಭಾಗವಹಿಸಿದ್ದಾರೆ.
English summary
Siima Awards 2018 : Vikram Vedha (Tamil) movie got best movie awards.


Click it and Unblock the Notifications