SIIMA: ರಾಬರ್ಟ್‌ಗೆ ಬೆಸ್ಟ್ ನಿರ್ದೇಶಕ ಪ್ರಶಸ್ತಿ ಗೆದ್ದು ತರುಣ್ ಆಡಿದ ಮಾತು ಕೇಳಿ ಕಾಲರ್ ಎಗರಿಸಿದ ಡಿ ಫ್ಯಾನ್ಸ್!

ಬೆಂಗಳೂರಿನಲ್ಲಿ ಈ ಬಾರಿಯ ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಜರುಗಿತು. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೊದಲ ದಿನ ಕನ್ನಡ ಹಾಗೂ ತೆಲುಗು ಸಿನಿ ರಂಗದ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು ಹಾಗೂ ಭಾನುವಾರ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸಿನಿಮಾಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.

ಇನ್ನು ಈ ಬಾರಿಯ ಸೈಮಾದಲ್ಲಿ ಕನ್ನಡದ ಪರ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಹತ್ತು ವಿಭಾಗಗಳಲ್ಲಿ ನಾಮಿನೇಟ್ ಆಗುವ ಮೂಲಕ ಅತಿಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕನ್ನಡ ಚಲನಚಿತ್ರ ಎನಿಸಿಕೊಂಡಿತ್ತು. ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭವಾಹನ ಎಂಟು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು ಹಾಗೂ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಏಳು ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು.

ಹೀಗೆ ಈ ಬಾರಿ ಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ಈ ಮೂರು ಚಿತ್ರಗಳ ನಡುವೆ ಸೈಮಾದಲ್ಲಿ ಜಿದ್ದಾಜಿದ್ದಿ ಏರ್ಪಡಲಿದೆ ಎಂಬ ನಿರೀಕ್ಷೆಯಿತ್ತು ಹಾಗೂ ಅತಿಹೆಚ್ಚು ವಿಭಾಗಗಳಲ್ಲಿ ನಾಮಿನೇಟ್ ಆದ ರಾಬರ್ಟ್ ಹೆಚ್ಚು ಪ್ರಶಸ್ತಿ ಗೆಲ್ಲುವ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಆದರೆ, ಮೂರು ವಿಭಾಗಗಳಲ್ಲಿ ಮಾತ್ರ ರಾಬರ್ಟ್ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಿದೆ. ಇನ್ನು ರಾಬರ್ಟ್ ಸಿನಿಮಾಗಾಗಿ ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಪ್ರಶಸ್ತಿ ಸ್ವೀಕರಿಸಿದ ನಂತರ ತರುಣ್ ಸುಧೀರ್ ಆಡಿದ ಮಾತುಗಳನ್ನು ಕೇಳಿದ ದರ್ಶನ್ ಫ್ಯಾನ್ಸ್ ಸದ್ಯ ಕಾಲರ್ ಎಗರಿಸುತ್ತಿದ್ದಾರೆ.

ಈ ಅವಾರ್ಡ್ ದರ್ಶನ್ ಫ್ಯಾನ್ಸ್‌ಗೆ ಎಂದ ತರುಣ್

ಈ ಅವಾರ್ಡ್ ದರ್ಶನ್ ಫ್ಯಾನ್ಸ್‌ಗೆ ಎಂದ ತರುಣ್

ದರ್ಶನ್ ಅಭಿಮಾನಿಗಳು ರಾಬರ್ಟ್ ಬಿಡುಗಡೆಯಾದಾಗ ತರುಣ್ ಸುಧೀರ್ ನಿರ್ದೇಶನವನ್ನು ಮನಸಾರೆ ಮೆಚ್ಚಿಕೊಂಡಿದ್ದರು. ಚಿತ್ರ ಬಿಡುಗಡೆ ಮುನ್ನ ಹಾಗೂ ಚಿತ್ರ ಬಿಡುಗಡೆಯಾದ ನಂತರ ಅಭೂತಪೂರ್ವ ಬೆಂಬಲವನ್ನು ನೀಡಿದ್ದರು. ಹೀಗಾಗಿ ದರ್ಶನ್ ಅಭಿಮಾನಿಗಳಿಗೆ ತಾನು ರಾಬರ್ಟ್‌ಗಾಗಿ ಗೆದ್ದ ಬೆಸ್ಟ್ ಡೈರೆಕ್ಟರ್ ಪ್ರಶಸ್ತಿಯನ್ನು ತರುಣ್ ಸುಧೀರ್ ಅರ್ಪಿಸುತ್ತಿದ್ದೇನೆ ಎಂದು ವೇದಿಕೆಯಲ್ಲಿ ಘೋಷಿಸಿದ್ದಾರೆ. ಸದ್ಯ ತರುಣ್ ಸುಧೀರ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದರ್ಶನ್ ಫ್ಯಾನ್ಸ್ ಈ ವಿಡಿಯೋವನ್ನು ಹಂಚಿಕೊಂಡು ಹೆಮ್ಮೆ ಪಡುತ್ತಿದ್ದಾರೆ.

ರಾಬರ್ಟ್‌ ಛಾಯಾಗ್ರಾಹಕನಿಗೆ ಪ್ರಶಸ್ತಿ

ರಾಬರ್ಟ್‌ ಛಾಯಾಗ್ರಾಹಕನಿಗೆ ಪ್ರಶಸ್ತಿ

ಇನ್ನು ರಾಬರ್ಟ್ ಚಿತ್ರದ ಛಾಯಾಗ್ರಾಹಕ ಸುಧಾಕರ್ ರಾಜ್ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಲಭಿಸಿತು. ಇನ್ನು ಇದು ಈ ಬಾರಿಯ ಸೈಮಾ ಕಾರ್ಯಕ್ರಮದಲ್ಲಿ ಪ್ರಕಟಣೆಗೊಂಡ ಪ್ರಥಮ ಪ್ರಶಸ್ತಿಯಾಗಿತ್ತು.

