For Quick Alerts
  ALLOW NOTIFICATIONS  
  For Daily Alerts

  ಸಿಲ್ಕ್ ಖ್ಯಾತಿಯ ಶೋಕಿಲಾಲ ಅಕ್ಷಯ್ 'ಚಿಲ್ರೆಶೋಕಿ'ಗಳು

  By Rajendra
  |

  'ಪ್ರಪಂಚದಲ್ಲಿ ಹೆತ್ತವರಿಗಿಂತ ದೊಡ್ಡದು ಯಾವುದೂ ಇಲ್ಲ' ಎನ್ನೋ ಮಾತಿದೆ. ಈಗಿನ ಕಾಲದ ಹುಡುಗರು ಇಲ್ಲಸಲ್ಲದ ಶೋಕಿ ಮಾಡುವ ಭರದಲ್ಲಿ ಜನ್ಮದಾತರನ್ನು ಮರೆಯುತ್ತಾರೆ. ತಮ್ಮ ತಪ್ಪಿನ ಅರಿವಾಗುವ ವೇಳೆಗೆ ಸಮಯ ಮೀರಿರುತ್ತದೆ. ಶೋಕಿಗಿಂತ ಪ್ರೀತೀನೇ ದೊಡ್ಡದು ಎನ್ನುವ ಎಳೆಯೊಂದನ್ನಿಟ್ಟುಕೊಂಡು ಯುವ ನಿರ್ದೇಶಕ ಜಾನ್‍ಪದ 'ಚಿಲ್ರೆ ಶೋಕಿ' ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

  ಎಸ್. ನಾರಾಯಣ್, ಶ್ರೀನಿವಾಸ್ ಕೌಶಿಕ್, ಜಿಮ, ಮೂರ್ತಿ ಸೇರಿ ಹಲವಾರು ನಿರ್ದೇಶಕರ ಬಳಿ ಕೆಲಸ ಮಾಡಿರುವ ಜಾನ್‍ಪದ ನಿರ್ದೇಶನದ ಮೊದಲ ಚಿತ್ರವಿದು. ಕಂಠೀರವ ಸ್ಟುಡಿಯೋ ಅಲ್ಲದೆ ಬೆಂಗಳೂರು, ಮಂಗಳೂರು, ಸೋಮೇಶ್ವರ ಬೀಚ್, ಹಾಗೂ ಮುಲ್ಕಿ ಸುತ್ತಮುತ್ತ 30 ದಿನಗಳ ಕಾಲ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. [ಚಿತ್ರ ವಿಮರ್ಶೆ : ಸಿಲ್ಕ್ ಸಖತ್ ಹಾಟ್ ಪ್ರೇಕ್ಷಕರು ಫ್ಲ್ಯಾಟ್]

  ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿದಿದ್ದು ಚಿತ್ರದ ಪ್ರಥಮ ಪ್ರತಿ ಕೂಡಾ ಹೊರಬಂದಿದೆ. ಲವ್, ಸೆಂಟಿಮೆಂಟ್ ಹಾಗೂ ಆಕ್ಷನ್, ಕಾಮಿಡಿ ಸೇರಿದಂತೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನೊಳಗೊಂಡ ಈ ಚಿತಗ್ರಕ್ಕೆ ನಿರ್ದೇಶಕ ಜಾನ್‍ಪದ ಅವರೇ ಚಿತ್ರಕತೆ, ಸಂಭಾಷಣೆ ರಚಿಸಿದ್ದಾರೆ.

  ಶ್ರೀ ನಿಮಿಷಾಂಭ ಕಮ್ಯುನಿಕೇಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಕಿರಣ್ ಡ್ಯಾನಿಯಲ್ ಸಂಗೀತ, ಮಂಜು ಭಗಾಡೆ ಕಥೆ, ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸ, ಜಗದೀಶ ಸಂಕಲನ, ಪ್ರಸಾದ್ ನೃತ್ಯ ನಿರ್ದೇಶನ, ಜಿ. ಮೂರ್ತಿ ಕಲಾನಿರ್ದೇಶನವಿದೆ.

  ಸಿಲ್ಕ್ ಸಖತ್ ಹಾಟ್ ಚಿತ್ರದ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟಿದ್ದ ಅಕ್ಷಯ್ ನಾಯಕ ನಟನಾಗಿರುವ ಸಂಜನ ಪ್ರಕಾಶ್, ಮದನ್, ಅವಿನಾಶ್, ಸತ್ಯಜಿತ್, ಸಂಗೀತ, ಯತಿರಾಜ್, ಎಂ.ಆರ್. ರಘುವೀರ್, ಗಣೇಶ್ ರಾವ್, ಅಶ್ವಿನ್, ರೋಹಿತ್, ಪ್ರಜ್ವಲ್ ತಾರಾಬಳಗದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

  English summary
  Silk Sakkat Hot fame Akshay after long break back to action. His latest film titled as 'Chilre Shoki'. The movie is mixture of love, comedy, action directed by Janpada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X