ಸೈಮಾ 2022 ನಾಮಿನೇಷನ್: ರಾಬರ್ಟ್, ಯುವರತ್ನ, ಗರುಡ ಗಮನ ವೃಷಭ ವಾಹನ!
ಸಿನಿಮಾಗಳಿಗೆ ಪ್ರಶಸ್ತಿಗಳು ಬಹಳ ಮುಖ್ಯ. ಸಿನಿಮಾ ಮಾಡುವವರೆಲ್ಲಾ ತಮ್ಮ ಸಿನಿಮಾಗೆ ಪ್ರಶಸ್ತಿ ಸಿಗಬೇಕು ಎಂದುಕೊಳ್ಳುತ್ತಾರೆ. ಆದರೆ ಅದು ಎಲ್ಲಾ ಸಿನಿಮಾಗಳಿಗೂ ಸಾಧ್ಯ ಆಗುವುದಿಲ್ಲ. ಸಿನಿಮಾಗಳಿಗೆ, ಕಲಾವಿದರಿಗೆಕೊಡುವ ಹೆಸರಾಂತ ಪ್ರಶಸ್ತಿಗಳಲ್ಲಿ ಸೈಮಾ ಪ್ರಶಸ್ತಿ ಕೂಡ ಒಂದು.
ಸೈಮಾ ಅವಾರ್ಡ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೈಮಾ ಎಂದರೆ, 'ಸೌತ್ ಇಂಂಡಿಯನ್ ಇಂಟರ್‌ನ್ಯಾಷನಲ್ ಅವಾರ್ಡ್' ಎಂದು. ಈ ಪ್ರಶಸ್ತಿಯನ್ನು ಪ್ರಮುಖವಾಗಿ ಸೌತ್ ಸಿನಿಮಾರಂಗದಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾತ್ರವೇ ಕೊಡಲಾಗುತ್ತದೆ.
ಹಾಗಾಗಿ ಪ್ರತಿ ಬಾರಿ ಈ ಪ್ರಶಸ್ತಿ ಪಡದುಕೊಳ್ಳುವ ಸಿನಿಮಾ ಯಾವುವು, ಕಲಾವಿದರು ಯಾರು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಕನ್ನಡಿಗರಿಗೆ ಕನ್ನಡದ ಯಾವ ಸಿನಿಮಾ ಈ ಅವಾರ್ಡ್ ಪಡೆಯುತ್ತೆ ಎನ್ನುವ ಕುತೂಹಲ ಇದ್ದೇ ಇರುತ್ತದೆ. ಈ ಬಾರಿಯ ಯಾವೆಲ್ಲಾ ಕನ್ನಡ ಸಿನಿಮಾಗಳು ನಾಮನಿರ್ದೇಶನ ಆಗಿವೆ ಎನ್ನುವ ಬಗ್ಗೆ ಮುಂದೆ ಓದಿ...

ಸೈಮಾ ಅವಾರ್ಡ್‌ಗೆ ಕನ್ನಡ ಚಿತ್ರಗಳು!
ಪ್ರತಿಬಾರಿಯಂತೆ ಈ ಬಾರಿಯೂ ಸೈಮಾ ಪ್ರಶಸ್ತಿಯ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. 2022ರ ಸೈಮಾ ಪ್ರಶಸ್ತಿಗೆ ತಯಾರಿ ನಡೆಯುತ್ತಿದೆ. ಈ ಬಾರಿ ಪ್ರಶಸ್ತಿಗೆ ಸಿನಿಮಾ ಆಯ್ಕೆ ಕೊಂಚ ಸವಾಲೇ ಆಗಬಹುದು. ಯಾಕೆಂದರೆ ಸೌತ್‌ನಲ್ಲಿ ಹಲವಾರು ಉತ್ತಮ ಸಿನಿಮಾಗಳು ಬಂದಿವೆ. ಹಾಗಾಗಿ ಯಾವ ಸಿನಿಮಾಗಳಿಗೆ ಈ ಬಾರಿ ಪ್ರಶಸ್ತಿ ಸಂದಲಿಯೋ ನೋಡಬೇಕು. ಇನ್ನು ಕನ್ನಡದಲ್ಲಿ ಯಾವೆಲ್ಲಾ ಸಿನಿಮಾಗಳು ನಾಮಿನೇಟ್ ಆಗಿವೆ ಎನ್ನುವ ಲಿಸ್ಟ್ ಹೊರ ಬಿದ್ದಿದೆ.

