'ಸಿಂಹ ಗುಹೆ'ಗೆ ಬಂದ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಹೇಳಿದ್ದೇನು..?
ಗಾಂಧಿನಗರಕ್ಕೆ ಆಗಾಗ ಹೊಸಬರ ತಂಡ ಬರೋದು, ಸಿನಿಮಾ ಮಾಡೋದು ಕಾಮನ್. ಹೀಗೆ ಬರೋ ಎಷ್ಟೋ ಸಿನಿಮಾಗಳು ಯಶಸ್ಸು ಗಳಿಸುತ್ತೆ ಅಂತಾ ಹೇಳೋಕೂ ಆಗಲ್ಲ. ಯಾಕೆಂದರೆ ಈ ಸಿ ನಿ ಪ್ರಪಂಚ ಹಾಗೇ. ಒಂದ್ ರೀತಿ ಅದೃಷ್ಟದ ಆಟ ಇದ್ದಾಂಗೆ.
ಗೆದ್ದೋನು ಗೆದ್ದು.. ಬಿದ್ದೋನು ಬಿದ್ದ.. ಹಾಗಂತ ಸಿನಿಮಾ ಮಾಡೋರು ಮಾಡ್ತಾನೆ ಇರ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಅನ್ನುವಂತೆ ತಮ್ಮ ಚಿತ್ರಕ್ಕೆ ಸಿಂಹ ಗುಹೆ ಎಂದು ಹೆಸರನ್ನಿಟ್ಟಿರುವ ಇಲ್ಲೊಂದು ತಂಡ ತಮ್ಮ ಚಿತ್ರದ ಆಡಿಯೋವನ್ನ ಬಿಡುಗಡೆ ಮಾಡಿದೆ

ಸಿಂಹಗುಹೆ ಹೆಸರೇ ಹೇಳುವಂರೆ ಸಾಹಸಿಂಹ ಡಾ.ವಿಷ್ಣುವರ್ಧನ್ ನೆರಳಿನಲ್ಲಿ ತಯಾರಾಗಿರುವ ಸಿನಿಮಾ ಇದು. ಈ ಕಾರಣಕ್ಕೆ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಡಾ,ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದರು. ಚಿತ್ರತಂಡಕ್ಕೆ ಶುಭ ಕೋರಿದರು
ಈ ಗೀತೆಯನ್ನು ನೋಡಿ ಬಹಳ ಖುಷಿ ಆಯಿತು. ವಿಷ್ಣುವರ್ಧನ್ ಅವರ ಮೇಲೆ ಚಿತ್ರತಂಡದವರು ಹೊಂದಿರುವ ಅಭಿಮಾನದಿಂದ ನಾನು ಈ ಹೊಸ ತಂಡದವರಿಗೆ ಹಾರೈಸಲು ಬಂದಿದ್ದೇನೆ. ಹಾಡಿನ ಶೂಟಿಂಗ್ ಸ್ಥಳ ತುಂಬ ಚೆನ್ನಾಗಿದೆ. ಚಿತ್ರೀಕರಣದ ಶೈಲಿ ಬಹಳ ಚೆನ್ನಾಗಿದೆ. ಸಿಂಹ ಗುಹೆ ಚಿತ್ರ ನೋಡಲು ನಾನು ಬರುತ್ತೇನೆ. ಈ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಅನ್ನುವುದು ಅನಿರುದ್ದ್ ಜತ್ಕರ್ ಮಾತು

ಇಲ್ಲಿ ನಾಯಕ ವಿಷ್ಣುವರ್ಧನ್ ಅವರ ಅಭಿಮಾನಿ. ಜಾಗರಹಳ್ಳಿ ಎಂಬ ಊರು, ಸಿಂಹ ಗುಹೆ ಎಂಬ ಮನೆಯ ಸುತ್ತ ಮುತ್ತ ಮರ್ಡರ್ ಮಿಸ್ಟ್ರೀ ಕಥೆಯನ್ನ ಹೆಣೆದು ಎಸ್‌ಜಿಆರ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಈ ಹಿಂದೆ ಸಮರ್ಥ, ತಾಜಾ ಎಂಬ ಚಿತ್ರಗಳನ್ನ ನಿರ್ದೇಶಿಸಿದ ಖ್ಯಾತಿ ಇವರದ್ದು.
ರವಿ ಶಿರೂರ್ ಚಿತ್ರದ ನಾಯಕ. ಅಷ್ಟೇ ಅಲ್ಲ ನಿರ್ಮಾಣ ಕೂಡ ಇವರದ್ದೇ. ಹಳ್ಳಿಯಲ್ಲಿ ನಡೆಯುವ ಕೊಲೆ, ಟ್ಯಾಂಕರ್ ಓಡಿಸುವ ಹುಡುಗನ ಬದುಕಿನಲ್ಲಿ ಏನೆಲ್ಲ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತೆ ಅನ್ನುವುದಕ್ಕೆ ಚಿತ್ರದಲ್ಲಿ ಉದಾಹರಣೆ ಇವರು. ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಮೂಲಕ ಗಮನ ಸೆಳೆದ ನಿವಿಶ್ಕಾ ಪಾಟೀಲ್ ಈ ಚಿತ್ರದ ನಾಯಕಿ. ಅನುರಾಧಾ ಚಿತ್ರದ ಮತ್ತೊಬ್ಬ ನಾಯಕಿ
ಸತೀಶ್ ಆರ್ಯನ್ ಚಿತ್ರದ ಸಂಗೀತ ನಿರ್ದೇಶಕ.ಶಿವನಂಜೇಗೌಡ ಚಿತ್ರದ ಸಾಹಿತಿ. ಉಳಿದಂತೆ ಚಿತ್ರದ ಆಡಿಯೋ ಸದ್ಯ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಸಿಂಹ ಗುಹೆಗೆ ಹೋಗುವ ಕಾಲ ಶೀಘ್ರದಲ್ಲಿಯೇ ಕೂಡಿ ಬರಲಿದೆ


Click it and Unblock the Notifications











