SIIMA 2023: ಸೈಮಾ ಸಂಭ್ರಮದಲ್ಲಿ ಕನ್ನಡ, ತೆಲುಗು ಚಿತ್ರರಂಗದ ತಾರೆಯರು, ಯಾರ‍್ಯಾರು ಇದ್ದಾರೆ ಗೊತ್ತೆ?

ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಅವಾರ್ಡ್ಸ್ (SIIMA) ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ಕಾರ್ಯಕ್ರಮ ಈ ಬಾರಿ ದುಬೈನಲ್ಲಿ ನಡೆಯುತ್ತಿದೆ. ಎರಡು ದಿನಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸಿನಿರಂಗಗಳ ತಾರೆಯರಿಗೆ ಪ್ರಮುಖವಾದ್ದದು.

ಈ ಬಾರಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ದುಬೈ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆಯಲಿದೆ. ಮೊದಲನೆ ದಿನ ತೆಲುಗು ಮತ್ತು ಕನ್ನಡ ಚಲನಚಿತ್ರಗಳು, ನಟರು ಮತ್ತು ತಂತ್ರಜ್ಞರಿಗೆ ಪ್ರಶಸ್ತಿ ನೀಡಲಿದೆ. ಈಗಾಗಲೇ ದುಬೈನಲ್ಲಿ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ ನಟ ನಟಿಯರು ಮೊಕ್ಕಾಂ ಹೂಡಿದ್ದಾರೆ.

SIIMA Awards 2023: Rakshith Shetty, Rishab Shetty, Mrunal Thakur and other stars arrive in Dubai

'ರಕ್ಷಿತ್, ರಿಷಬ್ ಶೆಟ್ಟಿ ಇನ್ ದುಬೈ'

ಈಗಾಗಲೇ ನಟ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ದುಬೈ ತಲುಪಿದ್ದಾರೆ. ಕನ್ನಡ ಉತ್ತಮ ಚಿತ್ರಗಳಲ್ಲಿ ಯಶ್ ಅವರ ಕೆಜಿಎಫ್ ಅಧ್ಯಾಯ 2, ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಮತ್ತು ರಿಷಬ್ ಶೆಟ್ಟಿ ಅವರ ಕಾಂತಾರ ಪ್ರಮುಖ ಸ್ಪರ್ಧಿಗಳಾಗಿವೆ. ಇನ್ನೇನು ಫಲಿತಾಂಶ ಪ್ರಕಟವಾಗಲಿದ್ದು, ಕಿರೀಟ ಯಾರ ಪಾಲು ಎಂಬುದು ತಿಳಿಯಲಿದೆ.

ಇನ್ನು, ಸೀತಾ ರಾಮಂ ನಿಂದ ಜನರ ಮನಕದ್ದಿರುವ ಚೆಲುವೆ ಮೃಣಾಲ್ ಠಾಕೂರ್, ಮೃಣಾಲ್ ಠಾಕೂರ್ ಅವರ ತೆಲುಗು ಚಿತ್ರ ಸೀತಾ ರಾಮಂ ಸೈಮಾದಲ್ಲಿ ಹಲವು ಪ್ರಶಸ್ತಿಗಳಿಗೆ ನಾಮಿನೇಟ್ ಆಗಿದೆ. ಇದರ ಜೊತೆಗೆ ಅವರು ಪ್ರಶಸ್ತಿ ಸಮಾರಂಭದಲ್ಲಿ ಪ್ರದರ್ಶನ ನೀಡುತ್ತಾರೆ. ಸೀತಾ ರಾಮಂನ "ಕಾನುನ್ನ ಕಲ್ಯಾಣಂ" ಹಾಡು ಮತ್ತು ಜೈಲರ್ ಚಲನಚಿತ್ರದ ತಮನ್ನಾ ಭಾಟಿಯಾ ಅವರ ಜನಪ್ರಿಯ ತಮಿಳು ಹಾಡು 'ಕಾವಾಲಾ'ಕ್ಕೆ ಸೊಂಟ ಬಳುಕಿಸಲಿದ್ದಾರೆ.

