For Quick Alerts
  ALLOW NOTIFICATIONS  
  For Daily Alerts

  ಸಿಂಬು ಬೆಂಗಳೂರಿಗೆ ಬರ್ತಾರೆ, ಶಿವಣ್ಣನನ್ನು ಭೇಟಿ ಮಾಡ್ತಾರೆ

  By Naveen
  |

  ಸಿಂಬು ಈಗ ತಮಿಳಿನ ಒಬ್ಬ ನಟನಾಗಿ ಮಾತ್ರ ಸೀಮಿತವಾಗಿಲ್ಲ, ಅವರು ಕನ್ನಡಿಗರ ಪ್ರೀತಿ ಪಡೆದ ನಟನಾಗಿದ್ದಾರೆ. ಕಾವೇರಿ ವಿಚಾರದಲ್ಲಿ ತನ್ನ ಹೇಳಿಕೆ ಮೂಲಕ ಎಲ್ಲರಿಗೆ ಇಷ್ಟ ಆದ ಈ ನಟ ಈಗ ಬೆಂಗಳೂರಿಗೆ ಬರುತ್ತಿದ್ದಾರೆ.

  ಸಿಂಬು ಬೆಂಗಳೂರಿಗೆ ಬರುತ್ತಿರುವುದಕ್ಕೂ ಒಂದು ಕಾರಣ ಇದೆ. ಸಿಂಬು ಇತ್ತೀಚಿಗಷ್ಟೆ 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಸಿನಿಮಾದ ಒಂದು ಹಾಡು ಹಾಡಿದ್ದರು. ಇದು ಅವರ ಮೊದಲ ಕನ್ನಡ ಹಾಡಾಗಿತ್ತು. ಈ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ಇದೇ ತಿಂಗಳ 25ಕ್ಕೆ ನಡೆಯಲಿದೆ. ವಿಶೇಷ ಅಂದರೆ ಸಿಂಬು ಅವರೇ ಚಿತ್ರದ ಆಡಿಯೋ ರಿಲೀಸ್ ಮಾಡಲಿದ್ದಾರೆ.

  ಸಿಂಬು ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಧ್ರುವ ಸರ್ಜಾ ಕೂಡ ಕಾರ್ಯಕ್ರಮದ ಅತಿಥಿ ಆಗಲಿದ್ದಾರೆ. ಸಿಂಬು ಈ ಕಾರ್ಯಕ್ರಮದಲ್ಲಿ ಶಿವಣ್ಣನನ್ನು ಭೇಟಿ ಮಾಡಲಿದ್ದಾರೆ. ಇನ್ನು 'ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ' ಚಿತ್ರಕ್ಕೆ ನಟಿ ಮೇಘನಾ ರಾಜ್ ನಾಯಕಿ ಆಗಿದ್ದಾರೆ. ಅಲ್ಲದೆ ಮೇಘನಾ ನನ್ನ ಕೆರಿಯರ್ ನಲ್ಲಿ ಬಂದಿರುವ ಬೆಸ್ಟ್ ಸಿನಿಮಾ ಇದು ಅಂತ ಹೇಳಿಕೊಂಡಿದ್ದಾರೆ.

  Simbu will release Iruvudellava Bittu Iruve Bittukolluvude Jeevana movie songs

  Bilwa Creations ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣವಾಗಿದ್ದು, ದೇವರಾಜ್ ದಾವಣಗೆರೆ ಬಂಡವಾಳ ಹಾಕಿದ್ದಾರೆ. ಕಾಂತ ಕನ್ನಲಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಮೇಘನಾ ಜೊತೆಗೆ ತಿಲಕ್ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Tamil actor Simbu will release actress Meghana Raj and Tilak Shekar starring 'Iruvudellava Bittu Iruve Bittukolluvude Jeevana' movie songs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X