ವಸಿಷ್ಠ ಸಿಂಹ-ಹರಿಪ್ರಿಯಾ ಮನೆಗೆ ಬಂದ ಹೊಸ ಅತಿಥಿ ; ಬೆಲೆ ಎಷ್ಟು ? ವಿಶೇಷತೆಗಳೇನು ?

ಚಿಕ್ಕ ಪುಟ್ಟ ಕನಸುಗಳು ನನಸು ಆದಾಗ ಸಿಕ್ಕಾಪಟ್ಟೆ ಖುಷಿಯಾಗುತ್ತೆ. ಅಂತದ್ದರಲ್ಲಿ ಕಂಡಿದ್ದ ಬಹುದೊಡ್ಡ ಕನಸು ಒಂದು ನನಸಾದಾಗ ಆಗುವ ಸಂಭ್ರಮವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ. ಕನ್ನಡ ಚಿತ್ರರಂಗದ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹಗೆ ಮತ್ತೊಮ್ಮೆ ಸದ್ಯಕ್ಕೆ ಇಂತಹದ್ದೇ ಅನುಭವ ಆಗಿದೆ.

ಹೌದು.. ವಸಿಷ್ಠ ಸಿಂಹ ತಮ್ಮ ಬಹುಕಾಲದ ಮತ್ತೊಂದು ಕನಸನ್ನು ನನಸು ಮಾಡಿಕೊಂಡಿದ್ದಾರೆ. ಟೊಯೊಟಾ ಇನ್ನೊವಾ ಹೈಕ್ರಾಸ್ ಕಾರನ್ನು ಖರೀದಿ ಮಾಡಿದ್ದಾರೆ. ತಮ್ಮ ಗೆಳತಿ.. ಹೃದಯದ ಒಡತಿ.. ಹರಿಪ್ರಿಯಾ ಮತ್ತು ತಮ್ಮ ಮುದ್ದಾದ ಮಗು ಜೊತೆ ಸಂಭ್ರಮಿಸಿದ್ದಾರೆ.

Simha s New Milestone Haripriya amp amp Vasishta Welcome the Toyota Innova Hycross for Ultimate Comfort

ಹೈಬ್ರೀಡ್ ಎಂಜಿನ್ ಮತ್ತು ಅತ್ಯುತ್ತಮ ಮೈಲೇಜ್ ಹೊಂದಿರುವ ಈ ಇನ್ನೋವಾ ಕಾರಿನ ಬೆಲೆ ಅಂದಾಜು 24 ಲಕ್ಷದಿಂದ 40 ಲಕ್ಷದವರೆಗೆ ಇದೆ. 2.0 ಲೀಟರ್ ಪೆಟ್ರೋಲ್ ಮತ್ತು ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರುವ ಈ ಕಾರಿನ ಹೈಬ್ರಿಡ್ ಎಂಜಿನ್ ಪ್ರತಿ ಲೀಟರ್‌ಗೆ ಸುಮಾರು 23.24 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಕಾರಿನ ಮುಂಭಾಗದಲ್ಲಿ ವೆಂಟಿಲೇಟೆಡ್ ಸೀಟ್‌ಗಳಿದ್ದು ಹಿಂದೆ ಒಟ್ಟೋಮನ್ ಸೀಟ್‌ಗಳಿವೆ. ಪ್ರಯಾಣದ ಸಮಯದಲ್ಲಿ ಕಾಲು ಚಾಚಿ ಆರಾಮವಾಗಿ ಕುಳಿತುಕೊಳ್ಳಬಹುದು.

ಇನ್ನೂ ಈ ಕಾರಿನ ವಿಚಾರದಲ್ಲಿ ಸುರಕ್ಷತೆಯ ವಿಷಯದಲ್ಲಿಯೂ ಎಲ್ಲಿಯೂ ರಾಜಿ ಇಲ್ಲ. ಟೊಯೋಟಾ ಸೇಫ್ಟಿ ಸೆನ್ಸ್ (ADAS) ತಂತ್ರಜ್ಞಾನವಿದ್ದು, ಆಟೋಮ್ಯಾಟಿಕ್ ಬ್ರೇಕಿಂಗ್ ಮತ್ತು ಲೇನ್ ಕೀಪ್ ಅಸಿಸ್ಟ್ ನಂತಹ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ. ಆರು ಏರ್‌ಬ್ಯಾಗ್‌ಗಳು ಮತ್ತು 360 ಡಿಗ್ರಿ ಕ್ಯಾಮೆರಾ ಇರುವುದರಿಂದ ಕುಟುಂಬದ ಸುರಕ್ಷತೆಗೆ ಯಾವುದೇ ಅಡ್ಡಿಯಿಲ್ಲ.