ನಟರಾದ ಜೂನಿಯರ್ ಎನ್‌ಟಿಆರ್, ರಾಣಾ ದಗ್ಗುಬಾಟಿ, ಪ್ರಣಿತಾ ಸುಭಾಷ್, ಲಕ್ಷ್ಮಿ ಮಂಚು, ಕನ್ನಡತಿ ಶ್ರೀಲೀಲಾ, ಅದಿವಿ ಶೇಶ್, ಮುಖೇಶ್ ಛಾಬ್ರಾ ಮತ್ತು ಶೆರ್ಲಿ ಸೆಟಿಯಾ ಅವರು ದುಬೈಗೆ ಬಂದಿಳಿದಿದ್ದಾರೆ. ಇದರಲ್ಲಿ ಹಲವರು ಗುರುವಾರವೇ ಕಾರ್ಯಕ್ರಮದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.

SIIMA Awards 2023: Rakshith Shetty, Rishab Shetty, Mrunal Thakur and other stars arrive in Dubai

ವಿಕ್ರಮ್ ನಿರ್ದೇಶಕ ಲೋಕೇಶ್ ಕನಕರಾಜ್ ಮತ್ತು ಮಲಯಾಳಂ ನಟ ಕಲ್ಯಾಣಿ ಪ್ರಿಯದರ್ಶನ್ ಅವರು ಸೈಮಾ ಸಂಭ್ರಮಕ್ಕೆ ಶುಕ್ರವಾರ ದುಬೈಗೆ ಆಗಮಿಸಿದ್ದಾರೆ. ಲೋಕೇಶ್ ಕನಕರಾಜ್ ಅವರ ವಿಕ್ರಮ್ ಸಿನಿಮಾ ಹಲವಾರು ಪ್ರಶಸ್ತಿಗಳಿಗೆ ನಾಮನಿರ್ದೇಶನವಾಗಿದೆ. ತಮಿಳು ನಟ ಸತೀಶ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ತಮಿಳು ವಿಭಾಗವನ್ನು ಹೋಸ್ಟ್ ಮಾಡಲಿದ್ದಾರೆ.

ತಮಿಳಿನಲ್ಲಿ, ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ 2, ಕಮಲ್ ಹಾಸನ್ ಅಭಿನಯದ ವಿಕ್ರಮ್ ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸಲಿವೆ. ಕನ್ನಡದಲ್ಲಿ ಕೆಜಿಎಫ್ ಅಧ್ಯಾಯ 2, ರಕ್ಷಿತ್ ಶೆಟ್ಟಿ ಅವರ ಚಾರ್ಲಿ 777 ಪ್ರಮುಖ ಸ್ಪರ್ಧಿಗಳಾಗಿದ್ದರೆ, ಮಲಯಾಳಂನಲ್ಲಿ, ಭೀಷ್ಮ ಪರ್ವಂ, ಜನ ಗಣ ಮನ, ಹೃದಯಂ ಹಲವು ನಾಮನಿರ್ದೇಶನಗಳನ್ನು ಪಡೆದಿವೆ.

ಈ ವರ್ಷದ ಅತ್ಯುತ್ತಮ ನಟರ ಪಟ್ಟಿಯಲ್ಲಿ ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಜೊತೆಗೆ ನಿಖಿಲ್, ಅಡಿವಿ ಶೇಷ್, ದುಲ್ಕರ್ ಸಲ್ಮಾನ್ ಮತ್ತು ಸಿದ್ದು ಜೊನ್ನಲಗಡ್ಡ ಕೂಡ ಈ ಪಟ್ಟಿಯಲ್ಲಿದ್ದಾರೆ. ತಮಿಳಿನಲ್ಲಿ ಧನುಷ್, ಆರ್ ಮಾಧವನ್, ಕಮಲ್ ಹಾಸನ್, ಎಸ್‌ಟಿಆರ್ ಮತ್ತು ವಿಕ್ರಮ್ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

SIIMA Awards 2023: Rakshith Shetty, Rishab Shetty, Mrunal Thakur and other stars arrive in Dubai

ಕನ್ನಡ ಮತ್ತು ಮಲಯಾಳಂನಲ್ಲಿ ಮಮ್ಮುಟ್ಟಿ, ಪೃಥ್ವಿರಾಜ್ ಸುಕುಮಾರನ್, ರಕ್ಷಿತ್ ಶೆಟ್ಟಿ ಮುಂತಾದ ಹೆಸರುಗಳು ನಟನಾ ವಿಭಾಗದಲ್ಲಿ ಸ್ಪರ್ಧಿಸುತ್ತಿವೆ. ವಿಶೇಷವೆಂದರೇ ಜೇಮ್ಸ್ ಚಿತ್ರದ ಪಾತ್ರಕ್ಕಾಗಿ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ.

More from Filmibeat

English summary
SIIMA Awards 2023: Rakshith Shetty, Rishab Shetty, Mrunal Thakur and other stars arrive in Dubai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X