'ಸೈಮಾ'ಗೆ ನಾಮಿನೇಟ್ ಆದ ದರ್ಶನ್ ಚಿತ್ರ!
ಸೈಮಾ ಪ್ರಶಸ್ತಿಗೆ ಕನ್ನಡದ ಹೆಸರಾಂತ ಸಿನಿಮಾ ನಾಮಿನೇಟ್ ಆಗಿದೆ. ನಟ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ 2022ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಈ ಸಿನಿಮಾ 2021ರ ಮಾರ್ಚ್‌ನಲ್ಲಿ ರಿಲೀಸ್ ಆಯ್ತು. ಕೊರೋನಾ ಹಾವಳಿ ನಡುವೆಯೂ 'ರಾಬರ್ಟ್' ಸಿನಿಮಾ ಗೆದ್ದು ಬೀಗಿತು. ನಿರೀಕ್ಷೆಯನ್ನು ಮೀರಿ ಗಳಿಕೆಯಲ್ಲಿ ಹೊಸ ದಾಖಲೆ ಬರೆದ ಸಿನಿಮಾ ಇದು. ಈಗ ಸೈಮಾ ಪ್ರಸಸ್ತಿಗೆ ನಾಮಿನೇಟ್ ಆಗಿದೆ. ತರುಣ್ ಸುಧಿರ್ ನಿರ್ದೇಶನ, ದರ್ಶನ್ ಆಶಾ ಭಟ್ ನಟನೆ, ಉಮಾಪತಿ ನಿರ್ಮಾಣ ಮಾಡಿದ್ದಾರೆ.

ಸೈಮಾ ರೇಸ್‌ನಲ್ಲಿ ಅಪ್ಪು ಸಿನಿಮಾ
ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಿನಿಮಾ ಕೂಡ ಈ ಬಾರಿಯ ಸೈಮಾಗೆ ನಾಮಿನೇಟ್ ಆಗಿದೆ. ಇದು ನಟ ಪುನೀತ್ ರಾಜ್‌ಕುಮಾರ್ ಮತ್ತು ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಬಂದು ಹಿಟ್ ಲಿಸ್ಟ್ ಸೇರಿದ ಸಿನಿಮಾ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ಯುವರತ್ನ' 2021 ಏಪ್ರಿಲ್‌ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಕೂಡ ಕೊರೋನಾ ಲಾಕ್‌ಡೌನ್ ಬ್ರೇಕ್‌ನಲ್ಲಿ ತೆರೆಗೆ ಬಂತು. ಈಗ ಸೈಮಾ ಪಟ್ಟಿ ಸೇರಿದ್ದು, ಸಿನಿಮಾ ಪ್ರಶಸ್ತಿ ಪಡೆಯುತ್ತಾ ನೋಡಬೆಕಿದೆ.

ಸೈಮಾ ರೇಸ್‌ನಲ್ಲಿ GGVV!
'ರಾಬರ್ಟ್' ಮತ್ತು 'ಯುವರತ್ನ' ಸಿನಿಮಾಗಳು ಸ್ಟಾರ್ ನಟರ ಕಮರ್ಷಿಯಲ್ ಸಿನಿಮಾಗಳು. ಈ ಚಿತ್ರಗಳ ಜೊತೆಗೆ ಮತ್ತೊಂದು ಪ್ರಯೋಗಿಕ ಸಿನಿಮಾ ಕೂಡ ನಾಮಿನೇಟ್ ಆಗಿದೆ. ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಜೊತೆಗೆ ಮಾಡಿತುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ಕೂಡ 2022ರ ಸೈಮಾ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಈ ಚಿತ್ರ ಕೂಡ ರಿಲೀಸ್ ಬಳಿಕ ದೊಡ್ಡ ಮಟ್ಟದಲ್ಲಿ ಹವಾ ಹುಟ್ಟು ಹಾಕಿತ್ತು.


Click it and Unblock the Notifications











