SIIMA 2025: 'ಗೌರಿ' ಚಿತ್ರಕ್ಕಾಗಿ ಸಮರ್ಜಿತ್ ಲಂಕೇಶ್‌ಗೆ ಸೈಮಾ ಪ್ರಶಸ್ತಿ

By ಫಿಲ್ಮಿಬೀಟ್ ಡೆಸ್ಕ್

ಇತ್ತೀಚೆಗೆ ದುಬೈನಲ್ಲಿ 2025ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ನಡೆದಿತ್ತು. ದಕ್ಷಿಣ ಭಾರತದ ಪ್ರಮುಖ ಚಿತ್ರರಂಗದ ತಾರೆಯರನ್ನು ಕರೆಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಸ್ಟಾರ್‌ಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರತಿ ವರ್ಷದಂತೆ ಬೇರೆ ಬೇರೆ ಕ್ಯಾಟಗರಿಯಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ ಕೊಟ್ಟವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಗುತ್ತೆ. ಪ್ರತಿಯೊಂದು ಚಿತ್ರರಂಗದಲ್ಲೂ ಮೊದಲ ಸಿನಿಮಾದಲ್ಲಿಯೇ ಜನರ ಮನಗೆದ್ದ ನಟನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. 2025ನೇ ಸಾಲಿನ ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಅವರು ಪಡೆದುಕೊಂಡಿದ್ದಾರೆ.

SIIMA Awards 2025 Indrajith Lankesh s Son Samarjith Lankesh Wins His First SIIMA Award

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟ ಸಮರ್ಜಿತ್ ಲಂಕೇಶ್ ವೃತ್ತಿ ಜೀವನಕ್ಕೆ ಮತ್ತೊಂದು ಗರಿ ಸೇರಿಕೊಂಡಿದೆ. ಸಮರ್ಜಿತ್ ನಟಿಸಿದ ಚೊಚ್ಚಲ ಸಿನಿಮಾ 'ಗೌರಿ'ಗಾಗಿ ಈ ಪ್ರಶಸ್ತಿ ಲಭಿಸಿದೆ. ಸಮರ್ಜಿತ್‌ ಸತತವಾಗಿ ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸುವ ಮೂಲಕ ಅವರು ಭಾರತೀಯ ಚಿತ್ರರಂಗದ ಭರವಸೆಯ ಹೊಸ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ. ಈ ಮೂಲಕ ಸಿನಿಮಾರಂಗದಲ್ಲಿ ಅದ್ಭುತ ನಟನಾಗಿ ಬೆಳೆಯಬಹುದೆಂಬ ಭರವಸೆಯನ್ನೂ ನೀಡಿದ್ದಾರೆ.

2025ನೇ ಸಾಲಿನ ಸೈಮಾ ಪ್ರಶಸ್ತಿ ಇತ್ತೀಚೆಗೆ ದುಬೈನಲ್ಲಿ ಅದ್ಧೂರಿಯಾಗಿ ನಡೆದಿದೆ. 13ನೇ ದಕ್ಷಿಣ ಭಾರತ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಸಮಾರಂಭದಲ್ಲಿ, ಸಮರ್ಜಿತ್ ಲಂಕೇಶ್ ನಟಿಸಿದ ಚೊಚ್ಚಲ ಸಿನಿಮಾ 'ಗೌರಿ'ಯ ಅದ್ಭುತ ನಟನೆಗಾಗಿ ಅತ್ಯುತ್ತಮ ಚೊಚ್ಚಲ ನಟ (ಕನ್ನಡ) ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಭರವಸೆಯ ಹೆಜ್ಜೆ ಇಡುವ ಸೂಚನೆಯನ್ನು ನೀಡಿದ್ದಾರೆ.

'ಗೌರಿ' ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಸೈಲಿಶ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡಿದ್ದರು. ತಮ್ಮ ಪುತ್ರನನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸುವ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದರು. ಸ್ಟೈಲಿಶ್ ಸಿನಿಮಾಗಳನ್ನು ನಿರ್ದೇಶನ ಮಾಡುವ ಇಂದ್ರಜಿತ್ ಲಂಕೇಶ್ ಅವರು ತಮ್ಮ ಪುತ್ರ ಸಮರ್ಜಿತ್ ಅವರನ್ನು ಅಷ್ಟೇ ಸ್ಟೈಲಿಶ್‌ ಆಗಿ ತೆರೆಮೇಲೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು.

ಬಾಲಿವುಡ್‌ ನಟರಿಗೆ ಪೈಪೋಟಿ ನೀಡುವಂತೆ ಸಮರ್ಜಿತ್ ಅವರನ್ನು ಇಂದ್ರಜಿತ್ ಲಂಕೇಶ್ ಮಾಡಿದ್ದಾರೆ. ಸಂಪೂರ್ಣವಾಗಿ ತಯಾರಿಯನ್ನು ಪಡೆದುಕೊಂಡೇ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ಪ್ರಾಜೆಕ್ಟ್‌ಗಳ ಒಪ್ಪಿಕೊಂಡು ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಸಿನಿಮಾ ಮಂದಿ ಇದ್ದಾರೆ. ಒಂದೇ ಸಿನಿಮಾ ಮೂಲಕ ಪರಭಾಷೆಯ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

ಸಮರ್ಜಿತ್ ಲಂಕೇಶ್‌ಗೆ ಸೈಮಾ ಪ್ರಶಸ್ತಿಯ ಜೊತೆ ಮತ್ತೊಂದು ಪ್ರತಿಷ್ಠಿತ ಅವಾರ್ಡ್ ಕೂಡ ಲಭಿಸಿದೆ. ಅತ್ಯುತ್ತಮ ಉದಯೋನ್ಮುಖ ನಟನಾಗಿ ಲುಮಿಯರ್ ರಾಷ್ಟ್ರೀಯ ಪ್ರಶಸ್ತಿಯನ್ನೂ ಸಹ ನೀಡಿ ಇವರನ್ನು ಗೌರವಿಸಲಾಗಿದೆ. ಈ ಎರಡು ಪ್ರಶಸ್ತಿಗಳು ಭಾರತೀಯ ಚಿತ್ರರಂಗಕ್ಕೆ ಜಬರ್ಧಸ್ತ್ ಎಂಟ್ರಿ ಕೊಟ್ಟು ಇಲ್ಲಿ ಪ್ರಮುಖ ನಟರಾಗಿ ಬೆಳೆಯುವ ಸಾಮರ್ಥ್ಯವನ್ನು ತೋರಿಸಿದ್ದಾರೆ. ಈ ಎರಡೂ ಗೌರವಗಳು ಕನ್ನಡ ಚಿತ್ರರಂಗದ ಭವಿಷ್ಯವನ್ನು ರೂಪಿಸುತ್ತಿರುವ ಯುವ ನಟರ ಅಲೆಯನ್ನೇ ಎತ್ತಿ ತೋರಿಸುತ್ತಿವೆ. ಜೊತೆಗೆ, ಮುಂಬರುವ ವರ್ಷಗಳಲ್ಲಿ ಸಮರ್ಜಿತ್ ಲಂಕೇಶ್ ಅವರು ಕನ್ನಡ ಮತ್ತು ಭಾರತೀಯ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಭರವಸೆಯನ್ನು ಮೂಡಿಸಿದ್ದಾರೆ.

More from Filmibeat

English summary
SIIMA Awards 2025: Filmmaker Indrajith Lankesh’s son Samarjith Lankesh bagged his first SIIMA Award.
Read more about: award kannada movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X