ಅರ್ಜುನ್ ಜನ್ಯಾಗೆ ಪ್ರಶಸ್ತಿ

ಅರ್ಜುನ್ ಜನ್ಯಾಗೆ ಪ್ರಶಸ್ತಿ

ರಾಬರ್ಟ್ ಚಿತ್ರದಲ್ಲಿ ಹಿಟ್ ಹಾಡುಗಳನ್ನು ಸಂಯೋಜಿಸಿದ್ದ ಅರ್ಜುನ್ ಜನ್ಯಾ ಅವರಿಗೆ ಈ ಬಾರಿಯ ಸೈಮಾ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ರಾಬರ್ಟ್ ಆಲ್ಬಮ್‌ನ ಕಣ್ಣು ಹೊಡಿಯಾಕ ಕನ್ನಡದಲ್ಲಿ ಭರ್ಜರಿ ಹಿಟ್ ಆಗಿತ್ತು ಹಾಗೂ ತೆಲುಗಿನ ಕಣ್ಣೇ ಅದಿರಿಂದಿ ಹಾಡು ಚಾರ್ಟ್‌ಬಸ್ಟರ್ ಆಗಿತ್ತು. ಈ ಹಾಡಿನ ಮೂಲಕ ಅರ್ಜುನ್ ಜನ್ಯಾ ಒಳ್ಳೆಯ ಪ್ರಶಂಸೆಯನ್ನು ಗಿಟ್ಟಿಸಿಕೊಂಡರು.

ಸೈಮಾ ಗೆದ್ದ ಕನ್ನಡ ಕಲಾವಿದರ ಪಟ್ಟಿ

ಸೈಮಾ ಗೆದ್ದ ಕನ್ನಡ ಕಲಾವಿದರ ಪಟ್ಟಿ

ಅತ್ಯುತ್ತಮ ಚಿತ್ರ - ಗರುಡ ಗಮನ ವೃಷಭ ವಾಹನ

ಅತ್ಯುತ್ತಮ ನಿರ್ದೇಶಕ - ತರುಣ್ ಸುಧೀರ್ (ರಾಬರ್ಟ್)

ಅತ್ಯುತ್ತಮ ಛಾಯಾಗ್ರಾಹಕ - ಸುಧಾಕರ್ ರಾಜ್ (ರಾಬರ್ಟ್)

ಅತ್ಯುತ್ತಮ ನಟ - ಪುನೀತ್ ರಾಜ್‌ಕುಮಾರ್ (ಯುವರತ್ನ)

ಅತ್ಯುತ್ತಮ ನಟಿ - ಅಮೃತ ಅಯ್ಯಂಗಾರ್ - ( ಬಡವ ರಾಸ್ಕಲ್ )

ಅತ್ಯುತ್ತಮ ಪೋಷಕ ನಟ - ಪ್ರಮೋದ್ (ರತ್ನನ್ ಪ್ರಪಂಚ)

ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ - ಆರೋಹಿ ನಾರಾಯಣ (ದೃಶ್ಯ 2)

ಅತ್ಯುತ್ತಮ ಖಳನಟ - ಪ್ರಮೋದ್ ಶೆಟ್ಟಿ (ಹೀರೊ)

ಅತ್ಯುತ್ತಮ ಹಾಸ್ಯನಟ - ಚಿಕ್ಕಣ್ಣ (ಪೊಗರು)

ಅತ್ಯುತ್ತಮ ಉದಯೋನ್ಮುಖ ನಟ - ನಾಗಭೂಷಣ ಎನ್ ಎಸ್ (ಇಕ್ಕಟ್)

ಅತ್ಯುತ್ತಮ ಉದಯೋನ್ಮುಖ ನಟಿ - ಶರಣ್ಯ ಶೆಟ್ಟಿ (1980)

ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ - ಗುರು ಶಂಕರ್ (ಬಡವ ರಾಸ್ಕಲ್)

ಅತ್ಯುತ್ತಮ ಉದಯೋನ್ಮುಖ ನಿರ್ಮಾಪಕ - ಕೆಆರ್‌ಜಿ ಸ್ಟುಡಿಯೋಸ್ (ರತ್ನನ್ ಪ್ರಪಂಚ)

ಅತ್ಯುತ್ತಮ ಸಂಗೀತ ನಿರ್ದೇಶಕ - ಅರ್ಜುನ್ ಜನ್ಯ (ರಾಬರ್ಟ್)

ಅತ್ಯುತ್ತಮ ಗೀತರಚನೆಕಾರ - ವಾಸುಕಿ ವೈಭವ್ - ನಿನ್ನ ಸನಿಹಕೆಯಿಂದ "ನಿನ್ನ ಸನಿಹಕೆ"

ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಮಾನ್ ಮಲಿಕ್, ಥಮನ್ ಎಸ್ - ಯುವರತ್ನದಿಂದ "ನೀನಾದೆ ನಾ"

ಅತ್ಯುತ್ತಮ ಹಿನ್ನೆಲೆ ಗಾಯಕಿ - ಚೈತ್ರ ಜೆ ಆಚಾರ್ - "ಸೋಜುಗದ ಸೂಜುಮಲ್ಲಿಗೆ" ಫ್ರಮ್ ಗರುಡ ಗಮನ ವೃಷಭ ವಾಹನ

More from Filmibeat

English summary
SIIMA Awards 2022: Tharun Sudhir dedicated his Best Director award to Darshan fans. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X