10.1 ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿರುವ ಈ ಕಾರಿನಲ್ಲಿ JBL ಪ್ರೀಮಿಯಂ 9-ಸ್ಪೀಕರ್ ಆಡಿಯೋ ಸಿಸ್ಟಮ್ ಇದೆ. ಇಷ್ಟೇ ಅಲ್ಲ ವೈರ್‌ಲೆಸ್ ಚಾರ್ಜಿಂಗ್ ಮತ್ತು ಮೊಬೈಲ್ ಕನೆಕ್ಟಿವಿಟಿ ಸೌಲಭ್ಯ ಕೂಡ ಈ ಕಾರಿನಲ್ಲಿದೆ.

Simha s New Milestone Haripriya amp amp Vasishta Welcome the Toyota Innova Hycross for Ultimate Comfort

ಸದ್ಯ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಖರೀದಿ ಮಾಡಿರುವ ಈ ಹೊಸ ಕಾರಿನ ವಿಡಿಯೋವನ್ನು ಟೊಯೊಟಾ ಕಂಪನಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಸಿಂಹಪ್ರಿಯಾ ಜೋಡಿಗೆ ಶುಭಾಶಯವನ್ನು ತಿಳಿಸಿದೆ. ವಸಿಷ್ಠ ಮತ್ತು ಹರಿಪ್ರಿಯಾ ಕೂಡ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅಂದ್ಹಾಗೇ ಎರಡು ವರ್ಷದ ಹಿಂದೆ ಏಪ್ರಿಲ್‌ನಲ್ಲಿ ಸಿಂಹಪ್ರಿಯಾ ಜೋಡಿ ಮರ್ಸಿಡಿಸ್ ಬೆಂಝ್ ನಿರ್ಮಾಣದ ಜಿಎಲ್ಇ 450ಡಿ ಕಾರನ್ನು ಖರೀದಿಸಿತ್ತು. 4926 ಎಂಎಂ ಉದ್ದಳತೆ ಮತ್ತು 2995 ಎಂಎಂ ವ್ಹೀಲ್ ಬೆಸ್ ನೊಂದಿಗೆ ವಿಶಾಲವಾದ ಕ್ಯಾಬಿನ್ ಮತ್ತು 630 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಹೊಂದಿರುವ ಜಿಎಲ್ಇ ಎಸ್ ಯುವಿ ಮಾದರಿಯು ಮರ್ಸಿಡಿಸ್ ಬೆಂಝ್ ಎಸ್ ಯುವಿ ಮಾದರಿಗಳಲ್ಲೇ ಅತಿ ಹೆಚ್ಚು ಬೇಡಿಕೆಯಲ್ಲಿರುವ ಆವೃತ್ತಿಯಾಗಿತ್ತು ಎನ್ನುವುದು ವಿಶೇಷವಾಗಿತ್ತು.

ಇದೀಗ ಎರಡು ವರ್ಷದ ನಂತರ ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರನ್ನು ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಖರೀದಿ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನ ಈ ಸಂಭ್ರಮವನ್ನ ಕಂಡು ಅಭಿಮಾನಿಗಳು ಕೂಡ ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾಗೆ ಶುಭಾಶಯವನ್ನೂ ಕೋರುತ್ತಿದ್ದಾರೆ. ಸದ್ಯ ಸಿಂಹಪ್ರಿಯಾ ಖರೀದಿಸಿದ ಹೊಸ ಕಾರಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಇನ್ನುಳಿದಂತೆ ವಸಿಷ್ಠ ಸಿಂಹ ಸದ್ಯ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ವಸಿಷ್ಠ ಅವರಿಗೆ ಅವಕಾಶಗಳು ಅರಸಿಕೊಂಡು ಬರುತ್ತಿವೆ. ಹರಿಪ್ರಿಯಾ ಸದ್ಯ ಮನೆ-ಗಂಡ ಎಂದು ಬ್ಯುಸಿಯಾಗಿದ್ದಾರೆ. ಮಗುವಿನ ಲಾಲನೆ-ಪಾಲನೆಯತ್ತ ಗಮನ ವಹಿಸಿದ್ದಾರೆ.

More from Filmibeat

English summary
Sandalwood’s favorite couple Haripriya and Vasishta Simha just added a new beast to their garage! See the first photos of their new Toyota Innova Hycross and why they chose this ride for ultimate comfort.
Read more about: vasishta simha car filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X